ಕಲಬುರಗಿ: ಇಂದು ಸಾಮಾಜಿಕ ಜಾಲತಾಣ ಸಮಾಜದ ಮುಖ್ಯ ಅಂಗವಾಗಿದ್ದು, ಜಾತಿ, ಮತ, ಬಡವ, ಶ್ರೀಮಂತ, ಹಿರಿಯ, ಕಿರಿಯ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಬಳಸುವಂಥ ಮತ್ತು ನಂಬುವಂಥ ಮಾಧ್ಯಮವಾಗಿಬಿಟ್ಟಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಹೇಳಿದರು.
ವಿಶ್ವಜ್ಯೋತಿ ಪ್ರತಿಷ್ಠಾನ ನಗರದ ಬಸವೇಶ್ವರ ಪುತ್ಥಳಿ ಬಳಿ ರವಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಜಾಲತಾಣದ ಬಳಕೆಯ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವವರನ್ನು ಗೌರವಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸ ಚಿಂತನೆಗಳನ್ನು ವ್ಯಕ್ತಪಡಿಸಲು ಇದೊಂದು ಒಳ್ಳೆಯ ವೇದಿಕೆಯಾಗಿದೆ ಎಂದು ಹೇಳಿದರು.
ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸಾಮಾಜಿಕ ಜಾಲತಾಣಗಳು ಸ್ನೇಹಿತರನ್ನು ಮತ್ತು ಸಂಬಂಧಿಗಳನ್ನು ಬೆಸೆಯುವಲ್ಲಿ ತುಂಬಾ ಸುಲಭವಾದ ಹಾಗೂ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳು ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ತಮ್ಮದೇ ಆದ ಕಾರ್ಯ ನಿರ್ವಹಿಸುತ್ತಿದೆ. ಸಮಯದೊಂದಿಗೆ ವೇಗವಾಗಿ ಹೆಜ್ಜೆ ಹಾಕಲು ಕಲಿಸಿಕೊಟ್ಟಿದೆ ಎಂದರು.
ಸಂಶೋಧಕ ಮುಡುಬಿ ಗುಂಡೇರಾವ ಮಾತನಾಡಿ, ದೇಶದ ಸಮಗ್ರತೆ, ಭದ್ರತೆಗೆ ವಿರುದ್ಧವಾದ ಹಾಗೂ ಯಾವುದೇ ಧರ್ಮ, ಜಾತಿ, ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳಿಸುವುದು ಅಪರಾಧವಾಗಿದೆ. ಆದ್ದರಿಂದ ಸೋಶಿಯಲ್ ಮೀಡಿಯಾವನ್ನು ಒಳ್ಳೆಯ ವಿಚಾರಕ್ಕೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವ ವಿವಿಧ ಕ್ಷೇತ್ರದ ರೂವಾರಿಗಳಾದ ಪವನಕುಮಾರ ವಳಕೇರಿ, ಮಹಾನಂದಾ ಚಾಮನಾಳಕರ್, ರಮೇಶ ಮೇಳಕುಂದಾ, ರಾಘವೇಂದ್ರ ಫರಹತಾಬಾದಕರ್, ಶಂಕರ ಗುರುನಂಜಿ, ಬಸವರಾಜ ಹೂಗಾರ ಕೋಟನೂರ, ಅರುಣರೆಡ್ಡಿ ಶಿವಪುರ, ರವೀಂದ್ರಕುಮಾರ ಭಂಟನಳ್ಳಿ, ಆರ್.ಹೆಚ್.ಪಾಟೀಲ ತೆಲಾಕುಣಿ, ಪೂರ್ಣಿಮಾ ಎಸ್.ಹೆಚ್., ಡಾ. ರಾಜಶೇಖರ ಪಾಟೀಲ ಹೆಬಳಿ, ಸುನೀಲ ಹಡಪದ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ಪ್ರಭುದೇವ ಯಳವಂತಗಿ, ಪ್ರಭವ ಪಟ್ಟಣಕರ್, ಸೋಮಶೇಖರ ನಂದಿಧ್ವಜ, ಸಂತೋಷ ಕುಡ್ಡಳ್ಳಿ, ಪ್ರಭುಲಿಂಗ ಮೂಲಗೆ, ಶರಣಬಸಪ್ಪ ನರೋಣಿ, ವಿಶ್ವನಾಥ ತೊಟ್ನಳ್ಳಿ, ವೈಶಾಲಿ ನಾಟೀಕರ್, ಪ್ರಸನ್ನ ವಾಂಜರಖೇಡೆ, ಜ್ಯೋತಿ ಕೋಟನೂರ, ವಿಜಯಲಕ್ಷ್ಮೀ ಹಿರೇಮಠ, ಪೂಜಾ ಆಲಗೂಡ, ಮಾಲಾ ದಣ್ಣೂರ, ಮಲಾ ಕಣ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…