ಬಿಸಿ ಬಿಸಿ ಸುದ್ದಿ

“ಸ್ವಂತ ವಿಚಾರಶಕ್ತಿಯ ಅಭಾವವೇ ಮೂಢ ನಂಬಿಕೆಗೆ ಕಾರಣ: ಪ್ರೊ. ಆರ್.ಕೆ. ಹುಡಗಿ

ಕಲಬುರಗಿ: ದೇವರ ಕಲ್ಪನೆಯೇ ಮೂಢನಂಬಿಕೆಯ ಮೂಲವಾಗಿದ್ದು? ವೈಚಾರಿಕ ಚಿಂತನೆಯ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಬೇಕು ಎಂದು ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.

ನಗರದ ಹೊರ ವಲಯದ ಶರಣಸಿರಸಗಿ ಬಳಿ ಇರುವ ಬಸವ ಭೂಮಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಭಾನುವಾರ ಆಯೋಜಿಸಿದ್ದ ಯಾವುದು ನಂಬಿಕೆ? ಯಾವುದು ಮೂಢನಂಬಿಕೆ ವಿಷಯ ಕುರಿತ ವಿಚಾರ ಪಂಚಮಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.

ಆಳುವ ಜನರು ತಮಗೆ ಅನುಕೂಲವಾಗುವಂತೆ ಮೂಢನಂಬಿಕೆಯನ್ನು ಸಾಮಾನ್ಯರ ಮೇಲೆ ಬಿತ್ತುತ್ತಾರೆ. ಸ್ವಂತ ವಿಚಾರ ಶಕ್ತಿ ಇಲ್ಲದ ಜನರು ಮೂಢನಂಬಿಕೆಯ ದಾಸರಾಗುತ್ತಿದ್ದಾರೆ. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಮೂಢನಂಬಿಕೆ? ಕಂದಾಚಾರ ಹಾಗೂ ಸಾಮಾಜಿಕ ಅಸಮಾನತೆಯನ್ನು ಖಂಡಿಸಿದ್ದಾರೆ. ಬಸವಣ್ಣನವರನ್ನು ಪುಸ್ತಕದಲ್ಲಿಯೇ ನೋಡದೇ ಅವರ ವಿಚಾರಗಳನ್ನು ಮೆದುಳಿಗೆ ಕಳಿಸುವ ಕೆಲಸವಾಗಬೇಕು. ಬಹುತೇಕ ಜನರ ಬಸವಣ್ಣನವರ ಹೆಸರು ಹೇಳುತ್ತಾರೆಯೇ ಹೊರತು ಅವರ ವಿಚಾರಗಳನ್ನು ಆಚರಣಿಗೆ ತರುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಜನಸಾಮಾನ್ಯರನ್ನು ಹೆದರಿಸುವ ಉದ್ದೇಶದಿಂದ ಮೂಢನಂಬಿಕೆಯನ್ನು ಹೇರಲಾಗಿದೆ. ದೇವರ ಹೆಸರಿನಲ್ಲಿ ಖರ್ಚು ಮಾಡುವ ಹಣವನ್ನು ಬಡವರು ತಮ್ಮ ಮಕ್ಕಳ ವಿದ್ಯಾಬ್ಯಾಸಕ್ಕೆ ಖರ್ಚು ಮಾಡಬೇಕು ಎಂದರು.

ಪತ್ರಕರ್ತ, ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ? ದೇವರುಗಳನ್ನು ಸೃಷ್ಠಿ ಮಾಡಿದವರೇ ಜಾತಿ? ವರ್ಗ ಮತ್ತು ವರ್ಣಗಳನ್ನು ಸೃಷ್ಠಿ ಮಾಡಿದ್ದಾರೆ. ಕಾಯಕ ಮತ್ತು ದಯೆ ಹಿನ್ನೆಲೆಯ ಇರುವ ಧರ್ಮ ಬೇಕು. ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಮೂಲಭೂತವಾದಿಗಳು ಭಾವನಾತ್ಮಕವಾಗಿ ನಮ್ಮನ್ನು ಒಡೆದಾಳುತ್ತಿದ್ದು? ಅಂಥವರಿಂದ ಎಚ್ಚರವಿರಬೇಕು. ನಮ್ಮ ಅರಿವೇ ನಮಗೆ ಗುರು ಎಂದು ಬಸವಣ್ಣನವರು ಹೇಳಿದ್ದಾರೆ. ಪ್ರತಿಯೊಂದು ವಿಷಯವನ್ನು ನಾವು ಒರೆಗಲ್ಲಿಗೆ ಹಚ್ಚಿದಾಗ ಮಾತ್ರ ಸತ್ಯ ಶೋಧನೆ ಸಾಧ್ಯವಾಗುತ್ತದೆ ಎಂದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ ಹಾಸ್ಯಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿ, ವಿಚಾರ ಸಂಬಂಧಕ್ಕಿಂತ ಆಚಾರಾಸಂಬಂಧ ಬಹಳ ಮುಖ್ಯ. ಪೂಜೆ ಮಾಡುವುದೇ ಕಾಯಕವಾಗಬಾರದು? ಕಾಯಕವೇ ಪೂಜೆಯಾಗಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ರಾಜ್ಯ ನಿರ್ದೇಶಕ ಶರಣಬಸವ ಕಲ್ಲಾ ವೇದಿಕೆಯಲ್ಲಿದ್ದರು. ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಚಟ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅಶೋಕ ದೊಡ್ಮನಿ ನಿರೂಪಿಸಿದರು. ಡಾ.ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್.ಎಸ್.ಬೀದಿ ಪ್ರಾರ್ಥಿಸಿದರು. ಪರಿಷತ್ತಿನ ಗೌರವಾಧ್ಯಕ್ಷ ರವೀಂದ್ರ ಶಾಬಾದಿ ವಂದಿಸಿದರು. ನೀಲಕಂಠ ಅವಂಟಿ? ಸಂಗಣ್ಣ ಜಿ ಸತ್ಯಂಪೇಟೆ? ನಿಜಲಿಂಗ ದೊಡ್ಮನಿ? ಗುರಣ್ಣ ಐನಾಪುರ? ಮದರಿ ಗ್ರಾಪಂ ಅಧ್ಯಕ್ಷ ಸಂಗು ಕಟ್ಟಿಸಂಗಾವಿ? ಹಣಮಂತ್ರಾಯ ಐನೊಳ್ಳಿ? ಕಾಶಿನಾಥ ಗುತ್ತೇದಾರ? ಶಾಂತಕುಮಾರ ಮಳಖೇಡ? ಶಿವಪ್ರಸಾದ? ರಜನಿ ಬಸವಪ್ರಭು? ಬಸವರಾಜ ಪಾಸ್ವಾನ ಕುಮಸಿ? ಸತೀಶ ಸಜ್ಜನ? ಅಂi

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

8 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

8 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

8 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

8 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

8 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

8 hours ago