ಪ್ರವಚನ ಹಾಗೂ ಯೋಗ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದ ಮೇಲೆ ಕುರ್ಚಿಯಿಂದ ಕೆಳಗೆ ವೇದಿಕೆಯ ಮೇಲೆ ಕುಳಿತು ಪ್ರವಚನ ನೀಡಲು ಪ್ರಾರಂಭಿಸಿದ ನಿರಂಜನ್ ಸ್ವಾಮಿಗಳನ್ನು ಕಂಡು ಶಾಸಕರು ತಕ್ಷಣವೇ ಕುರ್ಚಿಯಿಂದ ಎದ್ದು, ವೇದಿಕೆಯ ಮೇಲೆ ಕುಳಿತು ಸುಮಾರು ಒಂದು ಗಂಟೆ ಪ್ರವಚನ ಆಲಿಸಿದರು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ನಯ,ವಿನಯ, ಸರಳತೆ ಅಳವಡಿಸಿಕೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಶಹಾಬಾದ: ಪುರಾಣ-ಪ್ರವಚನಗಳು ಆಲಿಸುವುದರಿಂದ ಬದುಕಿಗೆ ನೆಮ್ಮದಿ ಕೊಡುವುದಲ್ಲದೇ, ಕೆಟ್ಟ ದಾರಿಗೆ ಹೋಗದಂತೆ ನಿಯಂತ್ರಿಸುತ್ತವೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಗುರುವಾರ ನಗರದ ಶರಣಬಸವೇಶ್ವರ ದೇವಾಲಯದಲ್ಲಿ ಪ್ರವಚನ ಹಾಗೂ ಯೋಗ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ನಾಳೆ ಪದಗ್ರಹಣ
ಮನುಷ್ಯನಲ್ಲಿ ಇಂದು ಸಂಸ್ಕøತಿಗಿಂತ ವಿಕೃತಿ ಹೆಚ್ಚಾಗಿದೆ.ಮನುಷ್ಯ ಜನ್ಮದ ಸಾರ್ಥಕತೆ ಅರಿಯುವ ಪ್ರಯತ್ನ ಮಾಡಬೇಕಿದೆ. ಇಂದಿನ ಕೃತಕ ಜೀವನದ ವಾತಾವರಣದಲ್ಲಿ ಜೀವಿಸುವ ವ್ಯಕ್ತಿ ನೆಮ್ಮದಿ ಇಲ್ಲದೆ ಒದ್ದಾಡುತ್ತಿದ್ದಾನೆ. ಅದಕ್ಕಾಗಿ ಶರಣರ ಸಂತರ ಮಹಾತ್ಮರ ಪುರಾಣ ಪ್ರವಚನವನ್ನು ಆಲಿಸುವುದರಿಂದ ಅವರ ಆದರ್ಶ ಜೀವನದ ಸಂದೇಶಗಳನ್ನು ಮೈಗೂಡಿಸಿಕೊಂಡಾಗ ನಮ್ಮಗಳ ಜೀವನ ಪಾವನಗುತ್ತದೆ. ವಚನಗಳು ಆಲಿಸುವುದರಿಂದ ಮಾನಸಿಕ ಮತ್ತು ಬೌದ್ಧಿಕವಾಗಿ ವಿಕಾಸ ಹೊಂದಬಹುದು ಬೆಳಗಾವಿಯ ನಿರಂಜನ ಮಹಾಸ್ವಾಮಿಗಳು ಮಾತನಾಡಿ,ಧರ್ಮದಿಂದಲೇ ಮಾರ್ಗದಲ್ಲಿ ನಡೆದರೆ ಮಾತ್ರ ಶಾಂತಿ ನೆಲೆಸುತ್ತದೆ.
ಅಧರ್ಮದಿಂದ ಬದುಕುವವರು ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಲಾರರು. ಪರೋಪಕಾರ, ದಾನ, ದಾಸೋಹ ಮತ್ತು ಕಾಯಕದಿಂದ ಮಾನವ ದೊಡ್ಡವನೆನಿಸಿಕೊಳ್ಳುತ್ತಾನೆ. ನಾವೆಲ್ಲರೂ ಧರ್ಮದ ತಿರುಳನ್ನು ಅರಿತು ಬದುಕಬೇಕು. ಧರ್ಮ ಎಲ್ಲರನ್ನು ಪ್ರೀತಿಸಲು ತಿಳಿಸುತ್ತದೆ. ಅದೇ ಮಾನವ ಧರ್ಮ. ಸ್ಥಿತಿವಂತರು ದುರ್ಬಲರಿಗೆ ಮತ್ತು ಅಸಹಾಯಕರಿಗೆ ನೆರವು ನೀಡಿ ಪುಣ್ಯವಂತರಾಗಬೇಕು ಎಂದರು. ಹರಿಯುವ ಮನುಷ್ಯನ ಮನಸ್ಸನ್ನು ಏಕಾಗತೆಯಲ್ಲಿಟ್ಟುಕೊಳ್ಳುವ ಜತೆಗೆ ಮಾನಸಿಕ ನೆಮ್ಮದಿಗೆ ದೃಷ್ಟಿಯೋಗ ಮಾಡಬೇಕು.
ಇದನ್ನೂ ಓದಿ: ಕಂಬವೇರಿ ವಿದ್ಯುತ್ ದುರಸ್ಥಿತಿ ವೇಳೆ ವಿದ್ಯುತ್ ಸ್ಪರ್ಷಿಸಿ ಲೈನ್ ಮ್ಯಾನ್ ಸಾವು
ದೃಷ್ಟಿಯೋಗದಿಂದ ಮನುಷ್ಯನಿಗೆ ಆತ್ಮಬಲ ಬರುತ್ತದೆ. ಆದ್ದರಿಂದ ಲಿಂಗ ಪೂಜೆಯಲ್ಲಿಯೇ ದೇವರನ್ನು ಕಾಣಬೇಕು.ಅದಕ್ಕಾಗಿಯೇ ಲಿಂಗ ಪೂಜೆಯ ಮಹತ್ವವನ್ನು ತಿಳಿಸಿಕೊಡಲಾಗಿದೆ.ಯೋಗ ಮತ್ತು ಲಿಂಗಪೂಜೆ ಇವೆರಡು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುವ ಶಕ್ತಿ ಹೊಂದಿವೆ ಎಂದು ತಿಳಿಸಿದರು.ಕವಲಗಾದ ಷಣ್ಮುಖ ಶಿವಯೋಗಿ ಸ್ವಾಮಿಗಳು, ಡಾ.ವೀರಭದ್ರಪ್ಪ ಇಂಗಿನಶೆಟ್ಟಿ ವೇದಿಕೆಯ ಮೇಲಿದ್ದರು.
ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಶರಣು ಜೇರಟಗಿ, ಶಿವಾನಂದ ಪಾಟೀಲ, ಶಿವಕುಮಾರ ಇಂಗಿನಶೆಟ್ಟಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…