ಬಿಸಿ ಬಿಸಿ ಸುದ್ದಿ

ವಚನ ದರ್ಶನ ಪ್ರವಚನ ಭಾಗ: ಗೆಲುವೆನೆಂಬ ಭಾಷೆ ಭಕ್ತನದು

ಶರಣರ ವಚನಗಳು ನಮಗೆ ಶಾಶ್ವತವಾದ ಬೆಳಕನ್ನು ನೀಡುತ್ತವೆ. ಆ ಬೆಳಕಿನಲ್ಲಿ ಮುನ್ನಡೆದರೆ ನಮ್ಮ ಅಜ್ಞಾನದ ಕತ್ತಲನ್ನು ಕಳೆಯುತ್ತದೆ. ಕಾಮ, ಕೋಪ, ಲೋಭ, ಮೋಹ, ಮದ, ಮತ್ಸರ ಈ ಷಡ್‍ವಿಕಾರಗಳು ನಷ್ಟವಾಗುತ್ತವೆ. ನಾವು ವಿಷಯತ್ಯಾಗ ಮಾಡಿದಾಗ ದೇವರ ಒಲುಮೆಯಾಗುತ್ತದೆ.

ನಾವು ಮನಸ್ಸಿನಲ್ಲಿ ಸದ್‍ವಿಚಾರ, ಸದ್‍ವರ್ತನೆ ತುಂಬಿಕೊಳ್ಳಬೇಕಾದರೆ ಒಳಗಿರುವ ವಿಷಯಗಳ ತ್ಯಾಗ ಮಾಡಬೇಕಾಗುತ್ತದೆ. ಕಾರಣ: ಕೊಡದಲ್ಲಿ ನೀರು ತುಂಬಬೇಕಾದರೆ, ಕೊಡದಲ್ಲಿ ಮೊದಲೆ ಇರುವ ಗಾಳಿಯನ್ನು ಹೊರಹೋದಾಗ ಮಾತ್ರ ಒಳಗಡೆ ನೀರು ತುಂಬುತ್ತವೆ. ಹಾಗೆಯೇ ನಾವು ನಮ್ಮ ದೇಹದಲ್ಲಿ ಇರುವ ವಿಷಯಗಳ ತ್ಯಾಗ ಮಾಡಿದಾಗ ಪರಮಾತ್ಮನ ಕರುಣೆ ಆಗುತ್ತದೆ.

ವಿಷಯಗಳ ತ್ಯಾಗ ಮಾಡಬೇಕಾದರೆ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರಬೇಕು. ನಾವು ನಮ್ಮ ಬುದ್ಧಿ ಮನಸ್ಸಿನ ಕೈಯಲ್ಲಿ ಕೊಡದೆ ವಿವೇಕದ ಕೈಯಲ್ಲಿ ಕೊಡಬೇಕು. ಮನಸ್ಸು ಅದೋಮುಖವಾಗಿ ಹರಿಯುತ್ತದೆ. ಅದಕ್ಕೆ ಉಧ್ರ್ವಮುಖವಾಗಿ ಹರಿಸಬೇಕಾದರೆ ಶರಣರ ವಚನಗಳ ದರ್ಶನ ಮಾಡಿಸಬೇಕು. ಗುಡ್ಡದ ಮೇಲೆ ಕಲ್ಲು ಒಯ್ಯಲು ಕಷ್ಟ ಆದರೆ ಗುಡ್ಡದ ಮೇಲಿನ ಒಂದು ಕಲ್ಲು ಕೆಳಗೆ ಬಸಾಡಲು ಏನು ಕಷ್ಟ ಪಡಬೇಕಾಗುವುದಿಲ್ಲ.

