ಸುರಪುರ: ನಗರದ ಅಂಬೇಡ್ಕರ್ ನಗರದಲ್ಲಿಯ ಮೂಲನಿವಾಸಿ ಅಂಬೇಡ್ಕರ್ ಸೇನೆ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಹುಲ್ ಹುಲಿಮನಿಯವರ ಮನೆಯಲ್ಲಿ ವರ್ಷ ವಾಸಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೌದ್ಧ ಬಿಕ್ಕುಗಳಾದ ಕರುಣಾನಂದ ಮತ್ತು ಮೆತ್ಯಾನಂದ ಬಂತೇಜಿಗಳು ಮಾತನಾಡಿ,ಜಗತ್ತಿನಲ್ಲಿ ಬೌದ್ಧ ಧರ್ಮ ಅತೀ ಪುರಾತನ ಮತ್ತು ಸಮಾಜದಲ್ಲಿ ಸಮಾನತೆ ಮತ್ತು ಶಾಂತಿಯನ್ನು ಬಿತ್ತುವ ಧರ್ಮವಾಗಿದೆ.ಬುದ್ಧನ ಶಾಂತಿ ಬೋಧನೆಯಿಂದಾಗಿಯೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಬುದ್ಧನ ಸಂದೇಶ ಪಾಲಕರನ್ನು ಮತ್ತು ಬೌದ್ಧ ಉಪಾಸಕರನ್ನು ಕಾಣಬಹುದಾಗಿದೆ.ಬೌದ್ಧನಾದವನು ಮೊದಲು ಪಂಚಶೀಲವನ್ನು ಮತ್ತು ಧಮ್ಮವನ್ನು ಅರಿತು ನಡೆಯುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧ ಬಸವಣ್ಣ ಮತ್ತು ಬಾಬಾ ಸಾಹೇಬರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲಾ ಉಪಾಸಕರು ಪಂಚಶೀಲ ಪಠಣದೊಂದಿಗೆ ಧಮ್ಮ ವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸ್ಮನಿ, ಶಿವರಾಜಕುಮಾರ ಪಾಣೆಗಾಂವ್,ಮಾಳಪ್ಪ ಕಿರದಹಳ್ಳಿ,ಪರಶುರಾಮ ಮಲ್ಲಿಬಾವಿ,ನಾಗಣ್ಣ ಕಲ್ಲದೇವನಹಳ್ಳಿ,ವೆಂಕಟೇಶ ಸುರಪುರ,ರಮೇಶ ಕಾಂಗಿ,ವೆಂಕೋಬ ದೊರೆ,ಶಿವರಾಜ ನಾಯಕ,ಪರಶು ನಾಟೇಕರ್,ವೀರಭದ್ರಪ್ಪ ತಳವಾರಗೇರಾ,ಶರಣು ತಳವಾರಗೇರ,ಚಂದಪ್ಪ ಪಂಚಮ್ ಸೇರಿ ರಾಹುಲ್ ಹುಲಿಮನಿ ಕುಟುಂಬಸ್ಥರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…