ಬಿಸಿ ಬಿಸಿ ಸುದ್ದಿ

ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ ಆಜಾದ್

ಶಹಾಬಾದ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ ಆಜಾದ್ ಎಂದು
ಎಐಡಿವಾಯ್‌ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಎಚ್ ಹೇಳಿದರು.

ಅವರು ಚಂದ್ರಶೇಖರ ಆಜಾದ್ ಅವರ ೧೧೧೫ನೇ ಜನ್ಮ ದಿನಾಚರಣೆಯ ನಿಮಿತ್ತ ನಗರದ ರಾಮಘಡ ಆಶ್ರಯ ಕಾಲೋನಿಯ ಚಂದ್ರಶೇಖರ ಆಜಾದ್ ವೃತ್ತದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅದಕ್ಕಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿದ ವೀರ.ಕ್ರಾಂತಿಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಬೇಕು ಎಂಬುದು ಇವರ ಆಶಯದೊಂದಿಗೆ ಬ್ರಿಟಿಷರಿಗೆ ಹಗಲಿರುಳು ಸಿಂಹಸ್ವಪ್ನವಾಗಿ ಕಾಡಿದರು.ಭಾರತ ಮಾತೆಯನ್ನು ಬಂಧಮುಕ್ತಳನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದರು. ಅವರ ದೇಶದ ಮೇಲಿಟ್ಟಿರುವ ಅಭಿಮಾನ, ಪ್ರೀತಿ ಹಾಗೂ ಆದರ್ಶಗಳನ್ನು ನಾವು ಸಹ ಅಳವಡಿಸಿಕೊಂಡರೆ ದೇಶದ ಪರಿವರ್ತನೆ ನಮ್ಮಿಂದಲೇ ಪ್ರಾರಂಭವಾಗುತ್ತದೆ.ಆದ್ದರಿಂದ ಇಂತಹ ದಾರಿಯಲ್ಲಿ ನಾವು ನಡೆಯಬೇಕಿದೆ ಎಂದರು.

ಅವರು ಆಜಾದ್ ರವರ ಸಮಾಜವಾದ ಭಾರತ್ ಕನಸು ಕಂಡಿದ್ದರು. ಕ್ರಾಂತಿಕಾರಿಯ ವಿಚಾರಗಳು ಇಂದಿನ ಯುವಜನರು ತಿಳಿದುಕೊಂಡು ಇಂದಿನ ಜ್ವಲಂತಹ ಸಮಸ್ಯೆಗಳಾದ ನಿರುದ್ಯೋಗ ಬೆಲೆ ಏರಿಕೆ ವಿರುದ್ದ ಯುವಜನರು ಹೊರಾಡಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಎಐಡಿವೈಒ ಉಪಾದ್ಯಕ್ಷರಾದ ನೀಲಕಂಠ.ಎಮ್.ಹುಲಿ, ಸರಾಕಾರವು ಕ್ರಾಂತಿಕಾರಿ ವಿಷಯವನ್ನ ಪಠ್ಯಪುಸ್ತುದಿಂದ ತೆಗೆದುಹಾಕಿರುವುದಕ್ಕೆ ತೀವ್ರವಾಗಿ ವಿರೋಧಿಸಿದರು . ಸರಕಾರವು ಕ್ರಾಂತಿಕಾರಿಗಳ ಇತಿಹಾಸ ಪಠ್ಯಪುಸ್ತಕ್ತದಲ್ಲಿ ಸೇರಿಸಿ ಕ್ರಾಂತಿಕಾರಿ ಚಂದ್ರಶೇಕರ ಆಜಾದ್‌ರವರಂತಹ ದೇಶಪ್ರೇಮ ಯುವಜನರಲ್ಲಿ ಬೆಳೆಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಂiiನ್ನ ಎಐಡಿವೈಒ ಉಪಾದ್ಯಕ್ಷರಾದ ವಿಶ್ವನಾಥ ಸಿಂಘೆ ವಹಿಸಿದ್ದರು. ತೀಮ್ಮಯ್ಯ ಮಾನೆ , ಪ್ರವೀಣ ಬಣಮಿಕರ್ , ರಘು ಪವರ ,ಶ್ರೀನಿವಾಸ ಡಿ, ಕೀಶನ್ ನಾಯಕ ,ಹನುಮಂತ ಟೈಗರ್ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago