ಬಿಸಿ ಬಿಸಿ ಸುದ್ದಿ

ಚಿಕ್ಕನಹಳ್ಳಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ರಚನೆ

ಸುರಪುರ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಗ್ರಾಮಶಾಖೆ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಇಂದು ದೇಶದಲ್ಲಿನ ದೀನ ದಲಿತರ ಸ್ಥಿತಿ ಅಯೋಮಯವಾಗಿದೆ.ನಮ್ಮ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ.ನಮ್ಮ ಹಕ್ಕನ್ನು ನಾವು ಪಡೆಯಲು ಸಂಘಟಿತರಾಗುವುದು ಮುಖ್ಯವಾಗಿದೆ ಎಂದರು.ಅಲ್ಲದೆ ಎಲ್ಲರು ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆಯುಳ್ಳ ಮಹಾನಾಯಕ ಧಾರವಾಹಿಯನ್ನು ನೋಡುತ್ತಿದ್ದೇವೆ.ಅವರು ನಮಗಾಗಿ ಪಟ್ಟಿರುವ ಕಷ್ಟವನ್ನು ಎಲ್ಲರು ನೋಡುತ್ತಿದ್ದೇವೆ,ಅವರು ನಮಗಾಗಿ ಪಟ್ಟಿರುವ ಕಷ್ಟವನ್ನು ಅರಿತುಕೊಂಡು ನಾವೆಲ್ಲರು ಎಚ್ಚರಗೊಳ್ಳಬೇಕಿದೆ.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ.ಅದಕ್ಕಾಗಿ ಎಲ್ಲರು ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವಂತೆ ಕರೆ ನೀಡಿದರು.

ಮಾಲಗತ್ತಿ ಗ್ರಾಮ ಪಂಚಾಯತಿ ಸದಸ್ಯ ರೇವಣಸಿದ್ದಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯಅತಿಥಿಗಳಾಗಿ ರಾಮಣ್ಣ ಶೆಳ್ಳಗಿ,ದಸ್ತಗೀರಸಾಬ್ ಚಿಕ್ಕನಹಳ್ಳಿ,ಬಸವರಾಜ ಡೀಲರ್,ನಂದಪ್ಪ ,ಪತ್ರಕರ್ತ ಮಲ್ಲಿಕಾರ್ಜುನ ತಳ್ಳಳ್ಳಿ,ಮಹೇಶ ಯಾದಗಿರ್ ದೇವಿಂದ್ರಪ್ಪ ಚಿಕ್ಕನಹಳ್ಳಿ,ಬಸವಲಿಂಗಪ್ಪ ಪಥಮ ದರ್ಜೆ ಗುತ್ತೇದಾರರು ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಚಿಕ್ಕನಹಳ್ಳಿ ಗ್ರಾಮ ಶಾಖೆಯ ವಿವಿಧ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಪದಾಧಿಕಾರಿಗಳು: ಯಲ್ಲಪ್ಪ ಚಿಕ್ಕನಹಳ್ಳಿ ಸಂಚಾಲಕರು,ಅವಿನಾಶ ಹೊಸ್ಮನಿ,ಮಲ್ಲಿಕಾರ್ಜುನ ಛಲವಾದಿ,ಅಂಬ್ರೇಶ ಮೇಲಿಮನಿ ಸಂಘಟನಾ ಸಂಚಾಲಕರು ಹಾಗು ಮಲ್ಲಪ್ಪ ಎಸ್.ಚಿಕ್ಕನಹಳ್ಳಿಯವರನ್ನು ಖಜಾಂಚಿಯನ್ನಾಗಿ ಹಾಗು ಕಾರ್ಯಕಾರಿ ಸಮಿತಿಗೆ ಬಸವರಾಜ ಡೀಲರ್,ಹಣಮಂತ ಹೊಸ್ಮನಿ,ಚನ್ನಪ್ಪ ಚಿಕ್ಕನಹಳ್ಳಿ ಹಾಗು ನಂದಪ್ಪ ಮಾಜಿ ಇವರನ್ನು ನೇಮಕಗೊಳಿಸಲಾಯಿತು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

6 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

17 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

17 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

19 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

19 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

19 hours ago