ಕೃಷಿ

ತೋಟಗಾರಿಕೆಯಲ್ಲಿ ಯಶಸ್ಸು ಕಂಡ ನಾಗನಾಥರಾವ ನಿಡೋದೆ

ಕಲಬುರಗಿ: ಬೀದರಿನ ನಿವೃತ್ತ ಬ್ಯಾಂಕ್ ನೌಕರ ನಾಗನಾಥರಾವ ನಿಡೋದೆ ಬೀದರ ತಾಲೂಕಿನ ಕಮಠಾಣಾ ಮತ್ತು ಯಾಕತಪುರ ಗ್ರಾಮಗಳಲ್ಲಿರುವ ತಮ್ಮ 12 ಎಕರೆ ಜಮೀನಿನಲ್ಲಿ ತೋಟಗಾರಿಕೆಯನ್ನು ವಿಶೇಷ ಆಸಕ್ತಿಯಿಂದ ಕೈಗೊಂಡು ಯಶಸ್ಸು ಕಂಡಿದ್ದಾರೆ. ಈ ಮೂಲಕ ಎಲ್ಲ ರೈತರಿಗೂ ಮಾದರಿಯಾಗಿದ್ದಾರೆ. ಇವರ ಸಾಧನೆಯ ಯಶೋಗಾಥೆ ಇಲ್ಲಿದೆ.
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 2016ರಲ್ಲಿ ನಿವೃತ್ತಿಯಾಗಿರುವ 61 ವರ್ಷದ ನಾಗನಾಥರಾವ ಮೂಲತಃ ಔರಾದ(ಬಿ) ತಾಲೂಕಿನ ನಿಡೋದಾ ಗ್ರಾಮದವರು. ಹಿರಿಯರೊಂದಿಗೆ ಬೀದರಿಗೆ 1973ರಲ್ಲಿ ವಲಸೆ ಬಂದಿದ್ದು, 1988ರಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ನೌಕರಿ ಪಡೆದಿದ್ದರು. ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಿಕೊಳ್ಳಲು ಕಮಠಾಣಾ ಮತ್ತು ಯಾಕತಪುರ ಗ್ರಾಮಗಳಲ್ಲಿರುವ ಜಮೀನಿನಲ್ಲ್ಲಿ ನೀರಾವರಿಗಾಗಿ ತಲಾ ಒಂದೊಂದು ಕೊಳವೆ ಬಾವಿ ತೋಡಿಸಿದರು.
ಇವರು ತಮ್ಮ ಜಮೀನಿನಲ್ಲಿ ಮೊದಲು ಸೋಯಾ, ತೊಗರಿ, ಹೆಸರು ಬೆಳೆಯುತ್ತಿದ್ದು, ಅಷ್ಟೇನೂ ಆದಾಯ ಸಿಗುತ್ತಿರಲಿಲ್ಲ. ತೋಟಗಾರಿಕೆ ಅಧಿಕಾರಿಗಳ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ತೋಟಗಾರಿಕೆ ಮಾಡುವ ಪಣ ತೊಟ್ಟರು. ತೋಟಗಾರಿಕೆಯಲ್ಲಿ ಹಣದ ಖಚರ್ೂ ಹೆಚ್ಚು, ಆದಾಯವೂ ಹೆಚ್ಚು ಎಂದು ಮನಗಂಡು ಕಮಠಾಣಾದ 5 ಎಕರೆಯಲ್ಲಿ ಕಳೆದ ಐದಾರು ವರ್ಷದ ಹಿಂದೆ ಗೋವಾದಿಂದ ತಂದ ವಿ-4, ವಿ-7 ತಳಿಯ ಗೋಡಂಬಿ(ಕಾಜು) ಗಿಡಗಳನ್ನು ಬೆಳೆಸಿದ್ದಾರೆ. ಇವು ಸಮೃದ್ಧವಾಗಿ ಮತ್ತು ಹಚ್ಚ ಹಸಿರಾಗಿ ಬೆಳೆದು ಫಲ ಕೊಡುತ್ತಿವೆ. ಕಳೆದ ವರ್ಷ 10-15 ಕ್ವಿಂಟಲ್ ಗೋಡಂಬಿ ಇಳುವರಿ ಪಡೆದು ಸುಮಾರು 3-4 ಲಕ್ಷ ರೂ. ಪಡೆದಿದ್ದಾರೆ. ಈ ವರ್ಷ 6 ಲಕ್ಷ ರೂ.ವರೆಗೆ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಯಾಕತಪುರದ 4.50 ಎಕರೆಯಲ್ಲಿ ಬೆನಿಶಾನ್, ದಶಹರಿ ಮತ್ತು ಕೇಸರ್ ತಳಿಯ ಮಾವಿನ ಗಿಡಗಳನ್ನು ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 2.50 ಎಕರೆಯಲ್ಲಿ ಜಿ-9 ಬಾಳೆಯನ್ನು ಬೆಳೆಸಿ ಎಕರೆಗೆ 45,000 ರೂ. ಸಹಾಯಧನ ಪಡೆದುಕೊಂಡಿದ್ದಾರೆ.


ತಮ್ಮ ಎರಡೂ ತೋಟಗಳಲ್ಲಿ ಕೃಷಿ ಹೊಂಡ ನಿಮರ್ಿಸಿದ್ದಲ್ಲದೆ ಹನಿ ನೀರಾವರಿ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದಾರೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಶೇ.90ರಷ್ಟು ಸಹಾಯಧನ ಪಡೆದಿದ್ದಾರೆ. ಮಳೆ ನೀರಿನ ಸಂಗ್ರಹಣೆಗಾಗಿ 20ಘಿ20ಘಿ3 ಅಡಿ ಅಳತೆಯ ಕೃಷಿ ಹೊಂಡವನ್ನು ನಿಮರ್ಾಣ ಮಾಡಿಕೊಂಡಿದ್ದು, 1.35 ಲಕ್ಷ ರೂ. ಸಹಾಯಧನ ಪಡೆದುಕೊಂಡಿದ್ದಾರೆ. ಈಗ ಟ್ರ್ಯಾಕ್ಟರ್ ಮತ್ತಿತರ ಯಂತ್ರೋಪಕರಣಗಳ ಮತ್ತು ಪ್ರತಿ ತೋಟದಲ್ಲಿ ಒಬ್ಬೊಬ್ಬ ಆಳಿನ ಸಹಾಯದಿಂದ ಎಲ್ಲ ಕೆಲಸಕಾರ್ಯ ಮಾಡಿಸುತ್ತಿದ್ದಾರೆ. ಹುಬ್ಬಳ್ಳಿಯ ಮತ್ತು ಸ್ಥಳೀಯ ಹಣ್ಣು ಮಾರಾಟಗಾರರು ಇವರ ತೋಟಕ್ಕೇ ಬಂದು ಮಾವು, ಗೋಡಂಬಿ ಮತ್ತು ಬಾಳೆ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮಗ ಸಿವಿಲ್ ಇಂಜಿನಿಯರ್. ಇದರಿಂದ ಮಾರುಕಟ್ಟೆಗೆ ಫಸಲನ್ನು ಒಯ್ದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲವೆಂಬ ನೋವು ಇವರದಾಗಿದೆ.
ಮಾವು, ಬಾಳೆ ಮತ್ತು ತರಕಾರಿ ಬೆಳೆಗಳ ಕಟಾವು ಹಾಗೂ ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಮಾಡಲು ತೋಟಗಾರಿಕೆ ಇಲಾಖೆಯಿಂದ ಪ್ಯಾಕಹೌಸ್, ಎರೆಹುಳು ಗೊಬ್ಬರದ ಘಟಕಗಳನ್ನು ನಿಮರ್ಿಸಿಕೊಳ್ಳುವ ಯೋಜನೆ ಹೊಂದಿದ್ದಾರೆ. ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಕೈಗೊಳ್ಳಲು ಅನುವಾಗುವಂತೆ ಒಂದೆರಡು ದೇಸಿ ಹಸುಗಳ ಸಾಕಣೆ ಮತ್ತು ಬಾಳೆ ಫಸಲು ತೆಗೆದುಕೊಂಡು 4 ಎಕರೆಯಲ್ಲಿ ಶುಂಠಿ (ಅಲ್ಲಾ) ಬೆಳೆಯುವ ಹಾಗೂ ಬದುಗಳ ಮೇಲೆ ಅರಣ್ಯ ಗಿಡಗಳನ್ನು ಬೆಳೆಸುವ ಯೋಜನೆ ರೂಪಿಸಿಕೊಂಡಿದ್ದಾರೆ.

ಎರಡೂ ತೋಟಗಳ ನಿರ್ವಹಣೆಗೆ ಪ್ರತಿ ವರ್ಷ 1.5 ರಿಂದ 2 ಲಕ್ಷ ರೂ.ವರೆಗೆ ಖಚರ್ು ಮತ್ತು 5-6ಲಕ್ಷ ರೂ.ವರೆಗೆ ಆದಾಯ ಬರುತ್ತಿದೆ. ಗಿಡಗಳು ದೊಡ್ಡದಾಗಿ ಬೆಳೆದಂತೆ ಆದಾಯವೂ ಹೆಚ್ಚಾಗಬಹುದು. ರೈತ ಸಮುದಾಯ ತೋಟಗಾರಿಕೆ ಇಲಾಖೆಯಿಂದ ನೀಡುವ ತಾಂತ್ರಿಕ ಸಲಹೆ ಮತ್ತು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಸಮಗ್ರ ಕೃಷಿ, ಬಹು ಬೆಳೆ ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಸಾಧ್ಯವಾದರೆ ಫಸಲನ್ನು ಸ್ವಂತ ಮಾರಾಟ ಮಾಡುವುದರಿಂದ ಹೆಚ್ಚಿನ ಹಣ ಗಳಿಸಬಹುದು. ತಮ್ಮ ಈ ಸಾಧನೆಗೆ ತೋಟಗಾರಿಕೆ ಉಪನಿದರ್ೇಶಕ ಮಲ್ಲಿಕಾಜರ್ುನ ಬಾವಗೆ, ಸಹಾಯಕ ನಿದರ್ೇಶಕ ಶಿವಪುತ್ರ ಶಂಭು ಮತ್ತು ಮನ್ನಳ್ಳಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಗೌತಮ ಶಿಂಧೆ ಅವರುಗಳ ಸಲಹೆ ಮತ್ತು ಮಾರ್ಗದರ್ಶನವೇ ಮುಖ್ಯ ಎನ್ನುತ್ತಾರೆ ನಾಗನಾಥರಾವ ನಿಡೋದೆ. ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ 9901040501.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago