ಪಿಎಸ್ಐ ದೈಹಿಕ ಪರೀಕ್ಷೆಯಲ್ಲೂ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ

0
115

ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ಸರಕಾರ ಮರು ಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿದ್ದು, ಅದು ಕೇವಲ ಲಿಖಿತ ಪರೀಕ್ಷೆ ಮಾತ್ರ ನಡೆಸುವ ಪ್ರಯತ್ನ ಮಾಡುತ್ತಿದೆ. ಲಿಖಿತ ಒಂದೇ ಅಲ್ಲದೇ ದೈಹಿಕ ಪರೀಕ್ಷೆಯಲ್ಲೂ ಸಹ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಭಾನುವಾರ ಇಲ್ಲಿನ ಐವಾನ್-ಇ- ಶಾಹಿ ಅತಿಥಿ ಗೃಹದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಲಿಖಿತವಾಗಿ ಮಾತ್ರ ಮರು ಪರೀಕ್ಷೆ ನಡೆಸುವ ಬಗ್ಗೆ ಸುತ್ತೋಲೆ ಹೊರಡಿಸಿದೆ. ಆದರೆ, ಬೆಳಗಾವಿ ಸೇರಿದಂತೆ ಇನ್ನಿತರ ಕೇಂದ್ರಗಳಲ್ಲಿ ದೈಹಿಕ ಪರೀಕ್ಷೆಯಲ್ಲೂ ಕೆಲವರು ಅಕ್ರಮವೆಸಗಿದ್ದಾರೆ. ದೈಹಿಕ ಪರೀಕ್ಷೆಗೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಹಾಗೂ ನಗರ ಠಾಣೆಗಳಲ್ಲಿ ಎಫ್ಐಆರ್ ದೂರು ದಾಖಲಾದರು ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಮರು ಪರೀಕ್ಷೆಗೆ ಆದೇಶ ಹೊರಡಿಸುವ ಮೂಲಕ ಸರಕಾರ ಅಭ್ಯರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿದೆ ಎಂದು ಅವರು ಕಿಡಿಕಾರಿದರು.

Contact Your\'s Advertisement; 9902492681

ಇದನ್ನೂ ಓದಿ: ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಆರ್ಥಿಕ, ಸಾಮಾಜಿಕ ಅಭಿವೃದ್ದಿಗೆ ಕೈಜೋಡಿಸಬೇಕು: ಪ್ರಿಯಾಂಕ್ ಖರ್ಗೆ

2021ರ ಆಗಸ್ಟ್ 2ರಂದು ಬೆಳಗಾವಿಯ ಕೆ.ಎಸ್.ಆರ್.ಪಿ 2ನೇ ಬಟಾಲಿಯನ್ ನಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಚಿಕ್ಕೋಡಿ ತಾಲೂಕಿನ ಬಾಳೆಶ್ ಸಣ್ಣಪ್ಪ ದೂರದುಂಡ ಎಂಬ ವ್ಯಕ್ತಿಗೆ ಎತ್ತರ ಕಡಿಮೆ ಇದ್ದರೂ ಅವನ ತಲೆಯ ಮೇಲೆ ಮೂರು ಥರ್ಮಾಕೋಲ್ ಇಟ್ಟು ವಿಗ್ ಹಾಕಿ ಹೈಟ್ ಹೆಚ್ಚಿಸಿ ದೈಹಿಕ ಪರೀಕ್ಷೆ ಮಾಡಲಾಗಿದೆ. ಅಲ್ಲದೇ, ಡಿಎಆರ್ ಪರೇಡ್ ಗ್ರೌಂಡ್ ನಲ್ಲಿ ಉಮೇಶ್ ಎಂಬ ವ್ಯಕ್ತಿಯೂ ಸಹ ತಲೆಮೇಲೆ ಕಪ್ಪು ಬಣ್ಣದ ವಸ್ತ್ರ ಇಟ್ಟುಕೊಂಡು ವಿಗ್ ಧರಿಸಿ ದೈಹಿಕ ಪರೀಕ್ಷೆ ನೀಡಿರುವ ಕುರಿತು ಬೆಳಗಾವಿಯ ಗ್ರಾಮೀಣ ಹಾಗೂ ನಗರ ಠಾಣೆಗಳಲ್ಲಿ ದೂರು ದಾಖಲಾದರು ಸರಕಾರ ಯಾವುದೇ ತನಿಖೆ ನಡೆಸಿಲ್ಲ ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ತನಿಖೆ ಪೂರ್ಣಗೊಂಡಿಲ್ಲ ಆಗ್ಲೇ ಮರು ಪರೀಕ್ಷೆಗೆ ಸುತ್ತೋಲೆ ಯಾಕೆ.? ಕೇವಲ ಒಂದು ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ಮಾತ್ರ ತನಿಖೆ ನಡೆಸಲಾಗುತ್ತಿದೆ. ಇನ್ನುಳಿದ ಹುಬ್ಬಳ್ಳಿ, ಬಳಗಾವಿ, ಬೆಂಗಳೂರು ಕೇಂದ್ರಗಳ ಕತೆ ಏನು? ಬೇರೆ ಕೇಂದ್ರಗಳಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಯಲಿ.ಈಗಾಗಲೇ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು 12 ಜನರನ್ನು ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸಿದೆ. ಸರಕಾರ ಹೇಳುವ ಪ್ರಕಾರ 250 ಜನ ಅಕ್ರಮದಲ್ಲಿ ಭಾಗಿಯಾಗುರುವ ಶಂಕೆ ಇದೆ ಎನ್ನುತ್ತಾರೆ. ಆದರೆ, ಬಂಧನವಾಗಿದ್ದು ಮಾತ್ರ 19 ಜನರದ್ದು, ಉಳಿದವರು ಎಲ್ಲಿ ಎಂದು ಪ್ರಶ್ನಿಸಿದರು.

