ರಾಜ್ಯದ ಗೃಹ ಮಂತ್ರಿ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ.ಪೊಲೀಸರ ವಿರುದ್ಧವೆ ಮಾತನಾಡುತ್ತಾರೆ.ಹೆಸರಿಗೆ ಮಾತ್ರ ಅರಗ ಜ್ಞಾನೇಂದ್ರ ಅವರಿಗೆ ಅರ್ಧ ಜ್ಞಾನ ಇದೆ.ಅವರೇ ಹೇಳುತ್ತಿದ್ದಾರೆ ಪೊಲೀಸರು ಭ್ರಷ್ಟರು, ಎಂಜಲು ಕಾಸು ತಿಂದು ನಾಯಿಗಳ ತರಹ ಬಿದ್ದಿರುತ್ತಾರೆ ಎಂದು ಗೃಹಮಂತ್ರಿ ಪೊಲೀಸರಿಗೆ ಹೇಳುತ್ತಿದ್ದಾರೆ ಎಂದರೆ ನಾವು ನೀವು ಹೇಳಬೇಕು. – ಪ್ರಿಯಾಂಕ್ ಖರ್ಗೆ ಶಾಸಕ ಚಿತ್ತಾಪೂರ.
ಶಹಾಬಾದ: ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಭಂಕೂರ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಮಿನಿ ಇಡ್ಲಿ ಸವೆದ ಶಾಸಕ ಪ್ರಿಯಾಂಕ ಖರ್ಗೆ
ಈ ಪ್ರತಿಭಟನೆಯಲ್ಲಿ ಚಿತ್ತಾಪೂರ ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಭ್ರಷ್ಟ ಬಿಜೆಪಿ ಸರಕಾರದ ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡೆ ಗಮನ ಕೊಡದೆ ಹಿಜಾಬ್ ಹಲಾಲ್ ಕಟ್ ಜಟಕಾ ಕಟ್ ಅಂತ ಹೇಳುತ್ತಾ ಕೋಮುಭಾವನೆಗಳನ್ನ ಕೆರಳಿಸುತ್ತಾ ಜಾತಿ ಜಾತಿಗಳ ಮಧ್ಯೆಕಲಹ ತಂದೊಡ್ಡುತ್ತ ಕಾಲಹರಣ ಮಾಡುತ್ತಿರುವ ನೀತಿಗೆಟ್ಟ ಸರ್ಕಾರ ಮುಂದುವರಿಯಬಾರದು ಎಂದರು.
ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ಹಾಗೂ ಗತ್ಯ ವಸ್ತುಗಳ ಬೆಳೆ ಗಗನಕ್ಕೆ ಏರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ಜನವಿರೋಧಿ ಸರಕಾರವೇ ಬಿಜೆಪಿ ಸರಕಾರ. ಮನಮೋಹನಸಿಂಗ ಅವರು ಪ್ರಧಾನಿಯಾಗಿದ್ದಾಗ ಕೇವಲ 5 ರೂ. ಬೆಲೆ ಏರಿಕೆಯಾದರೆ ಸಿಲಿಂಡರ್, ಒಲೆ ಹಿಡಿದು ರಸ್ತೆಗೆ ಬರುತ್ತಿದ್ದ ಬಿಜೆಪಿಗರು ಇಂದು ಸುಮ್ಮನಾಗಿದ್ದಾರೆ.ಬಿಜೆಪಿ ಇದೊಂದು ಯುವಕರ, ರೈತರ, ಮಹಿಳೆಯರ ಹಾಗೂ ಕಾರ್ಮಿಕರ ವಿರೋಧಿ ಸರಕಾರವಾಗಿದೆ. ಇಂದು ಆರ್ಥಿಕ ಪ್ರಗತಿ ಕುಸಿಯುತ್ತಿದೆ.
ಇದನ್ನೂ ಓದಿ: ಕಲಬುರಗಿ ವಿಮಾನ ನಿಲ್ದಾಣಕ್ಕಉತ್ತಮ ಗುಣಮಟ್ಟದ ಒಳ್ಳೆಯ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ
ಕೇವಲ ಅದಾನಿ, ಅಂಬಾನಿಗೋಸ್ಕರ ಇರುವ ಸರಕಾರವಾಗಿದೆ.ರೈತರ ಆದಾಯ ಮಾಡಿದ್ದೀರಾ ಎಂದರೆ ಭಗವತ್ ಗೀತಾ ಓದಿದ್ದೀರಾ ಎಂದು ಕೇಳುತ್ತಾರೆ. ಅಡುಗೆ ಎಣ್ಣೆ ಜಾಸ್ತಿಯಾಗಿದೆ ಎಂದು ಚರ್ಚೆ ಮಾಡೋಣ ಎಂದರೆ ಹಿಜಾಬ ಬಗ್ಗೆ ಚರ್ಚೆ ಮಾಡೋಣ ಅಂತಾರೆ.ನಿರೋದ್ಯೋಗ ಬಗ್ಗೆ ಮಾತನಾಡೋಣ ಎಂದರೆ ಹಲಾಲ ಕಟ್, ಜಟಕಾ ಕಟ್ ಬಗ್ಗೆ ಮಾತಾಡೋಣ ಅಂತಾರೆ. ಈ ಸರಕಾರ ಏನಿದೆ ನಿಜವಾಗಲೂ ಹಿಂದು ಜನರ ಪರವಾಗಿಲ್ಲ.
ಕಾರಣ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಬದಲು 100 ಕೋಟಿ ಕೊಟ್ಟಿದ್ದಾರೆ.ಅದರಲ್ಲಿ ಎಷ್ಟು ಖರ್ಚು ಮಾಡಿದ್ದೀರಾ ಎಂದು ಕೇಳಿದರೆ ಶೂನ್ಯ.ದೇವರಾಜ ಅರಸ ನಿಗಮದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿಲ್ಲ.ಅಂಬೇಡ್ಕರ್, ಒಕ್ಕಲಿಗರ ನಿಗಮ, ಆದಿ ಜಾಂಭವ ನಿಗಮ ಶೂನ್ಯ.ಮರಾಠಾ ನಿಗಮ ಇನ್ನೂ ಸ್ಥಾಪನೆಯಾಗಿಲ್ಲ. ಆರ್ಥಿಕ ಪ್ರಗತಿ ಕೂಡ ಶೂನ್ಯ.ನಾವು ಬಜೆಟ್ ಕಟ್ ಬಗ್ಗೆ ಮಾತನಾಡಿ ಎಂದರೆ ಬಿಜೆಪಿಯವರು ಹಲಾಲ ಕಟ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಬ್ರಷ್ಟಾಚಾರ ನಿರೋದ್ಯೋಗ, ಬೆಲೆ ಏರಿಕೆಯ ಬಿಸಿ ಸಾಮನ್ಯ ಜನರಿಗೆ ತಟ್ಟುತ್ತದೆ.ಯಾವುದೇ ಅಭಿವೃದ್ಧಿ ಮಾಡದೇ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ವಿಷಯಗಳನ್ನು ತೆಗೆದು ಜನರಲ್ಲಿ ವಿಷ ಬೀಜ ಬಿತ್ತುತ್ತಿದೆ ಎಂದರು.
ಇದನ್ನೂ ಓದಿ: ದಮನಿತರನ್ನು ರಕ್ಷಿಸುವುದು ಸಂವಿಧಾನ: ನಮೋಶಿ
ಬ್ಲಾಕ್ ಕಾಮಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಸುರೇಶ ಮೆಂಗನ್, ಮುಜಾಹಿದ್ ಹುಸೇನ್, ಮೃತ್ಯುಂಜಯ ಹಿರೇಮಠ,ಚಂದು ಜಾಧವ, ಸಿದ್ದುಗೌಡ ಅಫಜಲಪೂರಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ್, ಮಲ್ಲಿಕಾರ್ಜುನ್ ಪೂಜಾರಿ,ಶರಣಬಸಪ್ಪ ಧನ್ನಾ, ಮುನ್ನಾಪಟೇಲ್, ಮಹೇಶ ಧರಿ, ಕಿರಣ ಚವ್ಹಾಣ, ಮರಲಿಂಗ ಕಮರಡಗಿ, ಮಮ್ಮದ್ ಜಾಕೀರ್, ಜಾನಿ ಪಟೇಲ್, ಶರಣಗೌಡ ದಳಪತಿ, ನಾಗೇಂದ್ರ ನಾಟೇಕಾರ,ಸಾಯಿಬಣ್ಣ ಭೀಮನಹಳ್ಳಿ,ದೇವರಾಜ್, ವಿದ್ಯಾಸಾಗರ, ಮಲ್ಲಣ್ಣ ಅಲ್ಲೂರ್, ರವಿ ರಾಠೋಡ, ಅಂಜನಕುಮಾರ, ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಈಶ್ವರಪ್ಪ ವಜಾಗೊಳಿಸಿ, ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಪ್ರಿಯಾಂಕ್ ಖರ್ಗೆ ಆಗ್ರಹ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…