ನೀರು ಇಳಿಮುಖವಾಗಿ ಹರಯುವುದು ಸಹಜ ಆದರೆ ಅದೇ ನೀರನ್ನು ಮೇಲೆತ್ತಲು ಬಹಳ ಕಷ್ಟಪಡಬೇಕಾಗುತ್ತದೆ. ಹಾಗೇಯೆ ನಮ್ಮ ಮನಸ್ಸು ಉಧ್ರ್ವಮುಖವಾಗಲು ವಿವೇಕಿಯಾಗಲು ಕಷ್ಟಪಡಬೇಕಾಗುತ್ತದೆ. ನಮ್ಮ ಅಕ್ಕ ಪಕ್ಕದವರ ಬೆಳವಣಿಗೆನ್ನು ನೋಡಿ ನಾವು ಹೊಟ್ಟೆ ಕಿಚ್ಚು ಪಡುವುದು ಅದು ಮನಸ್ಸಿನ ಗುಣಧರ್ಮ. ಆದರೆ ನಾವು ವಿವೇಕವಂತರಾದಾಗ ಅವರ ಬೇಳವಣಿಗೆಯಿಂದ ಆನಂದ ಪಡೆಯುತ್ತೇವೆ. ಇದುವೇ ಶರಣರು ತಮ್ಮ ವಚನದಲ್ಲಿ ಹೇಳುತ್ತಾರೆ.

ನಾವು ಬೇರೆಯವರನ್ನ ದ್ವೇಷಿಸುವ ಬದಲಾಗಿ ಪ್ರೀತಿಸಬೇಕು. ಶರಣರಿಗೆ ಎಷ್ಟೇ ಕಷ್ಟ ಬಂದರು ಅವರಿಗೆ ಎಷ್ಟೇ ತೊಂದರೆ ಕೊಟ್ಟವರಿಗು ಅವರು ದ್ವೇಷ ಮಾಡಲಿಲ್ಲ. ಕೊಂಡಿ ಮಂಚಣ್ಣ ಬಸವಣ್ಣನವರಿಗೆ ಕೊನೆಯವರೆಗು ಕಷ್ಟಕೊಟ್ಟರು ಆದರು ಬಸವಣ್ಣನವರು ಅವರನ್ನು ಪ್ರೀತಿಸಿದರು. ಕೌಶಿಕ ರಾಜ ಅಕ್ಕಮಹಾದೇವಿಯ ಮನಸ್ಸಿನ ವಿರುದ್ಧ ನಡೆದುಕೊಂಡು ಕಷ್ಟಕೊಟ್ಟನು. ಆದರು ಅಕ್ಕಮಹಾದೇವಿ ಕೌಶಿಕರಾಜನಿಗೆ ಯಾವುದೇ ಶಾಪ ಕೊಡಲಿಲ್ಲ. ಬದಲಾಗಿ ಅವನಿಗೆ ಕ್ಷಮೇ ಮಾಡಿದಳು. ಶರಣರ ಧರ್ಮ ಶಾಪ ಕೊಡುವುದಲ್ಲ, ಬದಲಾಗಿ ಎಲ್ಲರನ್ನು ಪ್ರೀತಿಸುವ ಮೂಲಕ ಪರಿವರ್ತನೆ ಮಾಡುವುದು ಆಗಿದೆ.

ಅನೇಕ ದೇವರುಗಳು ದುಷ್ಟರ ಸಂಹಾರಕ್ಕಾಗಿ ಅವತಾರವನ್ನು ತಾಳುತ್ತಾರೆ ಎಂದು ನಾವು ಕೇಳುತ್ತೇವೆ ಓದುತ್ತೇವೆ. ಇದನ್ನೆ ಬಸವಣ್ಣನವರು “ಕೊಲುವುನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು” ಎಂದು ಹೇಳುವ ಮೂಲಕ ಶರಣ ಧರ್ಮದ ಉದ್ದೇಶವನ್ನೇ ಸ್ಪಷ್ಟ ಪಡಿಸುತ್ತಾರೆ. ಶರಣರು ದುಷ್ಟರ ಸಂಹಾರ ಮಾಡದೇ ಅವರಲ್ಲಿ ಇರುವ ದುಷ್ಟತನವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ.

ಶರಣರ ವಚನದರ್ಶನದಿಂದ ನಮ್ಮಲ್ಲಿರುವ ದಿರ್ವಿಕಾರ ದುಷ್ಟತನವನ್ನು ನಾಶವಾಗಿ ನಾವು ಶರಣ ಜೀವಿಗಳಾಗುತ್ತೇವೆ.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

4 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

4 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

4 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

4 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

4 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

4 hours ago