ಡಾ.ಅಂಬೇಡ್ಕರ ಅಪ್ಪಟ ದೇಶಪ್ರೇಮಿ, ಅಹಿಂಸಾವಾದಿಯಾಗಿದ್ದರು: ಪೊ. ಪೋತೆ

ಸರಕಾರ ದಿವ್ಯಾ ಹಾಗರಗಿ ಹಾಗೂ ಆರ್. ಡಿ ಪಾಟೀಲ್ ಬಂಧನವನ್ನೇ ದೊಡ್ಡ ಸಾಧನೆ ಅಂದುಕೊಂಡಿದೆ. ತನಿಖೆಯನ್ನು ಕಲಬುರಗಿಗೆ ಸೀಮಿತಗೊಳಿಸಿ ಕೇಸ್ ಮುಚ್ಚಿಹಾಕುವ ಹುನ್ನಾರ ಸರಕಾರ ಮಾಡುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರವಾಗಿ ಆರೋಪಿಸಿದರು.

ಈ 545 ಪಿಎಸ್ಐ ಲಿಖಿತ ಪರೀಕ್ಷೆ ಅಷ್ಟೇ ಅಲ್ಲದೆ, ದೈಹಿಕ ಪರೀಕ್ಷೆಯಲ್ಲೂ ಸಹ ಅಕ್ರಮ ನಡೆದಿದೆ. ಕೂಡಲೇ ಅದನ್ನು ಸೂಕ್ತ ತನಿಖೆ ಮೂಲಕ ಪತ್ತೆ ಹಚ್ಚುವ ಕೆಲಸ ಸರಕಾರ ಮಾಡಬೇಕು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಬೀದಿಗೆ ಬಂದಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ಬಿದಿಗಿಳಿದು ವಿದ್ಯಾರ್ಥಿಗಳೊಂದಿಗೆ ಹೋರಾಟ ಮಾಡುಲು ಸಹ ಸಿದ್ದ ಎಂದು ಖರ್ಗೆ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ದಾಖಲೆಗಳಿದ್ದರೆ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಬಹುದು-ಕುಮಾರಸ್ವಾಮಿ

ಕಲೆಕ್ಷನ್ ಹಬ್ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ: ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಮೇಲ್ವಿಚಾರಕರು ಉತ್ತರಗಳನ್ನು ನೀಡುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡಬೇಕು  ಎಂದು 2021ರ ಡಿಸೆಂಬರ್ 4 ರಂದು ಹಾಗೂ 5 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಪತ್ರ ಬರೆದಿತ್ತು. ಪ್ರತಿಯಾಗಿ, ಎಡಿಸಿ ಬದಲಾವಣೆಯ ಮಾಡಲು ಆದೇಶ ಹೊರಡಿಸಿದ್ದರು. ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದಕ್ಕೆ ಯಾರ ಶ್ರೀರಕ್ಷೆ ನೀಡುತ್ತಿದ್ದಾರೆ. ಕಲೆಕ್ಷನ್ ಮಾಡಲು ಯಾರು ಸಹಾಯ ಮಾಡುತ್ತಿದ್ದಾರೆ ಎಂದರು.

ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇವಲ ಪಿಎಸ್ಐ ಪರೀಕ್ಷೆ ಅಕ್ರಮವಷ್ಟೇ ಅಲ್ಲದೇ, ಪಿಡಬ್ಲ್ಯೂಡಿ, ಎಫ್.ಡಿ.ಎ., ಕೆಪಿಎಸ್ಇ ಹಾಗೂ ಗ್ರೂಪ್ ಸಿ ಎಕ್ಸಾಮ್ ಸೇರಿದಂತೆ ಅನೇಕ ಪರೀಕ್ಷೆಗಳಲ್ಲಿ ಅಕ್ರಮ ನಡೆಸಲಾಗಿದೆ. ಅದು ಎಜುಕೇಶನ್ ಹಬ್ ಆಗಿಲ್ಲ. ಬದಲಿಗೆ ಕಲೆಕ್ಷನ್ ಹಬ್ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿದರು.

ಇದನ್ನೂ ಓದಿ: ಅಂಬೇಡ್ಕರ ಅವರ ವಿಚಾರಧಾರೆ ಜನರಿಗೆ ಇನ್ನೂ ತಲುಪಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ವಿಷಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here