ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜೀವನದಲ್ಲಿ ಬಹಳ ಶೋಷಣೆಯನ್ನು ಅನುಭವಿಸಿದವರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು.
ಇಲ್ಲಿನ ಪೂಜಾ ಕಾಲೋನಿಯಲ್ಲಿ ವಾಸು ಒಂಟಿ ಗೆಳೆಯರ ಬಳಗದ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೧ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ದೇಶದಲ್ಲಿ ದಮನಿತರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯುವುದಕ್ಕೆ ಸಂವಿಧಾನ ಕೊಟ್ಟಿದ್ದಾರೆ. ಇವತ್ತು ಈ ಸಭೆಯಲ್ಲಿ ಮಾನಾಡುವುದಕ್ಕೂ ಮತ್ತು ವಿಧಾನ ಪರಿಷತ್ ಸದಸ್ಯ ಆಗುವುದಕ್ಕೆ ಈ ದೇಶದ ಸಂವಿಧಾನವೇ ಕಾರಣ ಇದೆ. ಅಂಬೇಡ್ಕರ್ ಒಬ್ಬರು ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ, ಕಾನೂನು ಪಂಡಿತ್ ಮೇಲಾಗಿ ಮಹಾನ್ ಮೇಧಾವಿ ಆಗಿದ್ದಾರೆ. ಭಾರತ ದೇಶಕ್ಕೆ ಅಂಬೇಡ್ಕರ್ ಸೇವೆ ಅಪಾರವಾಗಿ ಆಗಿದೆ ಎಂದರು
ಅಂಬೇಡ್ಕರ್ ಹೇಳಿದಂತೆ ನಾವೆಲ್ಲರೂ ನಡೆದು ಕೊಳ್ಳುವುದು ಬಹಳ ಅವಶ್ಯಕತೆ ಇದೆ. ಹೀಗಾಗಿ ಇಡೀ ದೇಶಾದ್ಯಂತ ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಇಡುವುದರ ಮುಖಾಂತರ ಅವರನ್ನು ಸ್ಮರಿಸಿಸುತ್ತೀದ್ದೇವೆ ಎಂದು ಅವರು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಚ್ ಎಸ್ ಜಂಗೆ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್. ಟಿ. ಫೋತೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅರ್ಜುನ್ ಬದ್ರೆ, ಡಾ. ಮಲ್ಲೇಶ್ ಸಜ್ಜನ, ವಿಶೇಷ ಉಪನ್ಯಾಸ ನೀಡಿದರು. ವಾಸು ಒಂಟಿ, ಮಾಪ್ಪಣ್ಣ ಗಂಜಗೇರಿ, ಇತರರು ಇದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್ ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಚ್ ಎಸ್ ಜಂಗೆ, ಡಾ. ಎಚ್. ಟಿ. ಫೋತೆ, ಅರ್ಜುನ್ ಬದ್ರೆ, ಡಾ. ಮಲ್ಲೇಶ್ ಸಜ್ಜನ ಸೇರಿದಂತೆ ಮುಂತಾದವರು ಇದ್ದರು