ಬಿಸಿ ಬಿಸಿ ಸುದ್ದಿ

ಸದನದಲ್ಲಿ ಯಡ್ರಾಮಿ ರೈತರ ಅಹೋರಾತ್ರಿ ಧರಣಿ ಪ್ರತಿಧ್ವನಿ

ಕಲಬುರಗಿ: ಕಳೆದ ನಾಲ್ಕು ದಿನದಿಂದ ಜಿಲ್ಲಯ ಯಡ್ರಾಮಿ ತಾಲೂಕಿನಲ್ಲಿ ರೈತರು, ವಿವಿಧ ಸಂಘಟನೆಗಳ ಮುಖಂಡರು ಬೆಳೆಹಾನಿ ಪರಿಹಾರ ಮಾಹಿತಿ ಅಪ್‍ಡೇಟ್ ಮಾಡುವಲ್ಲಿನ ವಿಳಂಬ ಪ್ರಶ್ನಿಸಿ ಆರಂಭಿಸಿರುವ ಅಹೋರಾತ್ರಿ ಧರಣಿ ವಿಚಾರ ಬಳಗಾವಿ ಸದನದ ಕೊನೆಯ ದಿನವಾದ ಶುಕ್ರವಾರ ಸದನದಲ್ಲಿ ಪ್ರತಿಧ್ವನಿಸಿದೆ.

ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ್ ಸಿಂಗ್ ಈ ವಿಚಾರವಾಗಿ ಸರಕಾರದ ಗಮನ ಸೆಳೆಯುವ ಗೊತ್ತುವಳಿಯನ್ನು ಸದನದಲ್ಲಿ ಮಂಡಿಸಿದರು.

ಕಳೆದ ಸೆಪ್ಟೆಂಬರ್, ಅಕ್ಬೋಬರ್ ಹಾಗೂ ನವ್ಹೆಂಬರ್ ತಿಂಗಳ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆ ಮಾಡಿರುವ ತಾಲೂಕು ಆಡಳಿತ ಸದರಿ ಮಾಹಿತಿಯನ್ನು ಆನ್‍ಲೈನ್ ಅಪ್‍ಡೆಟ್ ಮಾಡುವಲ್ಲಿ ವಿಳಂಬ ಮಾಡಿದೆ. ಅಷ್ಟರೊಳಗೆ ಲಾಗಿನ್ ಬಂದ್ ಆಗಿಬಿಟ್ಟಿದೆ. ಇದರಿಂದ ಯಡ್ರಾಮಿ ಭಾಗದ ಬೆಳೆಹಾನಿಯಾದ ಸಾವಿರಾರು ರೈತರು ಪರಿಹಾರ ದೊರಕದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಸರಕಾರ ತಕ್ಷಣ ಯಡ್ರಾಮಿ ಭಾಗದಲ್ಲಿನ ಬೆಳೆಹಾನಿ ಮಾಹಿತಿ ಲಾಗಿನ್ ಮಾಡಲು ಅವಕಾಶವಾಗುವಂತೆ ಲಾಗಿನ್ ಪೆÇೀರ್ಟಲ್ ಮತ್ತೊಮ್ಮೆ ಓಪನ್ ಮಾಡಿ ಕೊಡಬೇಕು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ಎಂದರು.

ಡಾ. ಅಜಯ್  ಸಿಂಗ್ ಅವರು ಯಡ್ರಾಮಿ ರೈತರು ಎದುರಿಸುತ್ತಿರುವ ತೊಂದರೆ ಬಗ್ಗೆ ಸರಕಾರದ ಗಮನ ಸೆಳೆದಾಗ ಸದನದಲ್ಲಿ ಹಾಜರಿದ್ದ ಸಚಿವ ಗೋವಿಂದ ಕಾರದಜೋಳ ಅವರು ಈ ವಿಚಾರವಾಗಿ ತಾವು ಖುದ್ದು ಪರಿಶೀಲನೆ ನಡೆಸೋದಾಗಿಯೂ ಹೇಳಿದರಲ್ಲದೆ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಪರಿಶೀಲನೆ ನಡೆಸಿ ಏನಾಗಿದೆ ಎಂಬುದನ್ನು ತಿಳಿದು ಮುಂದಿನ ಅಗತ್ಯ ಕ್ರಮ ದರುಗಿಸುವ ಭರವಸೆ ನೀಡಿದರು.

ಸದನದಲ್ಲಿ ಮಾತನಾಡಿದ ಡಾ. ಅಜಯ್ ಸಿಂಗ್ ಕಂದಾಯ ಹಾಗೂ ಕೃ,ಇ ಇಲಾಖೆಗಳು ಬೆಳೆಹಾನಿಯ ಜಂಟಿ ಸಮೀಕ್ಷೆ ನಡೆಸಿ ಮಾಹಿತಿ ಲಾಗಿನ್‍ನಲ್ಲಿ ಅಳವಡಿಸುವಲ್ಲಿ ವಿಫಲವಾಗಿದ್ದರಿಂದ ರೈತರೆಲ್ಲರಿಗೂ ಬೆಳೆಹಾನಿ ಬಾರದೆ ವಂಚಿತರಾಗುವ ಬೀತಿ ಎದುರಾಗಿದೆ. ಇದು ರೈತರ ತಪ್ಪಲ್ಲ, ಅದಿಕಾರಿಗಳ ವಿಳಂಬ ಧೋರಣೆಯೇ ಇದಕ್ಕೆ ಕಾರಣ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಯಡ್ರಾಮಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಆಗಬಾರದು ಎಂಬುದೇ ತಮ್ಮ ಕಳಕಳಿಯಾಗಿದೆ ಎಂದು ಶಾಸಕ ಡಾ. ಅಜಯ್ ಸಿಂಗ್ ಸದನದ ಗಮನ ಸಳೆದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

4 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

4 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

4 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

4 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

4 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

4 hours ago