ಗ್ರಾಮೀಣ ಮಟ್ಟದ ಅಪ್ಪಟ ಪ್ರತಿಭೆ ಸುಧಾರಾಣಿ ಪಿಎಸ್‌ಐ ಆಗಿ ಆಯ್ಕೆ

0
63

ಶಹಾಬಾದ:ಗ್ರಾಮೀಣ ಮಟ್ಟದ ಅಪ್ಪಟ ಪ್ರತಿಭೆಯೊಂದು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ರಾಜ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ೨೦೨೧ ಅಕ್ಟೋಬರನಲ್ಲಿ ನಡೆದ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾಳೆ.

ನಗರದ ಹಳೆಶಹಾಬಾದನ ನಿವಾಸಿ ನಾಗೇಂದ್ರ ನಾಟೇಕಾರ ಹಾಗೂ ಶೋಭಾ ನಾಟೇಕಾರ ದಂಪತಿಯ ಪುತ್ರಿ ಸುಧಾರಾಣಿ ನಾಟೇಕಾರ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದು, ತಂದೆ-ತಾಯಿ ಸಹೋದರರಲ್ಲಿ ಅಭಿಮಾನವನ್ನುಂಟು ಮಾಡಿದೆ.

Contact Your\'s Advertisement; 9902492681

ತನ್ನ ಪ್ರಾಥಮಿಕ ಶಿಕ್ಷಣವನ್ನು ಭಂಕೂರ ಗ್ರಾಮದ ಬಸವ ಸಮಿತಿ ಶಾಲೆಯಲ್ಲಿ ಪೂರೈಸಿರುವ ಸುಧಾರಾಣಿ ಅವರು ಶಾಲೆಯಲ್ಲಿ ಯಾವಾಗಲೂ ಪ್ರಥಮ ಸ್ಥಾನ ಗಿಟ್ಟಿಸುತ್ತಾ ಬಂದಿರುವಳು. ನಂತರ ಪದವಿ ಪೂರ್ವ ಶಿಕ್ಷಣವನ್ನು ಕಲಬುರಗಿಯ ಎಸ್‌ಬಿಆರ್ ಕಾಲೇಜು, ಇಂಜಿನಿಯರಿಂಗ ಪದವಿಯನ್ನು ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಪೂರೈಸಿದ್ದಾಳೆ.

ಗ್ರಾಮೀಣ ಭಾಗದ ಭಂಕೂರ ಬಸವ ಸಮಿತಿ ಶಾಲೆಯಲ್ಲಿ ಓದಿ ಮಗಳು ಪಿಎಸ್‌ಐ ಆಗಿ ಆಯ್ಕೆಯಾಗಿರುವುದಕ್ಕೆ ತಂದೆಯಾದ ನನಗೆ ತೃಪ್ತಿ ತಂದಿದೆ.ಈ ಯಶಸ್ಸಿಗೆ ಬಸವ ಸಮಿತಿಯ ಶಾಲೆಯ ಪದಾಧಿಕಾರಿಗಳು ಹಾಗೂ ಕಲಿಸಿದ ಶಿಕ್ಷಕರೇ ಕಾರಣ. – ನಾಗೇಂದ್ರ ನಾಟೇಕಾರ

ಪಿಎಸ್‌ಐ ಆಗಿ ಆಯ್ಕೆಯಾಗಿರುವ ಸುದ್ದಿ ತಿಳಿದು ಆಶ್ಚರ್ಯ ಜೊತೆಗೆ ಸಂತೋ?ವು ಆಯಿತೆಂದು ಸಾಧನೆ ಮಾಡಿದ ಸುಧಾರಾಣಿ ಹೇಳುವಾಗ ಮುಖದಲ್ಲಿ ಆತ್ಮವಿಶ್ವಾಸ ಕಾಣುತ್ತಿತ್ತು. ಸೌಮ್ಯಸ್ವಭಾವದ ಇವಳು ಪುಸ್ತಕವೇ ದೇವರು, ತನ್ನ ಕೋಣೆಯೇ ದೇವಾಲಯವೆಂದು ತಿಳಿದು, ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದರ ಪ್ರತಿಫಲವೇ ಇದು ಎಂದು ಹೇಳುತ್ತಾಳೆ.

ಬಸವಣ್ಣನವರು ಹೇಳಿದಂತೆ ” ಕಾಯಕವೇ ಕೈಲಾಸ ” ವೆಂದು ತಿಳಿದು ಸತತ ಪರಿಶ್ರಮ, ನಿಯಮಿತ ಅಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಬಹುದೆನ್ನುವುದೇ ಸುಧಾರಾಣಿಯ ಹೇಳಿಕೆ. ತನ್ನ ಯಶಸ್ವಿಗೆ ತಂದೆ ತಾಯಿಯರ ಪ್ರೋತ್ಸಾಹ, ಎಲ್ಲಾ ಶಿಕ್ಷಕರ ಸಹಕಾರ,ಮಾರ್ಗದರ್ಶನ ಯಶಸ್ವಿಗೆ ಕಾರಣ ಎಂದು ಹೇಳುತ್ತಾಳೆ ಸುಧಾರಾಣಿ.ಇವಳ ಸಾಧನೆಗೆ ಬಸವ ಸಮಿತಿಯ ಸರ್ವ ಪದಾಧಿಕಾರಿಗಳು ಶಿಕ್ಷಕರು ಹಾಗೂ ಹಳೆಶಹಾಬಾದನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here