ಕಲಬುರಗಿ: ಪಾಲಿಕೆ ಚುನಾವಣೆಯಲ್ಲಿ ವಾಮ ಮಾರ್ಗದಿಂದ ಗದ್ದುಗೆ ಏರಲು ಮುಂದಾಗಿರುವ ಬಿಜೆಪಿ ಇದೀಗ ನ. 20 ಕ್ಕೆ ನಿಗದಿಯಾಗಿದ್ದಂತಹ ಮೇಯರ್- ಉಪ ಮೇಯರ್ ಹಾಗೂ 4 ಸ್ತಾಯಿ ಸಮೀತಿಯ ಚುನಾವಣೆಗಳನ್ನೇ ಏಕಾಏಕಿ ಮುಂದೂಡಿರೋದು ಆ ಪಕ್ಷದವರ ಅಧಿಕಾರ ದುರುಪಯೋಗದ ಪರಮಾವಧಿಯಾಗಿದೆ ಎಂದು ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಸಾಕರು ಆಗಿರುವ ಡಾ. ಅಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.
ಪಾಲಿಕೆಯಲ್ಲಿರುವ 55 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನ ಅಂದರೆ 27 ಸ್ಥಾನ ಗೆದ್ದು ಜನಾದೇಶ ಪಡೆದವರು ಕಾಂಗ್ರೆಸ್ಸಿಗರು. ಇಲ್ಲಿ ಬಿಜೆಪಿ ಕೇವಲ 23 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಈಗ ನೋಡಿದರೆ ಹೇಗಾದರೂ ಮಾಡಿ ವಾಮ ಮಾರ್ಗದಿಂದ, ಹಿಂದಿನ ಬಾಗಿಲಿನಿಂದ, ಅಧಿಕಾರ ದುರುಪಯೋಗ ಪಡಿಸಿಕೊಂಡಾದರೂ ಸರಿ ಅಧಿಕಾರ ಚುಕ್ಕಾಣಿ ಹಿಡಿಯಲು ಹೊರಟಿದೆ. ಆ ಪಕ್ಷದವರ ಇಂತಹ ಕುತಂತ್ರ ಫಲ ಕೊಡೋದಿಲ್ಲ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಬೆಂಬಲ ದೊರಕೋದಿಲ್ಲವೆಂಬುದು ಖಚಿತವಾದಾಗ ಬಿಜೆಪಿಯವರು ತಮ್ಮ ಪಕ್ಷದ 7 ಪರಿಷತ್ ಸದಸ್ಯರಿಗೆ ಕಲಬುರಗಿ ಮತದಾರರೆಂದು ಬಿಂಬಿಸಿ, ಕೊಟ್ಟಿ ದಾಖಲೆ ಹುಟ್ಟುಹಾಕಿ ಅವರೆಲ್ಲರಿಗೂ ಮೇಯರ್ ಚುನಾವಣೆಯಲ್ಲಿ ಮತದಾರರನ್ನಾಗಿ ಮಾಡಲು ಹುನ್ನಾರ ನಡೆಸಿತ್ತು. ಇದು ಅತ್ಯಂತ ಅಪ್ರಜಾತಾಂತ್ರಿಕ ಕ್ರಮ.
ಇದನ್ನು ಪ್ರಶ್ನಿಸಿ ನಾವು ಮಂಗಳವಾರವೇ ಹೈಕೋರ್ಟ್ ಮೊರೆ ಹೋಗಿz್ದÉೀವೆ. ನ್ಯಾಯಾಲಯದಲ್ಲಿ ಅದೆಲ್ಲಿ ತಮ್ಮ ಹುನ್ನಾರಕ್ಕೆ ಸೋಲುಂಟುಗಾವುದೋ, ಅದೆಲ್ಲಿ ಇಡೀ ಪಕ್ಷವೇ ಅಪಮಾನ ಹಾಗೂ ಮುಜುಗರ ಏಕಕಾಲಕ್ಕೇ ಎದುರಿಸಬೇಕಾದೀತೋ ಎಂಬ ಭಯದಲ್ಲಿ ಬಿಜೆಪಿ ಇರುವ ಅಧಿಕಾರ ದುರುಪಯೋಗಪಡಿಸಿಕೊಂಡು ಇಲ್ಲಸಲ್ಲದ ಕಾರಣಗಳನ್ನು ಪೆÇೀಣಿಸಿ ಚುನಾವಣೆ ಮುಂದಕ್ಕೆ ಹಾಕಿದೆ.
ವಿದಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಪ್ರಕಟವಾಗಿ ವಾರ ಕಳೆದಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯೂ ಸಾಗಿದೆ. ಜಿಲ್ಲಾಡಳಿತದ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿದ್ದಾರೆ. ಆದರೆ ಕೇವಲ 63 ಮತದಾರರಿಂದ ನಡೆಯುವ ಮೇಯರ್ ಚುನಾವಣೆಗೆ ಅದೆಷ್ಟು ಸಿಬ್ಬಂದಿ ಬೇಕು ಹೇಳಿ ನೋಡೋಣ? ಸಿಬ್ಬಂದಿಗಳೆಲ್ಲ ಪರಿಷತ್ ಚುನಾವಣೆಯ ಕೆಲಸಗಳಿದ್ದಾರೆಂಬ ಕಾರಣ ಒಡ್ಡಿ ಮೇಯರ್ ಚುನಾವಣೆ ಮುಂದೂಡಲಾಗಿದೆ.
ಈ ಕಾರಣ ಸರ್ವಥಾ ಸರಿಯಾದದ್ದಲ್ಲ ಎಂಬುದು ಸಣ್ಣ ಮಗುವಿಗೂ ಅರ್ಥವಾಗುತ್ತದೆ. ಅದು ಆಡಳಿತಾರೂಢ ಬಿಜೆಪಿಯವರಿಗೆ ಯಾಕೆ ಅರ್ಥ ವಾಗಲಿಲ್ಲವೋ? ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಇನ್ನಷ್ಟು ವಾಮಮಾರ್ಗ ತುಳಿಯಲು ತನಗೆ ಅವಕಾಶ ಬೇಕು ಎಂಬಂತೆ ಬಿಜೆಪಿ ವರ್ತಿಸುತ್ತಿದೆ ಎಂದು ಡಾ. ಅಜಯ್ ಸಿಂಗ್ ಮಾತಿನಲ್ಲೇ ಕಮಲ ಪಾಳಯದ ಮುಖಂಡರಿಗೆ ಛೇಡಿಸಿದ್ದಾರೆ.
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…
ಚಿಂಚೋಳಿ: ತಾಲೂಕಿನ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…