ಮನುಕುಲದ ಒಳಿತಿಗೆ ಸಂಶೋಧನೆ: ಡಾ. ಬಸವರಾಜ ಪಾಟೀಲ ಸೇಡಂ

0
147

ಕಲಬುರಗಿ: ವಿಶ್ವಮಟ್ಟದಲ್ಲಿ ಆಗಿರುವ ಸಂಶೋಧನೆಗಳಲ್ಲಿ ಬಹುತೇಕ ಪಾಲು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಇವು ಮಾನವ ಜನಾಂಗದ ನಾಶಕ್ಕಾಗಿ ಬಳಕೆಯಾಗುತ್ತಿರುವುದು ದುರ್ದೈವದ ಸಂಗತಿ. ಯುಕ್ರೇನ್ ಮತ್ತು ರಷ್ಯಾದ ನಡೆಯುತ್ತಿರುವ ಯುದ್ಧ ಇದಕ್ಕೆ ತಾಜಾ ನಿದರ್ಶನವೆಂದರೆ. ಇಂದಿನ ಯುವಕರು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚು ಒತ್ತನ್ನು ಕೊಟ್ಟು ಮನುಕುಲದ ಒಳಿತಿಗಾಗಿ ಉಪಯೋಗವಾಗುವಂತಹ ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ ಅಭಿಮತ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಷತ್ತ ವತಿಯಿಂದ ಶನಿವಾರ ಸಂಘಟಿಸಲಾದ ಭಾರತೀಯ ಯುವ ಸಂಶೋಧಕರ ಮತ್ತು ಆವಿಷ್ಕಾರರ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿಜ್ಞಾನದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಶ್ವವಿದ್ಯಾಲಯ ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ವಿಜ್ಞಾನ ಪರಿಷತ್ತು ಕಳೆದ ೪೦ ವರ್ಷಗಳಿಂದ ವಿಜ್ಞಾನವನ್ನು ಜನಪ್ರಿಯಗೊಳಿಸಲು ಹಾಗೂ ವೈಜ್ಞಾನಿಕ ಮನೋಭಾವನೆ ಮೂಡಿಸಲು ನಾಡಿನಲ್ಲಿ ಮಹತ್ತರವಾದ ಕೊಡುಗೆ ನೀಡಿದೆ. -ಪ್ರೊ. ದಯಾನಂದ ಅಗಸರ, ಕುಲಪತಿ, ಗು.ವಿ.ಕ.

ಗುಲ್ಬರ್ಗ ವಿವಿ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷ ಗಿರೀಶ ಕಡ್ಲೇವಾಡ ಪ್ರಾಸ್ತಾವಿಕ ಮಾತನಾಡಿದರು. ಕರಾವಿಪ ಗೌರವ ಕಾರ್ಯದರ್ಶಿ ಸಿ. ಕೃಷ್ಣೆಗೌಡ ಸ್ವಾಗತಿಸಿದರು. ವೇದಿಕೆ ಮೇಲೆ ಮಹಾರುದ್ರಪ್ಪ ಅಣದುರೆ, ಜಗನ್ನಾಥ ಹಲ್ಮಡಗಿ, ಎನ್.ಎಸ್. ಹಿರೇಮಠ ಇದ್ದರು. ಕಾರ್ಯಕ್ರಮದಲ್ಲಿ ಡಾ. ಪೃಥ್ವಿರಾಜ ಬೆಡ್ಜರ್ಗಿ, ಡಾ. ಬಿ. ಗೋವಿಂದರಾಜ, ಡಾ. ಶರಣಬಸಪ್ಪ ಪಾಟೀಲ, ಡಾ. ಅರ್ಜುನ ಶೆಟ್ಟಿ, ಡಾ. ಪ್ರಕಾಶ ಕರಿಯಜ್ಜನವರ, ಮಂಜುನಾಥ ಬೆಳಕೇರಿ, ಮಹೇಶ ದೇವಣಿ, ಅಶೋಕ ಆರ್., ರಾಜಶೇಖರ ಪಾಟೀಲ, ಸಂಜೀವಕುಮಾರ ಕಾಂಬಳೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here