ಬಿಸಿ ಬಿಸಿ ಸುದ್ದಿ

ರೈತರಿಗೆ ಡಿಸಿಸಿ ಬ್ಯಾಂಕಿನ ಸಾಲದ ಹಣ ಸರಿಯಾಗಿ- ಪೂರ್ಣ ಪ್ರಮಾಣದಲ್ಲಿ ತಲುಪಲಿ: ಹಣಮಂತರಾವ್ ಭೂಸನೂರ್ ಆಗ್ರಹ

ಕಲಬುರಗಿ: ಮೊದಲೇ ಕೋವಿಡ್ ಲಾಕ್‍ಡೌನ್, ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸುತ್ತ ಕಳೆÉದ 2 ವರ್ಷದಿಂದ ತೀವ್ರ ತೊಂದರೆಯಲ್ಲಿರುವ ಆಳಂದದ ರೈತರಿಗೆ ಡಿಸಿಸಿ ಬ್ಯಾಂಕಿನ ಸಾಲದ ಸಂಪೂರ್ಣ ಮೊತ್ತ ಯಾವುದೇ ತರಹದ ಕಡಿತ ಇಲ್ಲದಂತೆ ನ್ಯಾಯಯುತವಾಗಿ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ತಲುಪುವಂತಾಗಲಿ ಎಂದು ಕೆಪಿಸಿಸಿ ಸದಸ್ಯ, ಪ್ರಗತಿಪರ ರೈತ ಹಣಮಂತರಾವ್ ಭೂಸನೂರ್ ಆಗ್ರಹಿಸಿದ್ದಾರೆ.

ಆಳಂದ ತಾಲೂಕಿನಲ್ಲಿ ಇರುವ ಒಟ್ಟು 36 ಪ್ರಾಥಮಿಕ ಸಹಕಾರ ಸಂಘಗಳಿಂದ ಮೊದಲ ಹಂತದ ಸಾಲ ವಿತರಣೆ ಸಾಗಿದೆ. ಇದುವರೆಗೂ ಸಾಲ ಪಡೆಯದ ರೈತರನ್ನೇ ಆದ್ಯತೆ ಮೇಲೆ ಗುರುತಿಸಿ ಸಾಲ ನೀಡುವುದಾಗಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹೇಳಿದ್ದಾರೆ. ಆಳಂದದಲ್ಲಿಯೂ ಡಿಸಿಸಿ ಬ್ಯಾಂಕ್ ತಾನು ರೂಪಿಸಿರುವ ನಿಯಮಗಳಂತೆಯೇ ಅರ್ಹ ರೈತರನ್ನು ಗುರುತಿಸಿ ಸಾಲ ವಿತರಿಸಲಿ. ಆ ಮೂಲಕ ಇದುವರೆಗೂ ಡಿಸಿಸಿ ಬ್ಯಾಂಕಿನ ನೆರವನ್ನೇ ಕಂಡಿರದ ರೈತರಿಗೆ ಸಾಲದ ಹಣ ತಲುಪಿ ಅವರು ಒಕ್ಕಲುತನದಲ್ಲಿ ಏಳಿಗೆ ಸಾಧಿಸುವಂತಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈತರಿಗೆ ನೀಡುವ ಸಾಲದ ಹಣದ ಪೂಣರ್À ಮೊತ್ತ ಅವರ ಖಾತೆಗೆ ಸಂದಾಯವಾಗಲಿ,, ಜವಾಬ್ದಾರಿ ಸ್ಥಾನದಲ್ಲಿರುವವರು ಈ ಕೆಲಸ ಸುರಳೀತ ನಡೆಯುವಂತೆ ನೋಡಿಕೊಳ್ಳಲಿ. ರೈತರು ಮುಗ್ಧರು. ಏನನ್ನೂ ಅರಿಯದವರು. ಹೀಗಾಗಿ ಕೋವಿಡ್ ಸಂಕಷ್ಟದಲ್ಲೇ ಸಾಲದ ನೆರವು ಅವರಿಗೆ ದೊರಕಿದಲ್ಲಿ ಅವರ ಬೇಸಾಯದ ಬದುಕಿಗೆ ಊರುಗೋಲಾಗುತ್ತದೆ. ಅದರಿಂದ ರೈತರು ತಮ್ಮ ಕಷ್ಟ ಪರಿºರಿಸಿಕೊಂಡು ಮುನ್ನೆಡೆ ಸಾಧಿಸಲು ಅನುಕೂಲವಾಗುತ್ತದೆ ಎಂದೂ ಹಣಮಂತರಾವ ಭೂಸನೂರ್ ಹೇಳಿದ್ದಾರೆ.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

10 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

10 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

10 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

10 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

10 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

10 hours ago