ಹೈದರಾಬಾದ್ ಕರ್ನಾಟಕ

ಮಾಧ್ಯಮಗಳು ಜನರ ಧ್ವನಿಯಾಗಿ ಕೆಲಸ ಮಾಡಲಿ: ಮರಿಯಪ್ಪ ಹಳ್ಳಿ

ಶಹಾಬಾದ: ಮಾಧ್ಯಮಗಳು ಇಂದು ಜನರ ಧ್ವನಿಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ರವಿವಾರ ನಗರದ ಲಕ್ಷ್ಮಿ ಗಂಜ್‌ನಲ್ಲಿ ಆಯೋಜಿಸಲಾದ ಮಾಸ್ ಮೀಡಿಯಾ ನೆಟವರ್ಕ ಫೌಂಡೇಶನ ವತಿಯಿಂದ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜಮುಖಿ, ಜನಮುಖಿಯಾಗಿ ಜನರ ಧ್ವನಿಯನ್ನು ಸರ್ಕಾರಕ್ಕೆ ತಿಳಿಸುವ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ಮಾಧ್ಯಮ ರಂಗ ಮಾಡುತ್ತಿತ್ತು.ಆದರೆ ಜನರ ಧ್ವನಿಯಾಗಿ ಕೆಲಸ ಮಾಡುವ ಮಾಧ್ಯಮಗಳು ಇಂದು ಎಲ್ಲೋ ಸಮಾಜ ಮುಖಿಯಾಗಿರುವ ವರದಿಗಳನ್ನು ಮರೆಮಾಚುವ ಕೆಲಸ ಮಾಡುತ್ತಿರುವುದು ಬೇಸರ ತರುತ್ತಿದೆ ಎಂದರು.

ಕೆಲವು ವರ್ಷಗಳಿಂದ ಮಾಧ್ಯಮ ಬಂಡವಾಳಶಾಹಿ ಹಾಗೂ ರಾಜಕೀಯ ಮುಖಂಡ ದಾಳವಾಗಿ ಕೆಲಸ ಮಾಡುತ್ತಿವೆ.ಒಂದೊಂದು ಮಾಧ್ಯಮದವರು ಒಂದೊಂದು ಪಕ್ಷಕ್ಕೆ ಅಂಟಿಕೊಂಡು ಜನರ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲು ಹೊರಟಿರುವುದು ಮಾತ್ರ ದುರಂದ ಎಂದರು. ಸಮಾಜಮುಖಿಯಾಗಿ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಹಂಬಲದಿಂದ ಹುಟ್ಟಿಕೊಳ್ಳುತ್ತಿರುವ ಮಾಸ್ ಮೀಡಿಯಾ ನೇಟವರ್ಕ ಆರಂಭವಾಗಲಿ.ಜನರ ಧ್ವನಿಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.

ಮಾಸ್ ಮೀಡಿಯಾ ನೆಟವರ್ಕನ ಅಧಿಕಾರಿ ಬಾಲಾಜಿ ಕುಂಬಾರ ಮಾತನಾಡಿ, ಪ್ರಜಾಪ್ರಭುತ್ವ ಕಾವಲು ನಾಯಿ ಎಂದು ಕರೆಯಿಸಿಕೊಳ್ಳುವ ಮಾಧ್ಯಮ ಇಂದು ಸಾಕು ನಾಯಿಯಾಗಿ ಕೆಲಸ ಮಾಡುವ ಮೂಲಕ ತನ್ನ ಬದ್ಧತೆ ಹಾಗೂ ಘನತೆಯನ್ನು ಕಳೆದುಕೊಳ್ಳುತ್ತಿದೆ.ಶ್ರಮಿಕರ, ಕಾರ್ಮಿಕರ, ಹೋರಾಟಗಾರರ ಹಾಗೂ ಸಾರ್ವಜನಿಕರ ಧ್ವನಿಯಾಗಿ ಕೆಲಸ ಮಾಡದೇ, ಪಕ್ಷದ ಹಾಗೂ ರಾಜಕೀಯ ಮುಖಂಡರ ಪರವಾಗಿ ಕಾರ್ಯನಿರ್ವಹಿಸುತ್ತಿದೆ.

ಆದ್ದರಿಂದ ಪರ್ಯಾಯವಾಗಿ ದೇಶದಲ್ಲಿಯೇ ಬಹುದೊಡ್ಡ ನೆಟ್‌ವರ್ಕ ಮಾಧ್ಯಮವನ್ನು ಮಾರ್ಚ ೮ ಕ್ಕೆ ಉದ್ಘಾಟನೆಗೊಳ್ಳುತ್ತಿದೆ. ಸಾರ್ವಜನಿಕರು ನಿಮ್ಮ ಸುತ್ತಮುತ್ತಲಿನ ವರದಿಗಳನ್ನು ನೀವೇ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಇದು ಜನರ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಎಐಎಮ್‌ಎಸ್‌ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ,ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ ಮಾತನಾಡಿ, ಉಪನ್ಯಾಸಕ ಪೀರಪಾಶಾ, ಎಐಡಿವಾಯ್‌ಒ ಜಿಲ್ಲಾಧ್ಯಕ್ಷ ಜಗನ್ನಾಥ.ಎಸ್.ಹೆಚ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಗಿರಿಮಲ್ಲಪ್ಪ ವಳಸಂಗ ವೇದಿಕೆಯ ಮೇಲಿದ್ದರು.

ದ.ವಿ.ಒ ಸಂಚಾಲಕ ಪೂಜಪ್ಪ ಮೇತ್ರೆ, ಶರಣಗೌಡ ಪಾಟೀಲ, ಕುರುಬ ಸಮಾಜದ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಶಾಂತಪ್ಪ ಹಡಪದ, ಮಲ್ಲಣ್ಣ ಮರತೂರ, ನರಸಿಂಹಲೂ ರಾಯಚೂರಕರ್,ಬಸವರಾಜ ಮಯೂರ, ಭರತ್ ಧನ್ನಾ,ಮಲ್ಲಣ್ಣ ಮಸ್ಕಿ, ರಾಘವೇಂದ್ರ ಗುಡೂರ,ಮಲ್ಲೇಶಿ ಭಜಂತ್ರಿ, ಮಲ್ಲಣ್ಣ ಕಾರೊಳ್ಳಿ, ಈರಣ್ಣ ಕುರಿ,ರಾಮಣ್ಣ ಇಬ್ರಾಹಿಂಪೂರ, ಸಾಯಬಣ್ಣ ಗುಡುಬಾ, ಗೌತಮ ಬಿದನೂರ್,ಅರುಣಕುಮಾರ ಜಾಯಿ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago