ಕಲಬುರಗಿ ವಿಮಾನ ನಿಲ್ದಾಣಕ್ಕಉತ್ತಮ ಗುಣಮಟ್ಟದ ಒಳ್ಳೆಯ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ

0
82

ಕಲಬುರಗಿ: ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಒಳ್ಳೆಯ ಸೌಲಭ್ಯಗಳನ್ನು ನೀಡಬೇಕೆಂದು ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರ ಮೂಲಕ ಕೇಂದ್ರ ಸರಕಾರದ ನಾಗರೀಕ ವಿಮಾನಯಾನ ಸಚಿವರಾದ ಜ್ಯೋತಿರಾಧಿತ್ಯ ಎಮ್. ಸಿಂದಿಯಾಜಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕೂಟರ ದೊರೆ “ಶ್ರೀ ಅಮೋಘವರ್ಷ ನ್ರಪತುಂಗ ವಿಮಾನ ನಿಲ್ದಾಣ” ಎಂದು ಹೆಸರನ್ನು ಇಡಬೇಕು, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕಲಬುರಗಿ ವಿಮಾನ ನಿಲ್ದಾಣದವರೆಗೂ ಚತುಷ್ಪಥ ಹೆದ್ದಾರಿಯ ನಿರ್ಮಾಣ. ಕಲಬುರಗಿ ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯು ಕಿರಿದಾಗಿದ್ದು ವಿಪರೀತ ವಾಹನ ದಟ್ಟಣೆ ಇರುತ್ತದೆ. ಅದಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕಲಬುರಗಿ ವಿಮಾನ ನಿಲ್ದಾಣದವರೆಗು ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಕಲಬುರಗಿ ವಿಮಾನ ನಿಲ್ದಾಣದ ಸೇವೆಯನ್ನು ವಿಜಯಪುರ, ಯಾದಗಿರಿ, ಬೀದರ ಹಾಗೂ ಪಕ್ಕದ ಮಹಾರಾಷ್ಟ್ರದ ರಾಜ್ಯದವರು ಬಳಸುತ್ತಿದ್ದಾರೆ. ಹಾಗಿದ್ದರೂ ಕಲಬುರಗಿ ವಿಮಾನ ನಿಲ್ದಾಣ ಇದೆ ಎನ್ನುವ ಮಾರ್ಗಸೂಚಿ ಫಲಕಗಳು ಬಹಳ ಕಡಿಮೆ ಅಷ್ಟರ ಮಟ್ಟಿಗೆ ಕಳಪೆ ಮಾರ್ಗಸೂಚಿ ವ್ಯವಸ್ಥೆ ಇದೆ, ಇದು ನಿಲ್ದಾಣಕ್ಕೆ ಪ್ರಯಾಣಿಕರನ್ನ ಸೆಳೆಯಲು ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದ ಎದುರು ಮಾರ್ಗಸೂಚಿ ಫಲಕವನ್ನು ಬ್ರಹತ ಮತ್ತು ಆಕರ್ಷಣಿಯವಾಗಿ ನಿರ್ಮಿಸಬೇಕು. ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ ಲ್ಯಾಂಡಿಂಗ ಸೌಲಭ್ಯವನ್ನು ಪ್ರಾರಂಭಿಸಬೇಕು., ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಬೇಕು, ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗಲು ಬೆಳಿಗ್ಗೆ 8 ಗಂಟೆಗೆ ಮತ್ತು ಬೆಂಗಳೂರಿನಿಂದ ವಾಪಸ್ಸು ಬರಲು ಸಾಯಂಕಾಲ 6 ಗಂಟೆಗೆ ಹೊಸ ವಿಮಾನ ಹಾರಾಟವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ಪ್ರಮುಖ ನಗರಗಳಾದ ಮುಂಬೈ, ಸೂರತ, ಅಜ್ಮೇರ, ಗೋವಾ, ಮಂಗಳೂರಿಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆಯನ್ನು ಆರಂಭಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಉಪಾಧ್ಯಕ್ಷ ಅನೀಲ ಕಪನೂರ, ನಗರಾಧ್ಯಕ್ಷ ಗೌತಮ ಕರಿಕಲ್, ಸಂಘಟಕರಾದ ಉದಯಕುಮಾರ ಖಣಗೆ, ಸಾಗರ ಪಾಟೀಲ್, ಸೂರ್ಯಪ್ರಕಾಶ ಚಾಳಿ, ಪ್ರವೀಣ ಖೇಮನ್, ಜೈಭೀಮ ಮಾಳಗೆ, ನಾಗು ಡೊಂಗರಗಾಂವ, ಸಿದ್ದಲಿಂಗ ಉಪ್ಪಾರ, ದೇವು ದೊರೆ, ಮಹೇಶ ಮಾನೆ, ಶ್ರೀಧರ ಪೋದ್ದಾರ, ಚಂದ್ರಶೇಖರ ನಿಂಬರ್ಗಿ, ರಾಕೇಶ ದೊಡ್ಡಮನಿ, ಕುಶಾಲ ಕಪನೂರ, ಪಿಂಟು ಬೋಧನ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here