ಬಿಸಿ ಬಿಸಿ ಸುದ್ದಿ

15 ರಂದು ರೈತ ಕೃಷಿ ಸಾಲಕ್ಕಾಗಿ ಮತ್ತು  ಸಹಕಾರ ಸಂಘಗಳ ಉಳಿವಿಗಾಗಿ ರೈತ ಸಮಾವೇಶ

ಕಲಬುರಗಿ:  ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಇದ್ದಾಗ ರೈತರ 50,000 ಸಾಲ ಮನ್ನಾ ಮಾಡಿದ್ದಾರೆ ಆ ಹಣ ರೈತರಿಗೆ ಡಿಸಿಸಿ ಬ್ಯಾಂಕಿನವರು ಹಣಕಾಸಿನ ನಿರ್ವಹಣೆ ತಪ್ಪು ಮಾಡಿದ್ದರಿಂದ ಆ ಹಣ ಮನ್ನ ಮಾಡದೇ ರೈತರಿಗೆ ಅನ್ಯಾಯವಾಗಿದೆ ಎಂದು ಸಿಪಿಐ(ಎಂ) ಪಕ್ಷದ ಮುಖಂಡ ಶರಬಸಪ್ಪ ಮಮಶೇಟಿ ಆರೋಪಿಸಿದ್ದಾರೆ.

ಕಲಬುರಗಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕಿನ ಹಣಕಾಸಿನ ನಿರ್ವಹಣೆ ಕಾನೂನು ಕ್ರಮಬದ್ಧವಾಗಿ ನಡೆಯಲಿಲ್ಲ, 2002 ನೂರು ಜನರಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡಿರುವುದೇ ಬ್ಯಾಂಕ್‌ ದಿವಾಳಿ ಆಗಲು ಕಾರಣವಾಗಿದೆ ಅವರಷ್ಟೇ ಡಿಸಿಸಿ ಬ್ಯಾಂಕ್‌ ದಿವಾಳಿ ಆಗಿದ್ದಲ್ಲ ಜಿಲ್ಲೆಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳಿಂದ ಸಾಲ ಪಡೆದ ಎಲ್ಲಾ ರೈತರಿಗೂ ಹಿಂದಿನ ಸರ್ಕಾರದ ಸಿದ್ದರಾಮಯ್ಯನವರ ಆಡಳಿತ ಸರ್ಕಾರದಲ್ಲಿ ಸಾಲ ಪಡೆದ ರೈತರಿಗೆ ಎಲ್ಲರಿಗೂ ಅನ್ಯಾಯವಾಗಿದೆ ಎಂದರು.

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ ಸತತವಾಗಿ ಈ ತಪ್ಪು ಕಳಪೆ ಹಣಕಾಸು ನಿರ್ವಹಣೆ ರೈತರ ಹಿತಾಸಕ್ತಿ ಕಡೆಗಣನೆ ಭ್ರಷ್ಟಾಚಾರ ಸ್ವಜನಪಕ್ಷಪಾತ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಬ್ಯಾಂಕಿನ ಸಾಲದ ನೀತಿ ಕಡೆಗಣಿಸಿ ರೈತರ ಹಿತ ಕಡೆಗಣಿಸಿ ಸಾಲಮನ್ನಾ ಮಾಡಿರುವುದು ಸೂಕ್ತವಾದ ತನಿಖೆಯಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಸಾಲ ಮಂಜೂರಾತಿಯನ್ನು ಡಿಸಿಸಿ ಬ್ಯಾಂಕಿನ ಬದಲಿಗೆ ಅಪೆಕ್ಸ್‌ ಬ್ಯಾಂಕಿಗೆ ಕಾರ್ಯನಿರ್ವಹಿಸಲು ಹಣಕಾಸಿನ ವ್ಯವಹರಿಸಲು ಅನುಮತಿ, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ದುಡಿಯುವ ಸಿಬ್ಬಂದಿ ಬದುಕಿನ ಉದ್ದಕ್ಕೂ ಸಂಬಳದಲ್ಲಿ ದುಡಿಯುತ್ತಿರುವವರಿಗೆ ಸೇವಾ ಸೌಲಭ್ಯಗಳು ಒದಗಿಸಿ, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹಿಸಿ,15 ರಂದು  ನೆಹರು ಗಂಜನ ರೈತ ಭವನ್‌ ರೈತ ಕೃಷಿ ಸಾಲಕ್ಕಾಗಿ ಸಹಕಾರ ಸಂಘಗಳ ಉಳಿವಿಗಾಗಿ ಸಮಾವೇಶ ಈ ಸಮಾವೇಶವನ್ನು ಕಾಮ್ರೇಡ್‌ ಮಾರುತಿ ಮಾನಪಡೆ ನೇತೃತ್ವದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಕುಂದ್ರಾವು ಪಾಟೀಲ, ರೇವಣಸಿದ್ದ ಹೆಬ್ಬಾಳ, ಅವ್ವಣ್ಣಾ ಕವುಲಗಾ, ಅಲ್ತಾಫ್‌ ಇನಾಮಂದಾರ್‌, ಬಸವರಾಜ್‌ ಬಿರಾದಾರ, ಹಾಗರಗಿ ಶಾಂತಪ್ಪ ಪಾಟೀಲ, ವಿರಬದ್ರ ಕಲಬುರಗಿ ಅಶೋಕ್‌ ಮ್ಯಾಗೇರಿ, ಸುಧಾಮ ಧನ್ನಿ ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago