ಶಹಾಬಾದ: ಭಂಕೂರ ಗ್ರಾಮದಲ್ಲಿ ಕೆಬಿಜಿಎನ್‌ಎಲ್ ಮತ್ತು ನೀರು ಸರಬರಾಜು ಮಂಡಳಿಯಿಂದ ಸುಮಾರು ೧ ಕೋಟಿ ೧೪ ಲಕ್ಷರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಎಂದು ಚಿತ್ತಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಅವರು ತಾಲೂಕಿನ ಭಂಕೂರ ಗ್ರಾಮದ ಗಾಯಕವಾಡ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಪ್ರಿಯಾಂಕ್ ಅವರು ಭಂಕೂರ ಗ್ರಾಮದಲ್ಲಿ ಕೆಬಿಜಿಎನ್‌ಎಲ್ ಯೋಜನೆಯಡಿ ಸುಮಾರು ೮೯ ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.ಅಲ್ಲದೇ ನೀರು ಸರಬರಾಜು ಮಂಡಳಿಯಿಂದ ೨೫ ಲಕ್ಷ ರೂ.ಅನುದಾನದಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತದೆ.ಇದರಿಂದ ಇಲ್ಲಿನ ಜನರ ಬಹುದಿನಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.
ಅಭಿವೃದ್ಧಿ ಎಂದರೆ ಪ್ರಿಯಾಂಕ್ ಹಾಗೂ ಪ್ರಿಯಾಂಕ್ ಅಂದರೆ ಅಭಿವೃದ್ಧಿ ಎಂದು ಎಲ್ಲರಿಗೂ ಗೊತ್ತಿರುವ ವಿಷಯ.ಅವರು ನೇರ ನುಡಿಯ ವ್ಯಕ್ತಿತ್ವ ಹೊಂದಿದವರು.ಚಿತ್ತಾಪೂರ ತಾಲೂಕಿನಲ್ಲಿ ಸಾಕಷ್ಟು ಅನುದಾನ ತರುವುದರ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.ಅವರ ಅಭಿವೃದ್ಧಿ ಕಾರ್ಯವನ್ನು ನಾವು ಹೇಳಬೇಕಾಗಿಲ್ಲ.ಜನರೇ ಹೇಳುವಂತೆ ಮಾಡಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಮಾತನಾಡಿ,ಚಿತ್ತಾಪೂರ ತಾಲೂಕಿನಲ್ಲಿ ಶೈಕ್ಷಣಿಕ ಹಬ್ ನಿರ್ಮಾಣ ಮಾಡುವ ಮೂಲಕ ಇಡೀ ರಾಜ್ಯದ ಜನರು ಚಿತ್ತಾಪೂರ ತಾಲೂಕಾ ಅಭಿವೃದ್ಧಿಯ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ.ತಾಲೂಕಿನ ಗ್ರಾಮಗಳಿಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ, ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಭರವಸೆ ನೀಡಿದ ಬಳಿಕ ಆ ಕಾರ್ಯ ಆಗುವವರೆಗೂ ಬಿಡುವುದಿಲ್ಲ. ಅವರು ಹೇಳಿದಂತೆ ಮಾಡಿ ತೋರಿಸುವವರು. ಯಾವತ್ತಿಗೂ ಸುಳ್ಳು ಹೇಳಿ ಹೋಗುವ ಜಾಯಮಾನ ಅವರದಲ್ಲ.ಅವರೊಬ್ಬ ಉತ್ತಮ ಕೆಲಸಗಾರರು ಎಂಬುದಕ್ಕೆ ತಾಲೂಕಿನಲ್ಲಿ ನಡೆದಿರುವ ಹಾಗೂ ಕೈಗೊಂಡ ಕಾಮಗಾರಿಗಳೇ ಸಾಕ್ಷಿ ಎಂದು ಹೇಳಿದರು.
ಇದನ್ನೂ ಓದಿ: ಪಿಎಸ್ಐ ದೈಹಿಕ ಪರೀಕ್ಷೆಯಲ್ಲೂ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ
ಎಪಿ.ಎಮ್.ಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ತಾಪಂ ಇಓ ಡಾ.ಬಸಲಿಂಗಪ್ಪ ಡಿಗ್ಗಿ, ಸಾಬಣ್ಣಾ ಅಣ್ಣಿಕೇರಿ, ಮಹೇಶ ಧರಿ, ಗ್ರಾಮ ಪಂಚಾಯತಿ ಸದಸ್ಯರಾದ ಶರಣಗೌಡ ದಳಪತಿ, ಶರಣಬಸಪ್ಪಾ ಧನ್ನಾ, ಮಲ್ಲಿಕಾರ್ಜುನ ಧರಿ,ರಮೇಶ ಕಾಳನೂರ,ಜಗದೀಶ ಮುತ್ತಗಾ, ದೇವಣ್ಣ ಹಳ್ಳಿ, ದೇವರಾಜ, ಭರತ್, ಮುಖಂಡರಾದ ಸುರೇಶ ಮೆಂಗನ, ಮೃತುಂಜ್ಯ ಹಿರೇಮಠ, ದೇವೇಂದ್ರ ಕಾರೊಳ್ಳಿ, ತಾಪಂ ಸದಸ್ಯ ನಾಮದೇವ ರಾಠೋಡ, ಅಮೃತ ಮಾನಕರ,ರಜನಿಕಾಂತ ಕಂಬಾನೂರ, ಗಂಗಾಧರ ಧರಿ , ಅಪ್ಪು ಕೊಳ್ಳಿ, ಪ್ರಭುಲಿಂಗ ಪೂಜಾರಿ , ಚಂದು ಜಾಧವ,ಮುಜಾಹಿದ್ ಹುಸೇನ್ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಆರ್ಥಿಕ, ಸಾಮಾಜಿಕ ಅಭಿವೃದ್ದಿಗೆ ಕೈಜೋಡಿಸಬೇಕು: ಪ್ರಿಯಾಂಕ್ ಖರ್ಗೆ