ಶಹಾಬಾದ:ಕೊಳವೆ ಬಾವಿಯನ್ನು ತೋಡಿಸುವ ಮೂಲಕ ಶಾಸಕ ಬಸವರಾಜ ಮತ್ತಿಮಡು ಅವರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಸಕುಲತಾ.ಡಿ ಹೇಳಿದರು.
ಅವರು ನಗರದ ಜೆಪಿ ಕಾಲೋನಿಯಲ್ಲಿ ಅಧಿಸೂಚಿತ ಕ್ಷೇತ್ರ ಸಮಿತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಜೆಪಿ ಕಾಲೋನಿಲ್ಲಿ ಕುಡಿಯುವ ನೀರಿನ ತೊಂದರೆಯಿದೆ.ಈ ಬಗ್ಗೆ ಶಾಸಕ ಬಸವರಾಜ ಮತ್ತಿಮಡು ಅವರ ಗಮನಕ್ಕೆ ತಂದಾಗ, ಶಾಸಕರು ಖುದ್ದಾಗಿ ಕಾಲೋನಿಗೆ ಬೇಟಿ ನೀಡಿ ಅಧಿಸೂಚಿತ ಕ್ಷೇತ್ರ ಸಮಿತಿ ಮುಖ್ಯಾಧಿಕಾರಿಗೆ ಕೊಳವೆ ಬಾವಿ ತೋಡಿಸಿ, ಸಾರ್ವಜನಿಕರಿಗೆ ನೀರಿನ ಅನುಕೂಲ ಮಾಡಿಕೊಡಲು ಹೇಳಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಸೂಚಿತ ಕ್ಷೇತ್ರ ಸಮಿತಿ ಮುಖ್ಯಾಧಿಕಾರಿ ಪೀರಶೆಟ್ಟಿ ಎರಡು ಕೊಳವೆ ಹಾಕಿದ್ದು, ಎರಡರಲ್ಲಿ ನೀರು ಬಂದಿದೆ.ಇದರಿಂದ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಶಾಸಕರು ತೋರಿದ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಇ ಶಾಂತರೆಡ್ಡಿ ದಂಡಗುಲಕರ್,ಶ್ರೀದೇವಿ, ಮೋನಿಕಾ,ಶಿಲ್ಪಾ.ಜಿ, ಸರಸ್ವತಿ.ಎನ್, ಮಾಲಾ.ಬಿ, ನಾಗುಬಾಯಿ,ಶೋಭಾ, ಕಾವೇರಿ, ಮಲ್ಲಮ್ಮಾ,ರಾಜೇಶ.ಎಸ್, ಲಕ್ಷ್ಮಿಬಾಯಿ, ಉದಯ, ರಫಿಕ್, ಯಲ್ಲಪ್ಪ, ಸಂತೋಷ ಹುಲಿ, ಲಕ್ಷ್ಮಿ ಇತರರು ಇದ್ದರು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…