ಬಿಸಿ ಬಿಸಿ ಸುದ್ದಿ

ವಾಲ್ಮೀಕಿ ನಾಯಕ ಸಮಾಜದಿಂದ ವಿಜಯನಗರ ಸಂಸ್ಥಾಪನಾ ದಿನಾಚರಣೆ

ರಾಯಚೂರು: ವಾಲ್ಮೀಕಿ ನಾಯಕ ಸಮಾಜದಿಂದ ಇಂದು 686 ನೇ ವಿಜಯನಗರ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ನಗರದಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ವಿಶೇಷ ಪೂಜೆ ಹಾಗೂ ಗಂಡುಗಲಿ ಕುಮಾರರಾಮ, ಹರಿಹರ ಬುಕ್ಕರಾಯರು, ಶ್ರೀಕೃಷ್ಣದೇವರಾಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರ ನಾಯಕ ರತ್ನಗಳಾದ ಹರಿಹರ ಬುಕ್ಕರಾಯ ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯರ ಸ್ಮರಣೆ ಮಾಡುವ ಮೂಲಕ ಅವರ ತ್ಯಾಗ ಧೈರ್ಯ ಸಾಹಸಗಳನ್ನು ಸ್ಮರಿಸಲಾಗುತ್ತದೆ.

ಇದನ್ನೂ ಓದಿ: ಹಕ್ಕ-ಬುಕ್ಕ, ಇತರೆ ಮಹಾರಾಜರಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಯಲಿ: ಪ್ರಕಾಶ ದೊರೆ

ಕುಮ್ಮಟ ದುರ್ಗದ ರಾಜ ಮತ್ತು ಹಕ್ಕ ಬುಕ್ಕರ ಸೋದರಮಾವನಾಗಿದ್ದ ಗಂಡುಗಲಿ ಕುಮಾರ ರಾಮನ ಕನಸಾದ ವಿಜಯನಗರ ಸಾಮ್ರಾಜ್ಯವನ್ನು ಶ್ರೀ ಹರಿಹರ ಬುಕ್ಕರಾಯರು ಸ್ಥಾಪನೆ ಮಾಡಿ ೧೮/೦೪/೨೦೨೨ ಕ್ಕೆ ೬೮೬ವರ್ಷಗಳಾದವು. ಕಂಪಲಿ ಸಂಸ್ಥಾನದ ಮುಮ್ಮಡಿಸಿಂಗನಾಯಕನ ಮಗ ವೀರ ಕಂಪಿಲರಾಯನ ಮೊಮ್ಮಕ್ಕಳೇ ಹಕ್ಕಬುಕ್ಕರು ಆಗಿದ್ದಾರೆ.  ಅಂದರೆ ಗಂಡುಗಲಿಕುಮಾರರಾಮನ  ಸಹೋದರಿ ಮಾರೆವ್ವ ಅವರನ್ನು ಬುಕ್ಕಭೂಪಾಲನಾಯಕನ ಮಗ ಸಂಗಮದೇವನಿಗೆ ಕೊಟ್ಟುಮದುವೆ ಮಾಡಲಾಗಿತ್ತು. ಇನ್ನೊಬ್ಬ ಸಹೋದರಿ ಸಿಂಗಮ್ಮಳನ್ನು ಕಾಮಗೇತಿ ನಾಯಕನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.

ಈ ಸಂಗಮದೇವ ಕುಮಾರರಾಮನ ಭಾವ ಆಗಿದ್ದರಿಂದಈತನಿಗೆ ಭಾವ ಸಂಗಮ ಎಂದು ಕೂಡ ಕರೆಯಲಾಗುತ್ತಿತ್ತು. ಸಂಗಮದೇವ ಮತ್ತು ಮಾರೆವ್ವರ ಮಕ್ಕಳೇ ಈ ಹಕ್ಕಬುಕ್ಕರು ಆಗಿದ್ದಾರೆ. ಇವರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು. ಇನ್ನೊಬ್ಬ ಸಹೋದರಿ ಸಿಂಗಮ್ಮ ಹಾಗೂ ಕಾಮಗೇತಿ ನಾಯಕನ ಮಗನೇ ಚಿತ್ರ ನಾಯಕ. ಈ ಚಿತ್ರ ನಾಯಕ ಚಿತ್ರದುರ್ಗ ಸಂಸ್ಥಾನ ಸ್ಥಾಪನೆ ಮಾಡಿದ. ಹರಿಹರ ಮತ್ತು ಬುಕ್ಕರಾಯರು ಸಂಗಮನ ಮಕ್ಕಳಾಗಿದ್ದರಿಂದ ಇವರು ಸಂಗಮ ವಂಶಸ್ಥರಾದರು. ಚಿತ್ರ ನಾಯಕ ಕಾಮಗೇತಿ ನಾಯಕರ ಪುತ್ರನಾಗಿದ್ದರಿಂದ ಚಿತ್ರದುರ್ಗ ಅರಸರು ಕಾಮಗೇತಿ ವಂಶಸ್ಥರಾದರು.

ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ: ಗೃಹ ಸಚಿವರ ರಾಜೀನಾಮೆಗೆ ಆಗ್ರಹ

ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಮತ್ತು ಚಿತ್ರದುರ್ಗ ಸ್ಥಾಪಕರು ಹಾಗೂ ಅವರ ಇಡೀ ಪರಿವಾರವೇ ನಾಯಕ ಸಮುದಾಯವಾಗಿದೆ.  ಹಕ್ಕ ಬುಕ್ಕ ಮತ್ತು ಚಿತ್ರನಾಯಕರ ತಾತ ವೀರ ಕಂಪಿಲರಾಯ, ಸೋದರ ಮಾವಗಂಡುಗಲಿ ಕುಮಾರರಾಮ.  ಹಕ್ಕ ಬುಕ್ಕರ ತಂದೆ ಸಂಗಮ ದೇವ ಕೂಡ ತನ್ನ ಮಕ್ಕಳಿಗೆ ತನ್ನ ತಂದೆ ಮತ್ತು ಸಂಬಂಧಿಕರ ಹೆಸರುಗಳನ್ನು ಇಡುತ್ತಾನೆ. ಹಕ್ಕ ಎಂದು ಕರೆಯಲಾಗುವಹರಿಹರನಿಗೆ ಅವರ ಅಜ್ಜಿ ಹರಿಯಾಲದೇವಿಯ ಹೆಸರು ಇಡುತ್ತಾನೆ.

ಬುಕ್ಕ ಎಂದು ಕರೆಲಾಗುವ ಬುಕ್ಕರಾಯನಿಗೆ ತನ್ನತಂದೆ ಬುಕ್ಕ ಭೂಪಾಲ ನಾಯಕನ ಹೆಸರು ಇಡುತ್ತಾನೆ. ಇನ್ನುಳಿದ ಮೂವರ ಪೈಕಿ ತನ್ನ ಪತ್ನಿ ಮಾರೆವ್ವಳ ಹೆಸರನ್ನುಮಗನಿಗೆ ಮಾರೆಪ್ಪ ಎಂದು, ತನ್ನ ಮಾವ ಕಂಪಿಲರಾಯನಹೆಸರನ್ನು ಇನ್ನೊಬ್ಬ ಮಗನಿಗೆ ಕಂಪಣ ಎಂದು ನಾಮಕರಣ ಮಾಡುತ್ತಾನೆ. ಹಕ್ಕ ಬುಕ್ಕರ ಅಜ್ಜಿ ಹರಿಯಾಲದೇವಿಯು ಕನಕಗಿರಿ ಸಂಸ್ಥಾನದ ನಾಯಕ ರಾಜನ ಮಗಳು ಆಗಿದ್ದಳು. ಹೀಗೆ ಇಡೀ ಇವರ ಪರಿಹಾರವೇ ನಾಯಕಸಮುದಾಯವಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಸಾಲ ನೀಡುವಲ್ಲಿ ವಿಳಂಬ ಮಾಡಬೇಡಿ

