ಬಿಸಿ ಬಿಸಿ ಸುದ್ದಿ

ಭಂಕೂರಿನಲ್ಲಿ ಕೋಮು ಸಾಮರಸ್ಯ ಸಾರುವ ಇಫ್ತಾರ್ ಕೂಟ

ಶಹಾಬಾದ: ದೇಶದೆಲ್ಲೆಡೆ ಧರ್ಮ ಧರ್ಮಗಳ ನಡುವೆ ಕೋಮು ದ್ವೇಷ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೋಮು ಸಾಮರಸ್ಯ ಸಾರುವಂತ ದಾವತ್ ಹೇ ಇಫ್ತಾರ್ ಕೂಟವನ್ನು ಮುಸ್ಲಿಂ ಬ್ರದರ್ ಹುಡ್ ಏರ್ಪಡಿಸಿ ಎಲ್ಲಾ ಸಮುದಾಯದವರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳ ವಿನಿಮಯ ಮಾಡಿಕೊಂಡ ಪ್ರಸಂಗ ಭಂಕೂರ ಗ್ರಾಮದಲ್ಲಿ ನಡೆಯಿತು.

ಉಪನ್ಯಾಸಕ ಸಂಜಯ್ ಮಾಕಲ್ ಮಾತನಾಡಿ, ಭಾರತ ಎಲ್ಲ ಮತಗಳ ಜನರು ಇರುವ ದೇಶ. ಇಂತಹ ವಿಭಿನ್ನ ಸಂಸ್ಕøತಿಗಳ, ಆಚರಣೆಗಳಿರುವ ಜನಗಳು ಇರುವ ದೇಶದಲ್ಲಿ ಈ ಹಿಂದೆ ಧರ್ಮ, ಧರ್ಮಗಳ ಜನರ ನಡುವೆ ಸಾಮರಸ್ಯವಿತ್ತು. ಆದರೆ, ಈಗ ರಾಜಕಾರಣಕ್ಕಾಗಿ ಜನರ ಮಧ್ಯ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಹೀಗಾಗಿ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮನುಜ ಮತ ನಮ್ಮದಾಗಬೇಕು. ಹೀಗಾಗಿ ಸರ್ವರೂ ಸಾಮರಸ್ಯದಿಂದ ಇರಬೇಕು ಎಂದು ಕರೆ ನೀಡಿದರು.ದೇವನೊಬ್ಬ ನಾಮ ಹಲವು. ದೇಶವಾಸಿಗಳಾಗಿರುವ ನಾವೆಲ್ಲ ಸಹೋದರತ್ವ. ಸಾಮರಸ್ಯದಿಂದ ಬದುಕಬೇಕು ಎಂದರು.

ಇದನ್ನೂ ಓದಿ: ೧.೧೪ ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಫಾಸ್ಟರ್ ರಾಬೀನ್ ಪ್ರತಾಪ್ ಮಾತನಾಡಿ, ವೈವಿದ್ಯಮಯದಿಂದ ಕೂಡಿದ ಕರ್ನಾಟಕದಲ್ಲಿ ಜಾತಿ ಜಾತಿಗಳ ಹಾಗೂ
ಧರ್ಮ -ಧರ್ಮಗಳ ನಡುವೆ ದ್ವೇಷವನ್ನು ಬಿತ್ತಿ ಶತಮಾನಗಳಿಂದ ರಾಜ್ಯದಲ್ಲಿ ಜನರು ಪಾಲಿಸಿಕೊಂಡು ಬಂದಿದ್ದ ಶಾಂತಿಸೌಹಾರ್ದತೆಯನ್ನು ಹಾಳು ಮಾಡಲು ಕೆಲವು ಸಂಘಟನೆಗಳು ಪ್ರಯತ್ನ ಪಡುತ್ತಿವೆ ಎಂದು ಹೇಳಿದರು.

