ಪಕ್ಕಾ ಪ್ರಯೋಗಾತ್ಮಕ ತತ್ವಜ್ಞಾನವನ್ನು ಬೋಧಿಸುವುದು ಮಾತ್ರವಲ್ಲ ಅದನ್ನು ಬದುಕಿನ ಉಸಿರಾಗಿಸಿಕೊಂಡಿದ್ದ ಬಸವಾದಿ ಶರಣರು, ಬದುಕಿನ ರಕ್ಷಾ ಕವಚದಂತಿರುವ ೧)ಗುರು ೨)ಲಿಂಗ ೩) ಜಂಗಮ ೪) ಪಾದೋದಕ ೫) ಪ್ರಸಾದ ೬) ವಿಭೂತಿ ೭) ರುದ್ರಾಕ್ಷಿ ೮) ಮಂತ್ರ ಎಂಬ ಅಷ್ಠಾವರಣ ತತ್ವವನ್ನು ಹೇಳಿದ್ದಾರೆ. ಇವು ಒಂದಕ್ಕೊಂದು ಬೇರೆ ಬೇರೆ ಅನಿಸಿದರೂ ಪರಸ್ಪರ ಅವಲಂಬಿತವಾದವುಗಳು. ಮೇಲಾಗಿ ಸ್ವತಂತ್ರವಾದವುಗಳು ಕೂಡ! ತನು, ಮನ, ಶುದ್ಧಿಯಾಗಿರಬೇಕು. ಶಿವನನ್ನು ಒಲಿಸಲು ಬಂ ಈ ಕಾಯ ಸಟೆ ಅಲ್ಲ, ದಿಟ ಎಂದು ನಂಬಿದವರು ಮಾತ್ರ ಅಷ್ಟಾವರಣ ಸಂಪನ್ನರಾಗಲು ಸಾಧ್ಯ ಎಂಬುದು ಶರಣರ ಅಭಿಮತ.
ಮಂತ್ರ: ವಿಭಿನ್ನ ಆಚರಣೆ, ಭಿನ್ನ, ಭಿನ್ನ ತತ್ವಾಲೋಚನೆ ಇರುವ ಪ್ರಸ್ತುತ ಈ ಸಂದರ್ಭದಲ್ಲಿ ಅಷ್ಟಾವರಣಗಳಲ್ಲಿ ಒಂದಾದ ಮಂತ್ರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮಂತ್ರ ಬೇರೆ ಯಾರಿಂದಲೋ ಹುಟ್ಟುವುದಲ್ಲ. ಅದು ನಮ್ಮ ಶಿರಸ್ಸಿನಲ್ಲಿಯೇ ಉದಯವಾಗುತ್ತದೆ ಎಂದು ಚೆನ್ನಬಸವಣ್ಣ ಹೇಳುತ್ತಾರೆ. ಮಂತ್ರ ಎಲ್ಲ ತತ್ವಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವುದರಿಂದ ಅದು ಮಹಾ ತತ್ವ, ಮಂತ್ರರಾಜ ಎಂಬುದು ಉರಿಲಿಂಗಿ ಪೆದ್ದಿ ಹೇಳುತ್ತಾರೆ. “ಮಂತ್ರದಿಂದ ಉದಯವಾದಾತ ಚನ್ನಬಸವಣ್ಣನ ಸೋದರ ಮಾವ ಬಸವಣ್ಣ” ಎಂದು ಅಕ್ಕನಾಗಮ್ಮ ಹೇಳುತ್ತಾರೆ
ಲಿಂಗಾರ್ಚನೆ ಮಾಡುವುದೆ ಮಂತ್ರ, ಪ್ರಸಾದ ಸ್ವೀಕರಿಸುವುದೇ ಮಂತ್ರ, ಅನ್ಯ ಸತಿಯರನ್ನು ನೋಡದಿರುವುದೇ ಮಂತ್ರ, ಸತ್ಯದ ದಾರಿಯಲ್ಲಿ ಹೆಜ್ಜೆ ಹಾಕುವುದೇ ಮಂತ್ರ ಎಂದು ಶಿವಯೋಗಿ ಸಿದ್ಧರಾಮ ಹೇಳುತ್ತಾರೆ. ಮಂತ್ರದಿಂದ ಮನೋವಿಲಾಸ ಕಂಡು ಮೂರ್ತಿ ಅರಿಯಬೇಕು. ಅದನ್ನು ಅರಿತಾಗ ಮಾತ್ರ ನಿರಂಗಿಸಂಗಿಗಳಾಗಲು ಸಾಧ್ಯ ಎಂದು ನೀಲಾಂಬಿಕೆಯ ನಿಲುವು. ಹೀಗೆ ಘಟ್ಟಿವಾಳಯ್ಯ, ಆದಯ್ಯ, ಮಡಿವಾಳ ಮಾಚಿದೇವ ಸೇರಿದಂತೆ ಬಹುತೇಕ ವಚನಕಾರರು ಅಂಗವನ್ನು ಲಿಂಗವನ್ನಾಗಿ ಪರಿವರ್ತಿಸುವ, ಸಹಜವಾಗಿ ಅಳವಡಿಸಿಕೊಳ್ಳಬಹುದಾದ, ಸರಳ ತಾತ್ವಿಕ-ಸಾತ್ವಿಕ ಚಿಂತನೆಯನ್ನು ಹೇಳುತ್ತಾರೆ.
ಆದರೆ ಇಂದು ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತಾಗಿದೆ. ಮಂತ್ರದಿಂದ ಹುಟ್ಟಿದ ಧನ ಸಂಪಾದನೆ, ಆಸೆಯಿಂದಾಗಿ ಕುಮಂತ್ರ ಹೇಳುವುದೆಲ್ಲ ಕುಚೇಷ್ಟೆಗೆ ಕಾರಣವಾಗುತ್ತದೆ. ಅದು ಹೌದನ್ನು ಅಲ್ಲವಾಗಿಸುತ್ತದೆ. ಅಲ್ಲವನ್ನು ಹೌದಾಗಿಸುತ್ತದೆ. ಇದು ಮಂತ್ರಕ್ಕೆ ಮಾಡುವ ಅಪಚಾರ ಎಂಬ ಕಟು ವಾಸ್ತವವನ್ನು ಅಂಬಿಗರ ಚೌಡಯ್ಯ ತೆರೆದಿಡುತ್ತಾರೆ. ಜಡವಾಗಿರುವುದು ಮಂತ್ರವಲ್ಲ. ಘನಕ್ಕೆ ಘನವಾದ ವಸ್ತು ತಾನೆ ಮಂತ್ರ ಎಂಬುದು ಅಲ್ಲಮನ ಉವಾಚ.
ಅಜಾತನನ್ನು ಒಲಿಸದಿದ್ದರೆ ಮಂತ್ರವಲ್ಲ ಎಂಬುದನ್ನು ಹೇಳಿದ ಬಸವಾದಿ ಶರಣರು ದೇವನೊಲಿದ ಭಕ್ತನಿಗೆ ಮಂತ್ರ ಬೇಕಿಲ್ಲ. ತನುಮನ ಶುದ್ಧವಿದ್ಧವರಿಗೆ ಮಂತ್ರದ ಹಂಗಿಲ್ಲ. ನಡೆ-ನುಡಿ ಒಂದಾದವರಿಗೆ, ಸಂಸ್ಕೃತಿ-ಸಂಸ್ಕಾರ ಹೊಂದಿದವರಿಗೆ ಮಂತ್ರದ ಕೊರತೆ ಕಾಡುವುದಿಲ್ಲ ಎಂದಿದ್ದಾರೆ. ಬಸವಣ್ಣನಿಂದ ಬದುಕಿತ್ತೀ ಲೋಕ, ಬಸವನ ನಾಮಸ್ಮರಣೆಯೇ ಸಾಕು ಎಂದು ಅಲ್ಲಮ ಉದ್ಗಾರ ತೆಗೆದಿದ್ದಾನೆ. ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ, ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರದಿಂದ ಮುಕ್ತಿಗೆ ದಾರಿ. ಮನನ ಮಾಡಿದ ಮಂತ್ರ ಮಹಾ ಪದವಿ ತಂದುಕೊಡುತ್ತದೆ. ಲಿಂಗ ವಿಶ್ವಾಸದಿಂದ ಅಗಣಿತ ಫಲ ಸಿಗುತ್ತದೆ. ಮಂತ್ರ ತಿಳಿಯದೆ ಜಪಿಸುವುದು ನಿಷ್ಫಲ. ಮಾಂಸಪಿಂಡರು ಮಂತ್ರ ಪಿಂಡರಾಗುವುದು ಹೇಗೆ ಇದಕ್ಕೆ ಶರಣರಲ್ಲದೆ ಬೇರೆ ಸಾಕ್ಷಿ ಬೇಕೆ?
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…