ಬಿಸಿ ಬಿಸಿ ಸುದ್ದಿ

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನುಆಚರಿಸಲಾಯಿತು. ಸಮಾರಂಭದ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಶಿವಯೋಗಿ ಸದ್ಧರಾಮೇಶ್ವರರ ವಚನಗಳಲ್ಲಿ ಅಡಗಿರುವಜೀವನ ಸಂದೇಶವನ್ನು ಹೇಳಿದರು.

ಶಿವಯೋಗಿ ಸಿದ್ಧರಾಮೇಶ್ವರರು ವಿಶ್ವಗುರು ಬಸವಣ್ಣನವರ ಸಮಕಾಲಿನ ಶರಣರು. ಅಲ್ಲಮ ಪ್ರಭುದೇವರಿಂದ ಪ್ರಭಾವಿತರಾಗಿಅವರುಕಲ್ಯಾಣಕ್ಕೆಆಗಮಿಸುತ್ತಾರೆ. ಕಲ್ಯಾಣದಅನುಭವ ಮಂಟಪದಲ್ಲಿಚನ್ನಬಸವಣ್ಣನವರಿಂದ ಲಿಂಗದಿಕ್ಷೆಯನ್ನು ಪಡೆಯುತ್ತಾರೆ. ಅವರು ಅನೇಕ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳಲ್ಲಿ ಬಸವಭಕ್ತಿತುಂಬಿ ತುಳುಕುತ್ತದೆ. ಬಸವಣ್ಣನೆತಾಯಿ, ಬಸವಣ್ಣನೆತಂದೆ, ಬಸವಣ್ಣನೆ ಪರಮಬಂಧುವೆನಗೆ ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ ನಿಮ್ಮ ಹೆಸರಿಟ್ಟಗುರು ಬಸವಣ್ಣನಯ್ಯಾ ಎಂಬ ವಚನ ಬಸವಣ್ಣನವರ ಘನ ಮಹಿಮೆಯನ್ನು ಎತ್ತಿತೋರಿಸುತ್ತದೆ.

ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನಗಳಲ್ಲಿ ನಮ್ಮಜೀವನ ಶಾಂತಿ ಸಮಾಧಾನದಿಂದ ಸಮತೆಯಿಂದಕೂಡಿರಬೇಕುಎಂದು ಹೇಳುತ್ತಾರೆ. ಜೀವನದಲ್ಲಿ ಕಷ್ಟ, ಸುಖ, ನೋವು, ನಲಿವು, ಹಾನಿ, ವೃದ್ಧಿ ಬರುವುದು ಸಹಜ. ಆದರೆಎಲ್ಲಾ ಪ್ರಸಂಗದಲ್ಲಿಯೂ ನಾವು ಸಮಚಿತ್ತದಿಂದ ಬಾಲುವುದೇ ಸಮತೆಎಂದು ಹೇಳುತ್ತಾರೆ.

ನಮ್ಮ ಮನಸ್ಸು ಸಮಸ್ಥಿತಿಯಾಗಿರಬೇಕಾದರೆ “ ಮಾಡಬೇಕು ಮಾಡಬೇಕು ಮನವೊಲಿದು ಲಿಂಗಪೂಜೆಯ, ನೋಡಬೇಕು ನೋಡಬೇಕು ಮನವೊಲಿದು ಲಿಂಗ ಸಂಭೃಮವಾ, ಹಾಡಬೇಕು ಹಾಡಬೇಕು ಮನವೊಲಿದು ಲಿಂಗಸ್ತೊತ್ರವ, ಕೂಡಬೇಕುಕೂಡಬೇಕು ಕಪಿಲಸಿದ್ಧಮಲ್ಲಿಕಾರ್ಜುನ ಎನ್ನಗುರುಚನ್ನಬಸವಣ್ಣಕೊಟ್ಟಇಷ್ಟಲಿಂಗದಡಿಯಲ್ಲಿ. ಎಂದು ಹೇಳುತ್ತಾರೆ. ಇದನ್ನು ದಿನನಿತ್ಯ ನಮ್ಮಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮಜೀವನ ಸಾರ್ಥಕ ಗೊಳಿಸಬೆಕೆಂದು ಪೂಜ್ಯರು ಹೇಳಿದ್ದರು.

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು, ಶಿವಯೋಗಿ ಸಿದ್ಧರಾಮೇಶ್ವರರ ಜೀವನ ಸಾಧನೆಯ ಮೇಲೆ ಬೇಲಕು ಚೆಲ್ಲಿದರು. ಪೂಜ್ಯ ಶ್ರೀ ಮಹಾಲಿಂಗ ದೇವರು ನೇತೃತ್ವ ವಹಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು. ಶಾಂತಯ್ಯಾ ಸ್ವಾಮಿ, ಶಿವಾನಂದ ಕಟ್ಟೆ, ರಮೇಶ ಪಟ್ನೆ ಹಾಗೂ ಶ್ರೀಮಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

emedialine

Recent Posts

ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ: ಯಲ್ಲಪ್ಪ ನಾಯ್ಕೋಡಿ

ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…

1 hour ago

ಕಲಬುರಗಿ ಸ್ಮಾರ್ಟ್ ಸಿಟೀ ಎನ್ನುವುದು ಸಿಎಂ ತೋರಿಸುವ ಹಗಲ ನಕ್ಷತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…

1 hour ago

ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…

1 hour ago

ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…

2 hours ago

ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…

2 hours ago

ಶಿಶುಪಾಲನಾ ಕೇಂದ್ರ. ಸ್ಥಾಪನೆ ಉದ್ಯೋಗಸ್ಥ ಮಹಿಳೆಯರಿಗೆ ಅನಕೂಲ

ಕಲಬುರಗಿ: ಸರಕಾರದಿಂದ ಸ್ಥಾಪನೆ ಆದ ಶಿಶುಪಾಲನಾ ಕೇಂದ್ರಗಳಿಂದ ಬೇರೆ ಕಡೆ ಕೆಲಸಕ್ಕೆ. ಹೋಗುವ ಮಹಿಳೆಯರಿಗೆ ತಮ್ಮ. ಮಕ್ಕಳನ್ನು. ಬಿಟ್ಟು. ಹೋಗಲು…

2 hours ago