ಕಲಬುರಗಿ:ಪಿ ಎಸ್ ಐ 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ.ನೇಮಕಾತಿಯ ಸಂದರ್ಭದಲ್ಲಿರೂ.80 ಲಕ್ಷದಷ್ಟು ಲಂಚವನ್ನು ಪ್ರತಿ ಅಭ್ಯರ್ಥಿಯಿಂದ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬರುತಿದೆ.
545 ಹುದ್ದೆಗಳ ಪೈಕಿ 300 ರಷ್ಟು ಹುದ್ದೆಗಳು ಅಕ್ರಮವಾಗಿ ನಡೆದಿವೆ ಎಂಬ ಆರೋಪವಿದ್ದು, ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಆಗ್ರಹಿಸಿದ್ದಾರೆ.
ಈ ಅಕ್ರಮ ದಂಧೆಯು ಗೋಕುಲನಗರ ಜಿಡಿಎ ಲೇಔಟ್ ನ ಜ್ಞಾನಜ್ಯೋತಿ ಇಂಗ್ಲೀμï ಮಾದ್ಯಮ ಶಾಲೆಯಲ್ಲಿ ಮಾಡಲಾಗಿದೆ ಎಂಬ ದೃಢವಾದ ಆಧಾರದಿಂದ ಸಿಐಡಿ ತಂಡವು ಬಿಜೆಪಿಯ ಮಹಿಳಾ ಮುಂಡರ ಮನೆ ಮೇಲೆ ದಾಳಿ ನಡೆಸಿ ತನಿಖೆ ಮಾಡುತಿದೆ. ಈ ಶಾಲೆಯು ಬಿಜೆಪಿಯ ಮಹಿಳಾ ಮುಖಂಡರದ್ದಾಗಿದೆ. ಬಿಜೆಪಿಯು ತನ್ನದೇ ತಳಹಂತದ ಸದಸ್ಯರ ಮೂಲಕ ಇಂತಹ ಅಕ್ರಮಗಳನ್ನು ನಡೆಸಿ ಹಣ ವಸೂಲಿಗೆ ಇಳಿದಿರುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಕಂಡು ಬರುತ್ತಿವೆ.
ಸರಕಾರದ ಗೃಹಮಂತ್ರಿಗಳು ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥರು ಮತ್ತು ಬಿಜೆಪಿಯ ಮಹಿಳಾ ನಾಯಕಿಯ ಮನೆಗೆ ಹೋಗಿ ಆರತಿ ಬೆಳಗಿಸಿಕೊಂಡು ಬಂದು ಈಗ ಭ್ರಷ್ಟಚಾರ ಮತ್ತು ಅಕ್ರಮ ದಂಧೆ ಬಯಲಿಗೆ ಬರುತ್ತಿದ್ದಂತೆ ಅವರು ಯಾರೋ ತನಗೆ ಗೊತ್ತಿಲ್ಲ ಎಂಬ ಸುಳ್ಳು ಹೇಳುತ್ತಿದ್ದಾರೆ. ಇದು ಅವರ ಪಕ್ಷದ ಸುಳ್ಳು ಸಂಸ್ಕøತಿಯ ಮುಂದುವರಿಕೆಯೇ ಆಗಿದೆ. ಈಚೆಗೆ ಗುತ್ತಿಗೆದಾರ ಸಂತೋಷ ಪಾಟಿಲ ಆತ್ಮಹತ್ಯೆಯ ನಂತರವೂ ಸಚಿವರಾಗಿದ್ದ ಈಶ್ವರಪ್ಪ ಹೀಗೇ ಹೇಳಿದ್ದರು.
ರಾಜ್ಯದ ಜನತೆಗೆ ದ್ರೋಹವೆಸಗುತ್ತಿರುವ ಬಿಜೆಪಿಯ ನಡೆಯನ್ನು ಸಿಪಿಐಎಂ ಪಕ್ಷವು ತೀವ್ರವಾಗಿ ಖಂಡಿಸುತದೆ. ಬಿಜೆಪಿಯ ಇಂತಹ ಭ್ರಷ್ಟಚಾರದ ಕಾರಣವಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮೋಸ ಮಾಡಿದಂತೆಯೇ ಆಗಿದೆ. ಈ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದೆ.
ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಈ ಬೃಹತ್ ಭ್ರμÁ್ಟಚಾರದ ತೀವ್ರ ತನಿಖೆ ನಡೆದು ಎಲ್ಲ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಶಾಮೀಲಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಬೇಕು. ಹಾಗೂ ಅಕ್ರಮವೆಸಗಿರುವ ಆರೋಪದ ಬಿಜೆಪಿ ಮುಖಂಡರೊಂದಿಗೆ ಸಂಪರ್ಕ ಹೊಂದಿರುವ ಮತ್ತು ಸುಳ್ಳು ಹೇಳುತ್ತಿರುವ ಗೃಹಮಂತ್ರಿ ಅರಗ ಜ್ಞಾನೇಂದ್ರ ಕೂಡಲೇ ರಾಜಿನಾಮೆ ಕೊಡಬೇಕು ಎಂದು ಸಿಪಿಐಎಂ ಪಕ್ಷ ಆಗ್ರಹಿಸಿದೆ.