ಶಹಾಬಾದ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ ಆಜಾದ್ ಎಂದು
ಎಐಡಿವಾಯ್‌ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಎಚ್ ಹೇಳಿದರು.
ಅವರು ಚಂದ್ರಶೇಖರ ಆಜಾದ್ ಅವರ ೧೧೧೫ನೇ ಜನ್ಮ ದಿನಾಚರಣೆಯ ನಿಮಿತ್ತ ನಗರದ ರಾಮಘಡ ಆಶ್ರಯ ಕಾಲೋನಿಯ ಚಂದ್ರಶೇಖರ ಆಜಾದ್ ವೃತ್ತದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದಕ್ಕಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿದ ವೀರ.ಕ್ರಾಂತಿಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಬೇಕು ಎಂಬುದು ಇವರ ಆಶಯದೊಂದಿಗೆ ಬ್ರಿಟಿಷರಿಗೆ ಹಗಲಿರುಳು ಸಿಂಹಸ್ವಪ್ನವಾಗಿ ಕಾಡಿದರು.ಭಾರತ ಮಾತೆಯನ್ನು ಬಂಧಮುಕ್ತಳನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದರು. ಅವರ ದೇಶದ ಮೇಲಿಟ್ಟಿರುವ ಅಭಿಮಾನ, ಪ್ರೀತಿ ಹಾಗೂ ಆದರ್ಶಗಳನ್ನು ನಾವು ಸಹ ಅಳವಡಿಸಿಕೊಂಡರೆ ದೇಶದ ಪರಿವರ್ತನೆ ನಮ್ಮಿಂದಲೇ ಪ್ರಾರಂಭವಾಗುತ್ತದೆ.ಆದ್ದರಿಂದ ಇಂತಹ ದಾರಿಯಲ್ಲಿ ನಾವು ನಡೆಯಬೇಕಿದೆ ಎಂದರು.
ಅವರು ಆಜಾದ್ ರವರ ಸಮಾಜವಾದ ಭಾರತ್ ಕನಸು ಕಂಡಿದ್ದರು. ಕ್ರಾಂತಿಕಾರಿಯ ವಿಚಾರಗಳು ಇಂದಿನ ಯುವಜನರು ತಿಳಿದುಕೊಂಡು ಇಂದಿನ ಜ್ವಲಂತಹ ಸಮಸ್ಯೆಗಳಾದ ನಿರುದ್ಯೋಗ ಬೆಲೆ ಏರಿಕೆ ವಿರುದ್ದ ಯುವಜನರು ಹೊರಾಡಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಎಐಡಿವೈಒ ಉಪಾದ್ಯಕ್ಷರಾದ ನೀಲಕಂಠ.ಎಮ್.ಹುಲಿ, ಸರಾಕಾರವು ಕ್ರಾಂತಿಕಾರಿ ವಿಷಯವನ್ನ ಪಠ್ಯಪುಸ್ತುದಿಂದ ತೆಗೆದುಹಾಕಿರುವುದಕ್ಕೆ ತೀವ್ರವಾಗಿ ವಿರೋಧಿಸಿದರು . ಸರಕಾರವು ಕ್ರಾಂತಿಕಾರಿಗಳ ಇತಿಹಾಸ ಪಠ್ಯಪುಸ್ತಕ್ತದಲ್ಲಿ ಸೇರಿಸಿ ಕ್ರಾಂತಿಕಾರಿ ಚಂದ್ರಶೇಕರ ಆಜಾದ್‌ರವರಂತಹ ದೇಶಪ್ರೇಮ ಯುವಜನರಲ್ಲಿ ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಂiiನ್ನ ಎಐಡಿವೈಒ ಉಪಾದ್ಯಕ್ಷರಾದ ವಿಶ್ವನಾಥ ಸಿಂಘೆ ವಹಿಸಿದ್ದರು. ತೀಮ್ಮಯ್ಯ ಮಾನೆ , ಪ್ರವೀಣ ಬಣಮಿಕರ್ , ರಘು ಪವರ ,ಶ್ರೀನಿವಾಸ ಡಿ, ಕೀಶನ್ ನಾಯಕ ,ಹನುಮಂತ ಟೈಗರ್ ಇತರರು ಇದ್ದರು.