ಮಾಜಿ ಜಿ.ಪಂ.ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ಕೋಮು ಸೌಹಾರ್ದವನ್ನು ಕೆಡಿಸುವವರು ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಬೇರೆ ವಿಚಾರ. ಭಾರತದಲ್ಲಿ ಎಲ್ಲರೂ ಒಂದಾಗಿರುವುದು ಅವಶ್ಯವಾಗಿದೆ.ಮೂಲಭೂತವಾದಿಗಳು ಪ್ರಚೋದನಕಾರಿಯಾಗಿ ನಡೆದುಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಸಂಘಟನೆಗಳು ಹಾಗೂ ಸರ್ಕಾರ ಇದನ್ನು ವಿರೋಧಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಪಿಎಸ್ಐ ದೈಹಿಕ ಪರೀಕ್ಷೆಯಲ್ಲೂ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ

ಡಾ.ಎಮ್.ಎ.ರಶೀದ್, ಪೀರ ಪಾಶಾ ಮಾತನಾಡಿದರು. ಮಲ್ಲಿಕಾರ್ಜುನ ಪೂಜಾರಿ, ಮಹಮೂದ್ ಖುರೇಷಿ, ಚನ್ನವೀರ ಪಾಟೀಲ, ಅಜೀತ ಪಾಟೀಲ, ರಜನಿಕಾಂತ್ ಕಂಬಾನೂರ್ ವೇದಿಕೆಯ ಮೇಲ್ಲಿದ್ದರು. ಹಫೀಜ್ ರಿಜ್ವಾನ್ ಸಾಬ್, ಪ್ರಾರ್ಥಿಸಿದರು, ಅಲ್ ಹಜ್ ಅಬೀದ ಹುಸೇನ್ ಅಧ್ಯಕ್ಷತೆ ವಹಿಸಿದ್ದರು, ಮೌಲಾನ್ ಶಬ್ಬೀರ್ ಅಹ್ಮದ್ ಸ್ವಾಗತಿಸಿದರು,ಸುರೇಶ್ ಮೆಂಗನ್ ನಿರೂಪಿಸಿದರು, ಮಹ್ಮದ್ ಮುಜಾಹಿದ ವಂದಿಸಿದರು, ಮಹ್ಮದ್ ಜಾಕೀರ್, ಮಹ್ಮದ್ ಸಿದ್ದಿಕ, ಮಹ್ಮದ್ ಇಮ್ರಾನ್, ಶರಣಪ್ಪ ಧನ್ನಾ, ಸುನೀಲ್ ಧನ್ನಾ,ಅಣಪ್ಪಾ ಸರಡಗಿ,ಖಾಜಾ ಪಟೇಲ್, ಮಹ್ಮದ್ ಮುಜೀಬ,ಆಬೀದ ಪಟೇಲ್, ಮಹ್ಮದ್ ಜಾಫರ್, ರಫೀಕ್ ಪಟೇಲ್, ಮಲ್ಕಣ್ಣಾ ಮುದ್ದಾ, ದೇವೇಂದ್ರ ಕಾರೋಳ್ಳಿ, ಮಾಣಿಕ್ ಪಾಟೀಲ, ಇಮ್ಯಾನವೇಲ್, ಜೇಮ್ಸ್, ವಿದ್ಯಾಸಾಗರ್, ಆರೋಗ್ಯಸ್ವಾಮಿ, ಉಪಸ್ಥಿತರಿದ್ದರು.

ಇದನ್ನೂ ಓದಿ: ಮತ್ತೆ ಗಡಿಕ್ಯಾತೆ ತೆಗೆದ ಮಹಾರಾಷ್ಟ್ರ ಉಪಮುಖ್ಯಮಂತ್ರಿ: ಮಾಜಿ ಸಿಎಂ ಹೆಚ್.ಡಿ.ಕೆ ಪ್ರತಿಕ್ರಿಯೆ ಹೀಗಿತ್ತು

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

2 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

2 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

4 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

4 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

4 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

5 hours ago