ಬಿಸಿ ಬಿಸಿ ಸುದ್ದಿ

ಕಸಾಪ ರಾಜ್ಯಾಧ್ಯಕ್ಷ ಡಾ.‌ಮಹೇಶ ಜೋಶಿಯವರಿಗೆ ಸಿ.ಎಸ್. ಮಾಲಿಪಾಟೀಲ ಮನವಿ

ಕಲಬುರಗಿ: ಚುನಾವಣೆಗೆ ನಿಲ್ಲುವವವರಿ ಗೆ(ಡಿಪೋಸಿಟ್) ಠೇವಣಿ ಹಣ ಹೆಚ್ಚು ಮಾಡುತ್ತಿರುವುದು ಸೂಕ್ತವಲ್ಲ. ಈ ನಿರ್ಧಾರ ಪ್ರತಿಭಾವಂತರಿಗೆ ಅವಕಾಶ ವಂಚಿತರಾಗುತ್ತಾರೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.‌ಮಹೇಶ ಜೋಶಿಗೆ ಕಲಬುರಗಿ ಕಸಾಪ ನಿ.ಪೂ.ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು  ಕಸಾಪ ಅವಧಿಯನ್ನು ಐದು ವರ್ಷ ಮಾಡಿದ್ದನ್ನು ಮೊದಲಿನಂತೆ ಮೂರು ವರ್ಷಕೆ ತರುವುದು ಸೂಕ್ತ, ಕಸಾಪ ಸದಸ್ಯರಾಗ ಬಯಸಿದವರಿಗೆ ಸದಸ್ಯತ್ವ ಶುಲ್ಕದಲ್ಲಿ ರೂ.250/ ಕೆ ಇಳಿ ಸುವುದು, ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರಿಗೆ ಒಂದು ಬಾರಿ ಅವಕಾಶ ಮಾತ್ರ ಮಾಡುವುದು(ರಾಜ್ಯದಂತೆ).

ಮುಂದಿನ ಚುನಾವಣೆಯು ರಾಜ್ಯ,ಜಿಲ್ಲಾ,ತಾಲೂಕು ಮಟ್ಟದಲ್ಲಿ ನಡೆಯುವಂತೆ ಅವಕಾಶ ಮಾಡಿಕೊಡುವುದು, ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವವರಿಗೆ ಕಡ್ಡಾಯವಾಗಿ ರಾಜ್ಯದವರು ಸೃಜನಾತ್ಮಕವಾಗಿ 5 ಕೃತಿಗಳನ್ನು ಬರೆದವರಿಗೆ.ಜಿಲ್ಲಾ ಮಟ್ಟದವರಿಗೆ 3 ಕೃತಿಗಳು.ತಾಲೂಕು ಮಟ್ಟದವರಿಗೆ1ಕೃತಿ ಕಡ್ಡಾಯವಾಗಿ ಬರೆದಿರುವಂತೆ ನಿಯಮ ತರುವುದು, ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಈಗ ಕೊಡುತ್ತಿರುವ ಅನುದಾನದಲ್ಲಿ ರೂ. 5 ಲಕ್ಷ ದಿಂದ 8 ಲಕ್ಷಕ್ಕೆ ಏರಿಸುವುದು ತಾಲೂಕಿಗೆ 1ಲಕ್ಷದಿಂದ 4ಲಕ್ಷಕ್ಕೆ ಏರಿಸುವುದು. ಆಯಾವಲಯಗಳಿಗೆ ಕಡಿಮೆ ಎಂದರು 50 ಸಾವಿರ ರೂಪಾಯಿಗಳ ಅನುದಾನ ನೀಡಿದಲ್ಲಿ ಯಾವುದೇ ಸಮ್ಮೇಳನಗಳುವ್ಯ ವಸ್ಥಿತವಾಗಿ ನಡೆಯಲು ಸಾಧ್ಯವಾಗಬಹುದು.

ಕಸಾಪ ಅಧ್ಯಕ್ಷರುಗಳಿಗೆ ಕರ್ನಾಟಕ ಸುತ್ತಾಡಲು ಉಚಿತವಾದ ಸರಕಾರದಿಂದ ಪಾಸ್ ಸೌಲಭ್ಯ ಒದಗಿಸಿಕೊಡುವ ನಿಯಮ ತರಬೇಕು. ವರ್ಷಕ್ಕೆ ನಿರ್ವಹಣಾ ವೆಚ್ಚ ಅಧಿಕಗೊಳಿಸುವುದು ಸೂಕ್ತ. ರಾಜ್ಯದ ಯಾವುದೇ ಜಿಲ್ಲಾ ಅಧ್ಯಕ್ಷರು ಉತ್ತಮವಾಗಿ ಸಭೆ ಸಮಾರಂಭಗಳು, ಸಮ್ಮೇಳನಗಳು ನಡೆಸಿದ ಅಭಿಪ್ರಾಯವನ್ನು ಜನ ಮೆಚ್ಚುಗೆ ಪಡೆದರೆ ಅಂತಹವರಿಗೆ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ನಗದು ಪುರಸ್ಕಾರವನ್ನು ನೀಡಿ ಗೌರವಿಸುವ ಕೆಲಸ ರಾಜ್ಯಾಧ್ಯಕ್ಷರಿಂದ ನಡೆಯ ಬೇಕೆಂದು ನಿಯಮದಲ್ಲಿತ್ತಿ ದ್ದುಪಡೆಗೆ ತರುವುದು. ಇನ್ನೂ ಮುಂದೆ ಕಸಾಪ ಚುನಾವಣೆಗೆ ಆಗುವ ಹಣದ ಖರ್ಚು ವೆಚ್ಚಗಳನ್ನು ಮಿತಗೊಳಿಸಿ ಚುನಾವಣೆ ನಡೆಯುವಂತೆ (app) ಅಯಪ್ ತರುವ ವ್ಯವಸ್ಥೆ ಮಾಡುವುದುಗಾಗಿ ಒತ್ತಾಯಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago