ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆಗಿಂತ ವಿಚಾರಗಳ ಮೆರವಣಿಗೆ ಅಗತ್ಯ- ಜ್ಞಾನಪ್ರಕಾಶ ಸ್ವಾಮೀಜಿ

0
17

ಸಿದ್ದಾರ್ಥ ಚಿಮ್ಮಾಇದ್ಲಾಯಿ ತಂಡದವರಿಂದ ಭೀಮ ಕ್ರಾಂತಿ ಗೀತೆ ಹಾಗೂ ಶಿವಯೋಗಿ ಮೇತ್ರೆಮತ್ತು ರಘುನಾಥ ಜಾಯಿ ಸಂಗಡಿಗರಿಂದ ಹೋರಾಟದ ಹಾಡುಗಳು ಮನಸೂರೆಗೊಂಡವು. ಅಂಬೇಡ್ಕರ್ ಭವ್ಯ ಮೆರವಣಿಗೆಯನ್ನು ಡಿವಾಯ್‍ಎಸ್‍ಪಿ ಉಮೇಶ ಚಿಕ್ಕಮಠ ಉದ್ಘಾಟಿಸಿದರು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಧ್ವಜಾರೋಹಣ ಮಾಡಿದರು.

ಶಹಾಬಾದ: ಎಂದಿಗಿಂತಲೂ ಇಂದು ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆಗಿಂತ ಅವರ ವಿಚಾರಗಳ ಮೆರವಣಿಗೆ ಅಗತ್ಯವಾಗಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಅವರು ರವಿವಾರ ದಸಂಸ ವತಿಯಿಂದ ಅಂಬೇಡ್ಕರ್ ಜಯಂತಿ ನಿಮಿತ್ತ ಆಯೋಜಿಸಲಾದ ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕೇವಲ ಮೆರವಣಿಗೆಗಳಿಗೆ ಮಾತ್ರ ಸೀಮಿತವಾಗಿ ಅಬ್ಬರದ ಮೆರವಣಿಗೆಯಲ್ಲಿ ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಕಳೆದು ಹೋಗುತ್ತಿದ್ದಾರೆ. ಅವರುಗಳು ಹೇಳಿಕೊಟ್ಟ ವಿಚಾರಗಳು, ಅವರ ಬದುಕಿನ ಸಂದೇಶಗಳು ಸಮಾಜದಲ್ಲಿ ಹರಡುವಂತಾಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಅವರ ಭಾವಚಿತ್ರಗಳ ಮೆರವಣಿಗೆಗಿಂತ ಅವರ ವಿಚಾರಗಳ ಮೆರವಣಿಗೆ ಅಗತ್ಯವಾಗಿದೆ. ನಮಗೆ ಮೆರವಣಿಗೆಯ ಅಂಬೇಡ್ಕರಗಿಂತ ಬರವಣಿಗೆಯ ಅಂಬೇಡ್ಕರ್ ಬೇಕಾಗಿದೆ.ಅಲ್ಲದೇ ಹಾದಿ ಬೀದಿಗಳಲ್ಲಿ ಅಂಬೇಡ್ಕರ್ ಕೂಡಿಸುವ ಬದಲು ನಮ್ಮ ಮನೆಮನಗಳಲ್ಲಿ ಅಂಬೇಡ್ಕರ್ ನೆಲೆಸುವಂತಾಗಬೇಕು ಎಂದು ಖಾರವಾಗಿ ನುಡಿದರು.

ಇದನ್ನೂ ಓದಿ: ಕಲಬುರಗಿ: ಗುಡುಗು, ಗಾಳಿ, ಆಣೆಕಲ್ಲು ಸಹಿತ ಮಳೆ

ಕಲಬುರಗಿ ಕೇಂದ್ರಿಯ ವಿಶ್ವವಿದ್ಯಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಅಪ್ಪುಗೆರೆ ಸೋಮಶೇಖರ ಮಾತನಾಡಿ, ಜಯಂತಿಗಳು ಆಚರಣೆಗಳಾಗದೇ ಅನುಸರಣೆಯಾಗಬೇಕು.ಸಂವಿಧಾನ ಬರೆದುಕೊಟ್ಟ ಮಹಾತ್ಮನಿಗೆ ಭಾರತೀಯರಾದ ನಾವು ಏನು ಕೊಟ್ಟಿದ್ದೆವೆ ? ಅವರು ಹೆಳಿದ್ದು ನಾವು ಮಾಡುತ್ತಿರುವುದಾದರೂ ಏನು? ಅವರು ಹೋರಾಟ ಮಾಡಿದ್ದು ಯಾರಿಗಾಗಿ? ಎಂಬ ಪ್ರಶ್ನೆ ಹಾಕಿಕೊಳ್ಳಿ.ಆಗ ನಿಜವಾಗಲೂ ಅಂಬೇಡ್ಕರ್ ಯಾರು ಎಂದು ಗೊತ್ತಾಗುತ್ತದೆ.ಸಂವಿಧಾನ ಬರೆಯುವಾಗ ಕೃಷಿಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಎಂದು ಹೇಳಿಕೊಂಡಿದ್ದರು.

ಅಂಬೇಡ್ಕರ್.ಆದರೆ ಅವರ ಮಾತಿಗೆ ಯಾರು ಒಪ್ಪಲಿಲ್ಲ. ಈಗ ಅನ್ನದಾತನ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.ಈ ದೇಶದ ಎಲ್ಲ ವರ್ಗದ ಜನರಿಗೂ ಅಂಬೇಡ್ಕ್ಥರಿಂದ ಲಾಭ ಸಿಕ್ಕಿದೆ. ಆದರೆ ಇಂದು ಅಂಬೇಡ್ಕರಿಂದ ಲಾಭ, ಮೀಸಲು ಪಡೆದ ಮನಸ್ಸುಗಳಿಗೆ ಅಂಬೇಡ್ಕರ್ ಬೇಕಾಗಿಲ್ಲ. ಬದಲಾಗಿ ಅವರು ಬರೆದಿರುವ ಸಂವಿಧಾನದ ಅಡಿಯಲ್ಲಿ ಬರುವ ಎಲ್ಲ ರಕ್ಷಣೆ, ಸೌಲಭ್ಯಗಳು ಬೇಕಾಗಿವೆ ಎಂದರು.
ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ, ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿದರು.

ಇದನ್ನೂ ಓದಿ: ಶಾಂತಿ-ನೆಮ್ಮದಿಯಿಂದ ಜೀವನ ನಡೆಸಲು ಪುರಾಣ ಪ್ರವನಗಳು ಕೇಳುವುದು ಅವಶ್ಯ

ವರಜ್ಯೋತಿ ಭಂತೇಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ದಸಂಸ ಮುಖಂಡ ಮಲ್ಲೇಶಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಜಯಂತೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕರಣಿಕ್ ಗಿರೀಶ ಕಂಬಾನೂರ, ಶಿವಪುತ್ರ ಕರಣಿಕ್, ಜಯಂತೋತ್ಸವ ಸಮಿತಿ ಗೌರಾವಾಧ್ಯಕ್ಷ ರಜನಿಕಾಂತ ಕಂಬಾನೂರ,ನಾಗರಾಜ ಕರಣಿಕ್, ನಾಗರಾಜ ಸಿಂಘೆ, ಸೂರ್ಯಕಾಂತ ಕೋಬಾಳ,ಡಿ.ಡಿ.ಓಣಿ,ಮಲ್ಕಣ್ಣ ಮುದ್ದಾ,ಶಿವಕುಮಾರ ತಳವಾರ, ಕಿಶನ್ ನಾಯಕ,ದಶರಥ ಕೋಟನೂರ್,ಸುರೇಶ ಮೆಂಗನ,ಶರಣು ಪಗಲಾಪೂರ,ಲೋಹಿತ್ ಕಟ್ಟಿ ಸೇರಿದಂತೆ ಅನೇಕರು ಇದ್ದರು.

ಜಯಂತೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕರಣಿಕ್ ಪ್ರಾಸ್ತಾವಿಕ ನುಡಿದರು.ಪೂಜಪ್ಪ ಮೇತ್ರೆ ನಿರೂಪಿಸಿದರು, ಪ್ರವೀಣ ರಾಜನ್ ಸ್ವಾಗತಿಸಿದರು,ಪುನೀತ್ ಹಳ್ಳಿ ವಂದಿಸಿದರು.

ಇದನ್ನೂ ಓದಿ: ಯಾತ್ರೆಯ ಬಳಿಕ ಚುನಾವಣೆ ಅಭ್ಯರ್ಥಿಯ ಘೋಷಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here