ಮೊಬೈಲ್ ಪ್ರೀಪೇಯ್ಡ್ ದರಗಳ ತೀವ್ರ ಹೆಚ್ಚಳ ವಿರೋಧಿಸಿ ಟ್ವಿಟ್ಟರ್ ಸ್ಟ್ರಾಮ್ ಚಳವಳಿ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ಇಂಟರ್ನೆಟ್ ಪ್ಯಾಕ್ ಮತ್ತು ಮೊಬೈಲ್ ರೀಚಾರ್ಜ್ ದರಗಳಲ್ಲಿ ಏರಿಸಿರುವ ಭಾರಿ ಹೆಚ್ಚಳದ ವಿರುದ್ಧ ಎಐಡಿಎಸ್‌ಓ ಮತ್ತು ಎಐಡಿವೈಓ ಸಂಘಟನೆಗಳಿಂದ ಗುರುವಾರ ರಾಷ್ಟ್ರವ್ಯಾಪಿ ಟ್ವಿಟ್ಟರ್ ಸ್ಟ್ರಾಮ್ ಚಳವಳಿ ನಡೆಸಿದರು.

ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ, ಮೊಬೈಲ್ ತಂತ್ರಜ್ಞಾನ ಮತ್ತು ಇಂಟರ್ನೆಟ್ ಸೇವೆಯ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಮೊಬೈಲ್ ಇಂಟರ್ನೆಟ್ ಸೇವೆ ಅಗತ್ಯವಾಗಿದೆ. ಪ್ರತಿಯೊಂದು ಕ್ಷೇತ್ರದ ಡಿಜಿಟಲೀಕರಣವು ಮೊಬೈಲ್ ಫೋನ್‌ಗಳ ಬಳಕೆಯ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಒಂದೆಡೆ ಮೊದಲೇ ಕುಸಿದಿದ್ದ ದೇಶದ ಆರ್ಥಿಕ ಪರಿಸ್ಥಿತಿಯು ಕೋವಿಡ್-೧೯ರಿಂದಾಗಿ ಮತ್ತಷ್ಟು ಬಿಗಡಾಯಿಸಿದೆ.

ಇದರ ಪರಿಣಾಮದಿಂದಾಗಿ ದೇಶದ ಜನರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು ಜಿಯೋ, ವೊಡಾಫೋನ್ ಐಡಿಯಾ, ಏರ್‌ಟೆಲ್ ಕಂಪನಿಗಳು ನೆಟ್ ಪ್ಯಾಕ್‌ಗಳು ಮತ್ತು ರೀಚಾರ್ಜ್ ದರಗಳನ್ನು ೨೦-೨೫% ಹೆಚ್ಚಿಸಿವೆ ಮತ್ತು ಮುಂಬರುವ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳ ಮಾಡುವುದಾಗಿ ಘೋಷಿಸಿವೆ. ಈಗಾಗಲೇ ಮಧ್ಯಮ ವರ್ಗದ ಜನರು, ಕಡಿಮೆ ಆದಾಯವುಳ್ಳವರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ನವೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ಎಲ್ಲರೊಂದಿಗೆ ಕನಿಷ್ಠ ಸಮಾಲೋಚನೆಯನ್ನೂ ನಡೆಸದೆ ಇದ್ದಕ್ಕಿದ್ದಂತೆ ದರಗಳನ್ನು ಹೆಚ್ಚಿಸಿದ್ದರು. ಖಾಸಗಿ ಟೆಲಿಕಾಂಗಳು ದರಗಳಲ್ಲಿ ಇಷ್ಟೊಂದು ಏರಿಕೆ ಮಾಡುತ್ತಿದ್ದರೂ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯಾವ ಕ್ರಮವನ್ನು ಕೈಗೊಳ್ಳದೇ ಜಡ ಮೌನವಾಗಿರುವುದು ಖಂಡನೀಯ.

ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್‌ನ್ನು ಬಲಿಕೊಟ್ಟು, ಕೇವಲ ಒಂದೆರಡು ದೈತ್ಯ ಖಾಸಗಿ ಕಂಪನಿಗಳು ಟೆಲಿಕಾಂ ವಲಯದ ಮೇಲೆ ಏಕಸ್ವಾಮ್ಯ ಸಾಧಿಸುವಂತೆ ಮಾಡುವಲ್ಲಿ ಮೋದಿ ಸರ್ಕಾರವು ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ, ಇದು ಟೆಲಿಕಾಂ ಕ್ಷೇತ್ರದ ಸಂಪೂರ್ಣ ಖಾಸಗೀಕರಣದ ಹಾದಿಯನ್ನು ತೆರವುಗೊಳಿಸಿ ದೇಶದ ಫೋನ್ ಬಳಕೆದಾರರಿಗೆ ವಿನಾಶದ ಸಂಕೇತವನ್ನು ಸೂಚಿಸಿದೆ. ೨೦೨೧-೨೨ರ ಹಣಕಾಸು ವರ್ಷದಲ್ಲಿ, ಜುಲೈ-ಸೆಪ್ಟೆಂಬರ್ ನಡುವಿನ ತ್ರೈಮಾಸಿಕದಲ್ಲಿ ಜಿಯೋ ಕಂಪನಿಯು ರೂ.೩೭೨೪ ಕೋಟಿ ಲಾಭ ಗಳಿಸಿದೆ, ಇದು ಕಳೆದ ವರ್ಷದ ಇದೇ ಅವಧಿಗಿಂತಲೂ ೨೪% ಹೆಚ್ಚಾಗಿದೆ.

ಟೆಲಿಫೋನ್ ದರಗಳಲ್ಲಿ ವಿಪರೀತ ಹೆಚ್ಚಳದ ಹೊರತಾಗಿಯೂ ಮೊಬೈಲ್ ಫೋನ್ ಕಂಪನಿಗಳು ಭಾರಿ ಲಾಭವನ್ನು ಗಳಿಸುತ್ತಿವೆ. ಶಹಾಬಾದನಲ್ಲಿ ಸಹ ಟ್ವೀಟ್ ಮತ್ತು ರೀಟ್ವೀಟ್ ಮಾಡುವ ಮೂಲಕ ಈ ಚಳವಳಿಯಲ್ಲಿ ಪಾಲ್ಗೊಂಡು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿಲಾಯಿತು. ಎಂದು ಎಐಡಿವೈಒ ಜಿಲ್ಲಾ ಅಧ್ಯಾಕ್ಷರಾದ ಜಗನ್ನಾಥ ಎಸ್ ಹೆಚ ಹೇಳಿದರು.

ಎಐಡಿವೈಒ ಸ್ಥಳೀಯ ಅಧ್ಯಾಕ್ಷರದ ಕಾ|| ರಘು ಪವಾರ , ಎಐಡಿಎಸ್‌ಒ ಅಧ್ಯಾಕ್ಷರಾದ ಕಾ|| ಕಿರಣ ಮಾನೆ, ಎಐಡಿವೈಒ ಉಪ್ಪಾಧ್ಯಾಕ್ಷರಾದ ತೇಜೆಸ್ ಆರ್ ಇಂಬ್ರಾಹಿಪುರ್, ಶ್ರೀನಿವಾಸ್ ಡಿ, ಅಜಯ ಎಸ್ ಜಿ, ದೇವರಾಜ, ಸುರೇಶ, ಅಜಯ ಎ ಜಿ, ತಿರುಪತಿ ಪವಾರ, ಸಿದ್ದು ಕೆ, ಭಾಗವಹಿಸಿದರು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

52 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

12 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

15 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

15 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420