ರಾಷ್ಟ್ರೀಯ ಅಖಂಡತೆ  ರಕ್ಷಣೆಗೆ ಸರದಾರ ಪಟೇಲರ ಪಾತ್ರ ಬಹು ಮುಖ್ಯ: ಶಶೀಲ್ ನಮೋಶಿ

ಕಲಬುರಗಿ: ಪ್ರಸ್ತುತ ನಮ್ಮ ದೇಶದ ಅಖಂಡತೆಯ ರಕ್ಷಣೆಗೆ ಮತ್ತು ದೇಶದ ಸಮಸ್ತ ಜನಮಾನಸದಲ್ಲಿ ರಾಷ್ಟ್ರಾಭಿಮಾನ ಬೆಳಸಲು ಸರದಾರ ಪಟೇಲರ ತತ್ವ ಸಿದ್ಧಾಂತಗಳಂತೆ  ನಡೆಯುವದು ಅತಿ ಅವಶ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಮುಖಂಡರಾದ ಶಾಸಕ ಶಶೀಲ್ ನಮೋಶಿ  ಮತ್ತು  ಲಕ್ಷ್ಮಣ ದಸ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ನಗರದ ಸರದಾರ್ ವಲ್ಲಭಭಾಯಿ ಪಟೇಲ್ ವೃತದಲ್ಲಿ ಉಕ್ಕಿನ ಮನುಷ್ಯ ದೇಶದ ಮೊದಲನೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಸರದಾರ ವಲ್ಲಭಭಾಯಿ ಪಟೇಲ್ ಜನ್ಮದಿನದ ನಿಮಿತ್ತ ಸರದಾರ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ
ಮಾತನಾಡಿದರು.

ಬ್ರಿಟಿಷರು ಸ್ವಾತಂತ್ರ್ಯ ನೀಡುವಾಗ ದೇಶಿ ರಾಜರಿಗೆ ಭಾರತದಲ್ಲಾದರೂ ಸೇರಬಹುದು ಇಲ್ಲವೆ ಪಾಕಿಸ್ತಾನದಲ್ಲಾದರೂ ಸೇರಬಹುದು ಅಷ್ಟೇ ಅಲ್ಲದೆ ಅವರು ಸ್ವಾತಂತ್ರ ದೇಶವನ್ನಾಗಿ ಘೋಷಿಸಿ ಕೊಂಡು ಮುಂದುವರಿಯಲು ಅವಕಾಶ ನೀಡದರು. ಇಂತಹ ಕಠಿಣ ಸಂದರ್ಭದಲ್ಲಿ ದೇಶದ 556 ದೇಶಿ ರಾಜರನ್ನು ಸಮಜಾಯಿಷಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ ಅಷ್ಟೇ ಅಲ್ಲದೆ ಭಾರತದಲ್ಲಿ ಸೇರಲು ಒಪ್ಪದೆ ಸ್ವಾತಂತ್ರವಾಗಿ ಉಳಿಯಲು ಘೋಷಿಸಿಕೊಂಡಿರುವ ಹೈದ್ರಾಬಾದ ಸಂಸ್ಥಾನ ಸೇರಿದಂತೆ ಜುನಾಘಡ ಭೋಪಾಲ್ ರಾಜ್ಯಗಳನ್ನು ಭಾರತದಲ್ಲಿ ಉಳಿಸಿಕೊಳ್ಳುಲು ದಿಟ್ಟತನದ ಪ್ರದರ್ಶಿಸಿದ ಧೀಮಂತ ನಾಯಕರಾದ ಸರದಾರ ವಲ್ಲಭಭಾಯ್ ಪಟೇಲ್ ಕಠಿಣ ಧೋರಣೆಯಿಂದು ಭಾರತ ನಿರ್ಮಾಣವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಳಾದ ಲಕ್ಷ್ಮಣ ದಸ್ತಿಯವರು ಮಾತ್ನಾಡಿ ಪ್ರಸ್ತುತ ಭಾರತಕ್ಕೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ವಿಚಾರ ಅತಿ ಅವಶ್ಯವಾಗಿವೆ, ಪಟೇಲರು ಯಾವುದೆ ಒಂದು ಪಕ್ಷದ ನಾಯಕನಲ್ಲಾ ಅವರು ಭಾರತ ಕಟ್ಟಿದ ಧೀಮಂತ ನಾಯಕರು ಪ್ರಸ್ತುತ ದಿನಗಳಲ್ಲಿ ದೇಶಾಭಿಮಾನ ಬೆಳಸಲು ಪಟೇಲರ ಸಿದ್ಧಾಂತಗಳು ಅತಿ ಅವಶ್ಯವಾಗಿವೆ ವಿಶೇಷವಾಗಿ ಯುವಕರು ಪಟೇಲರ ಆದರ್ಶಗಳಂತೆ ನಡೆದು ರಾಷ್ಟ್ರ ಅಭಿಮಾನ ಬೆಳಸಿಕೊಳ್ಳುವದು ಅವಶ್ಯವಾಗಿದೆ ಎಂದು ಕರೆ ನೀಡಿದರು.

ಇಡೀ ರಾಷ್ಟ್ರದ  ಪಠ್ಯದಲ್ಲಿ ಪಟೇಲರ ದೇಶಾಭಿಮಾನದ ಬಗ್ಗೆ ವ್ಯಾಪಕವಾಗಿ ಅಭ್ಯಾಸ ಮಾಡಿಸಬೇಕು ಎಂದ ದಸ್ತಿಯವರು ನಿನ್ನೆ ರಾತ್ರಿ ಯಾದಗೀರ ನಗರದಲ್ಲಿ ಪಟೇಲ್ ವೃತದಲ್ಲಿ ಪಟೇಲರ ನಾಮ ಫಲಕ ಧ್ವಸ ಮಾಡಿರುವ ಪೋಲಿಸ್ ರ ವರ್ತನೆಗೆ ಖಂಡಿನೀಯ 2011ರಲ್ಲಿ ಯಾದಗೀರ ನಗರ ಸಭೆ ಸರದಾರ ಪಟೇಲ್ ವೃತಕ್ಕೆ ಅಧಿಕೃತವಾಗಿ ಅನುಮತಿ ನೀಡಿ ಸರದಾರ ಪಟೇಲರ ಜನ್ಮದಿನದ ನಿಮಿತ್ಯ ಇಂದು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲು ಹೈದ್ರಾಬಾದ ರಸ್ತೆಯಲ್ಲಿ ಬರುವ ಪಟೇಲ್ ವೃತದಲ್ಲಿ ಹಾಕಿರುವ ನಾಮಪಲಕ ಕಿತ್ತು ಹಾಕಿ ಧ್ವಸ ಮಾಡಿರುವದು ದೇಶ ದ್ರೋಹದ ಕೃತ್ಯವಾಗಿದೆ ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ವಜಾ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

ಮುಖ್ಯಮಂತ್ರಿ ಈ ವಿಷಯಕ್ಕೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುಬೇಕು ಮತ್ತು ಪಟೇಲ್ ವೃತಕ್ಕೆ ನಗರ ಸಭೆಯ ವತಿಯಿಂದ ತಕ್ಷಣ ನೂತನ ನಾಮ ಫಲಕ ಹಾಕಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ಯಾಮರಾವ ಪ್ಯಾಟಿ, ಮನೀಷ ಜಾಜು, ಶಿವಲಿಂಗಪ್ಪ ಭಂಡಕ,ಮಚ್ಛಿಂದ್ರನಾಥ ಮೂಲಗೆ  ಮಲ್ಲಿನಾಥ ಸಂಗಶೆಟ್ಟಿ ಶಿವಾನಂದ ದತ್ತು ಭಾಸಗಿ  ಬಿರಾದಾರ್, ಸಾಬಿರಅಲಿ, ಮೊನಪ್ಪ,,ರಾಜು ಜೈನ, ಶಿವಾನಂದ ಕಾಂದೆ,ಶರಣು  ಸೇರಿದಂತೆ ಅನೇಕ ಅಯಾ ಸಂಘ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

5 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

5 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

5 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

5 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

6 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420