ಕಲಬುರಗಿ: ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಭೆಗೆ ಅವಕಾಶ ಸಿಗುತ್ತಿದ್ದು, ಚಿತ್ರಕಲೆಯಲ್ಲಿ ಬಾಬಾ ಸಾಹೇಬರನ್ನು ಗುರುತಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.
ನಗರದ ರಂಗಾಯಣದಲ್ಲಿ ಸ್ಲಂ ಜನಾಂದೋಲನ? ಕಲ್ಯಾಣ ಕರ್ನಾಟಕ ಜನಜಾಗ್ರತಿ ವೇದಿಕೆ ಹಾಗೂ ಮನಸ್ವಿ ಸಾಂಸ್ರ್ಕತಿಕ ನಾಟ್ಯ ಕಲಾವಿದರ ಸಂಘ ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೧ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಬಾ ಸಾಹೇಬರು ಈ ದೇಶಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಬಹುಜನರು ಜಾಗ್ರತರಾಗುವುದರ ಮೂಲಕ ಬಾಬಾ ಸಾಹೇಬರ ವಿಚಾರಗಳು ಜೀವಂತವಾಗಿರಿಸಬೇಕು. ಬಾಬಾ ಸಾಹೇಬರನ್ನು ಕಲಾವಿದರು ತಮ್ಮ ಕೈ ಚಳಕದಲ್ಲಿ ಚಿತ್ರಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲೆ ಯಾರ ಸೊತ್ತಲ್ಲ ಎಂಬುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು.
ಸಂವಿಧಾನ ಜಾರಿಯಾದ ಮೇಲೆ ಎಲ್ಲ ವರ್ಗದ ಜನರೂ ಕೂಡ ಯಾವ ವ್ರತ್ತಿಯಾದರೂ ಮಾಡಬಹುದು ಎಂದು ಬರೆದ ಡಾ.ಅಂಬೇಡ್ಕರ್ ಚಿಂತನೆ ಗಮನಾರ್ಹವಾದದ್ದು. ಈ ದೇಶದ ಮೇಲ್ವರ್ಗದವರಿಗೂ ಕೂಡ ಬಾಬಾ ಸಾಹೇಬರು ಹಕ್ಕುಗಳನ್ನು ನೀಡಿದ್ದಾರೆ. ಎಲ್ಲವನ್ನು ಪಡೆದುಕೊಂಡಿರುವ ಜನರು ಅವರನ್ನು ಮರೆಯುತ್ತಿರುವುದು ವಿಷಾಧನಿಯ ಎಂದರು.
ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ? ಸ್ಲಂ ಜನಾಂದೋಲನದ ಜಿಲ್ಲಾಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ? ಕಕ ಜನಜಾಗ್ರತಾ ವೇದಿಕೆ ಅಧ್ಯಕ್ಷ ಗುರಣ್ಣ ಐನಾಪುರ? ಕಲಾವಿದ ಸೂರ್ಯಕಾಂತ ನಂದೂರ? ಹಣಮಂತ ನಿಂಬರ್ಗಾ? ಬಾಬು ದಂಡಿನಕರ್? ಮಲ್ಲಿಕಾರ್ಜುನ ಕೆರಮಗಿ? ಜಿ ಶಿವಶಂಕರ್? ವಿಕ್ರಂ ಗೋಕುಲಕರ್? ವಿಕ್ರಂ ಒಂಟಿ? ಅಶೋಕ ಹರನಾಳ? ಡಾ.ಅಶೋಕ ದೊಡ್ಮನಿ ಸೇರಿದಂತೆ ಇತರರು ಇದ್ದರು. ಅಶೋಕ ಚಿತ್ತೋಡಿ ಸ್ವಾಗತಿಸಿದರು. ಗಂಗಮ್ಮ ಪ್ರಾರ್ಥಿಸಿದರು. ಲಕ್ಷ್ಮಿ ಬಿ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…