ಕಂಬವೇರಿ ವಿದ್ಯುತ್ ದುರಸ್ಥಿತಿ ವೇಳೆ ವಿದ್ಯುತ್ ಸ್ಪರ್ಷಿಸಿ ಲೈನ್ ಮ್ಯಾನ್ ಸಾವು

0
28

ಕಲಬುರಗಿ: ಕಂಬವೇರಿ ವಿದ್ಯುತ್ ಲೈನ್ ದುರಸ್ಥಿ ಮಾಡುತ್ತಿದ ವೇಳೆ ಒರ್ವ ಲೈನ್ ಮ್ಯಾನ್ ಮೃತಪಟ್ಟಿದ್ದು, ಇನ್ನೋರ್ವನ್ನು ಜೀವನ ಮರಣದ ನಡುವೆ ಹೋರಾಟ ನಡೆಸಿತ್ತಿರುವ ಘಟನೆ ಇಲ್ಲಿನ ಚಿಂಚೋಳಿ ತಾಲ್ಲೂಕಿನ ಐನೋಳಿ ಗ್ರಾಮದಲ್ಲಿ ಶನಿವಾರ ಅಪಾರ್ಹನ್ನ ಸಂಭವಿಸಿದೆ.

ಐನೋಳಿ ಜೆಸ್ಕಾಂ ಲೈನ್‌ಮನ್ ಸದ್ದಾಂ ಮೃತಪಟ್ಟಿದ್ದು, ಇನ್ನೋರ್ವ ಪಠಾಣ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Contact Your\'s Advertisement; 9902492681

ಐನೋಳ್ಳಿ ಗ್ರಾಮಕ್ಕೆ ವಿದ್ಯುತ್ ಲೈನ್ ಹಾಕುವಾಗ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಕಂಬದ ಮೇಲೆ ವಿದ್ಯುತ್ ಶಾಕ್​​ದಿಂದಾಗಿ‌ ಕಂಬದಲ್ಲಿಯೇ ಶವದಂತೆ ಜೋತುಬಿದ್ದಿದ್ದ ಲೈನ್​ಮೆನ್​ ಅವರನ್ನು ಸ್ಥಳೀಯರ ಸಹಾಯದಿಂದ ಜೆಸ್ಕಾಂ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇಬ್ಬರು ಲೈನ್ ಮ್ಯಾನ್ ಗಳ ಸಂಪೂರ್ಣ ಮೈ ಸುಟ್ಟು ಹೋಗಿದೆ.

ಅವಘಡಕ್ಕೆ ಜೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಐನೋಳ್ಳಿ ಗ್ರಾಮಸ್ಥರೊಂದಿಗೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಮುಖಂಡರಾದ ಸುಭಾಷ. ವ್ಹಿ ರಾಠೋಡ, ಅವರಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಾಕರ್ತರು ಚಿಂಚೋಳಿ ಜೆಸ್ಕಾಂ ಕಛೇರಿ ಎದುರುಗಡೆ ಸತತ 3 ಘಂಟೆಗಳ ಕಾಲ ಧರಣಿ ಕುಳಿತು ಮಾತನಾಡಿ ಇಂತಹ ಬೇಜವಾಬ್ದಾರಿತನಕ್ಕೆ ಕಾರಣರಾದ ಅಧಿಕಾರಿಗಳನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಗೊಳಿಸಬೇಕು ಲೈನ್ ಮ್ಯಾನ್ ಸದ್ದಾಂ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿ ಹಾರುನ ರವರ ಆಸ್ಪತ್ರೆ ವೆಚ್ಚವನ್ನು ಜೆಸ್ಕಾಂ ಇಲಾಖೆಯೇ ಭರಿಸಿ ಇಬ್ಬರ ಕುಟುಂಬಕ್ಕೆ ಸೂಕ್ತವಾದ ಸರಕಾರದ ವತಿಯಿಂದ ಪರಿಹಾರ ಕೊಡಬೇಕೆಂದು ಒತ್ತಾಯಿಸಿ ಆಕ್ರೋಶ ಹೊರಹಾಕಿದರು.

ಈ ಸಂಧರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬಸವರಾಜ ಮಾಲಿ, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಯುವ ಸಮಿತಿ ಅಧ್ಯಕ್ಷರು ನಾಗೇಶ್ ಗುಣಾಜಿ, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷರು ಸಂತೋಷ ಗುತ್ತೇದಾರ, ಪುರಸಭೆ ಸದಸ್ಯರು ಅಬ್ದುಲ್ ಬಾಸಿದ, ಆನಂದ ಟೈಗರ್, ಹಾದಿಸಾಬ್, ಖಲೀಲ್ ಪಟೇಲ್, ಜಗನ್ನಾಥ ಕಟ್ಟಿ, ಐನೋಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಶೋಕ ಭಜಂತ್ರಿ,  ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಅಲ್ಲವುದ್ದಿನ್  ಅನ್ಸಾರಿ ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಮುಖಂಡರುಗಳಾದ ಗೌತಮ್ ಬೊಂನಳ್ಳಿ, ರೌಫ್ ಭಾಯಿ ಮೀರಿಯಾಣ, ಡಾ. ತುಕಾರಾಮ ಪವಾರ್, ಸಚಿನ್ ಚವ್ಹಾಣ, ಸುನಿಲ್ ದೊಡ್ಡಮನಿ,ರೇವಣಸಿದ್ಧಪ್ಪ ಪೂಜಾರಿ, ಗೋಪಾಲ ರಾಂಪುರೆ, ಅನೀಲ ಕಟ್ಟಿ, ಗಂಗಾಧರ ಗಡ್ಡಿಮನಿ, ಚಾಂದ ಪಾಷಾ, ಮಾಶಾಕ್ ಲಕಪತಿ, ಶೇಖ್ ಫರೀದ್, ಮಾಸ್ತನ್ ಇಟಲಿ, ಯಮರಾಜ ಪವಾರ್, ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here