ವಿಜಯನಗರದಂತ ಬೃಹತ್ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ನಾಯಕರು ಆಗಿರುವ ಕಾರಣ ಇವರ ಜೀವನಚರಿತ್ರೆಯನ್ನು ವಾಲ್ಮೀಕಿ ನಾಯಕ ಸಮುದಾಯದಪ್ರತಿಯೊಬ್ಬರೂ ಸ್ಮರಿಸಲು ವಿಜಯನಗರ ಸಂಸ್ಥಾಪನಾದಿನಾಚರಣೆಯನ್ನು ಪ್ರತಿವರ್ಷ ಮಾಡಲಾಗುತ್ತಿದೆ.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕ ಬುಕ್ಕರುಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದಂತೆ ವಾಲ್ಮೀಕಿನಾಯಕ ಸಮುದಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು. ಹಕ್ಕ ಬುಕ್ಕರು, ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ ಇವರೆಲ್ಲಾಧೈರ್ಯ, ಸಾಹಸಗಳನ್ನು ಆದರ್ಶವಾಗಿ ಮಾಡಿಕೊಂಡುಸಮುದಾಯ ತಮ್ಮ ದೈನಂದಿನ ಜೀವನದಲ್ಲಿಅಭಿವೃದ್ಧಿಯಾಗಬೇಕಾಗಿದೆ.

ಆದ್ದರಿಂದ ಪ್ರತಿ ವರ್ಷವೂವಿಜಯನಗರ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುವಮೂಲಕ ಹಕ್ಕ ಬುಕ್ಕರನ್ನು, ಗಂಡುಗಲಿ ಕುಮಾರರಾಮಹಾಗೂ ಶ್ರೀಕೃಷ್ಣದೇವರಾಯ ಅವರನ್ನು ಸ್ಮರಿಸಲಾಗುತ್ತದೆ.

ಇದನ್ನೂ ಓದಿ: ವಿವಿಧ ಇಲಾಖೆಯಲ್ಲಿನ ೪೦ ಪರ್ಸೆಂಟ್ ಭ್ರಷ್ಟಾಚಾರ ತನಿಖೆ ಮಾಡಿ-ವೆಂಕೋಬ ದೊರೆ

ಇತಿಹಾಸ ತಿಳಿದವನು ಮಾತ್ರ ಇತಿಹಾಸ ನಿರ್ಮಿಸಬಲ್ಲಎನ್ನುವ ಸಂದೇಶದೊಂದಿಗೆ ನಮ್ಮ ಇತಿಹಾಸ ಪುರುಷರನ್ನುನೆನೆದು ಅವರು ಸಮಾಜಕ್ಕಾಗಿ, ಜನರಿಗಾಗಿ ನೀಡಿದಕೊಡುಗೆಗಳನ್ನು ನೆನೆದು ಅವರು ಹಾಕಿಕೊಟ್ಟ ನ್ಯಾಯ, ಸತ್ಯ, ಪರಿಶ್ರಮ, ತ್ಯಾಗದ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಡಾ.ಪ್ರಭು ಹುಲಿನಾಯಕ, ಡಾ.ಶಾರದಾ ಹುಲಿನಾಯಕ, ಎನ್.ರಘುವೀರ ನಾಯಕ, ಯಲ್ಲಪ್ಪ ಜಾಲಿಬೆಂಚಿ, ಭೀಮರಾಯ ಹದ್ದಿನಾಳ, ವೀರಣ್ಣ ನಾಯಕ, ರಂಗಸ್ವಾಮಿ ನಾಯಕ, ರಾಘವೇಂದ್ರ ವಕೀಲರು ಅಸ್ಕಿಹಾಳ, ಸಿದ್ದು ಅಸ್ಕಿಹಾಳ, ರಾಜು ಅಸ್ಕಿಹಾಳ, ಲಿಂಗಪ್ಪ ಮಾಸ್ಟರ್, ಮಲ್ಲಿಕಾರ್ಜುನ ಬೂದಿನಾಳ, ಶಿವಕಾಂತಮ್ಮ ನಾರಾಯಣ ನಾಯಕ, ಪೂರ್ಣಿಮಾ ಹುಲಿನಾಯಕ, ಅನಸೂಯಾ ಲಿಂಗಪ್ಪ, ರಮೇಶ ನಾಯಕ, ವಿರುಪಾಕ್ಷಿ, ರಾಮಕೃಷ್ಣ ನಾಯಕ, ಶ್ರೀಧರ ನಾಯಕ, ಸೂರ್ಯ ನಾರಾಯಣ ನಾಯಕ, ಮಹಾನಂದ ನಾಯಕ, ನಾಗೇಶ ಕಲಮಲ, ರಾಮು ನಾಯಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆಗಿಂತ ವಿಚಾರಗಳ ಮೆರವಣಿಗೆ ಅಗತ್ಯ- ಜ್ಞಾನಪ್ರಕಾಶ ಸ್ವಾಮೀಜಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago