ಕಲಬುರಗಿ: ದೃಶ್ಯ ಕಲೆಯ ಜಗತ್ತಿನಲ್ಲಿ ವರ್ಣಚಿತ್ರಕಾರರು ಜೀವನದ ವಾಸ್ತವತೆಯನ್ನು ಪ್ರತಿಧ್ವನಿಸುವ ಹೃದಯವನ್ನು ಹೊಂದಿರಬೇಕು ಮತ್ತು ಕ್ಯಾನ್ವಸ್‌ನಲ್ಲಿ ಹೇಳಲಾಗದ ಭಾವನೆಗಳು ಮತ್ತು ಮಾನವ ಭಾವನೆಗಳನ್ನು ಪ್ರತಿಬಿಂಬಿಸಬೇಕು ಎಂದು ಯಾವಾಗಲೂ ಭಾವಿಸಲಾಗುತ್ತದೆ. ಚಿತ್ರಕಲೆಯು ಗೋಡೆಯ ಮೇಲೆ ಹಾಕಲು ಯೋಗ್ಯವಾದ ಕಲಾಕೃತಿಯಾಗಿ ಕೊನೆಗೊಳ್ಳಬಾರದು, ಆದರೆ ಅದರ ಅಂತರ್ಗತ ಭಾವನೆಗಳನ್ನು ವೀಕ್ಷಕರಿಗೆ ರವಾನಿಸಬೇಕು.
ಕಲಬುರಗಿ ಚಿತ್ರಕಲಾವಿದ ರೆಹಮಾನ್ ಪಟೇಲ್ ಅವರು ’ಇಂಡಿಯಾ ಅಂಡರ್ ಒನ್ ಅಂಬ್ರೇಲಾ’ ಚಿತ್ರಕಲಾಕೃತಿಗೆ ಪ್ರತಿಷ್ಟೀತ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾಷೆ ಮತ್ತು ಸಂಸ್ಕೃತಿ ಇಲಾಖೆ (ತೆಲಂಗಾಣ ಸರ್ಕಾರ) ಸ್ವಾಯುತ್ತ ಸಂಸ್ಥೆಯಾದ ಹೈದ್ರಾಬಾದ್ ಆರ್ಟ್ ಸೂಸೈಟಿ ಆಯೋಜಿಸಿದ ೭೯ನೇ ವಾರ್ಷಿಕ ಅಖಿಲ ಭಾರತ ಕಲಾ ಪ್ರದರ್ಶನ ೨೦೨೨ ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಯಿತು. ಪಟೇಲ್ ರವರಿಗೆ ಪ್ರಶಸ್ತಿ ಜೊತೆಗೆ ರೂ. ೨೦,೦೦೦ (ಇಪ್ಪತ್ತು ಸಾವಿರ) ನಗದು ಬಹುಮಾನ ಪಡೆದಿದ್ದಾರೆ. ಇದೇ ೮ ರಂದು ಹೈದ್ರಾಬಾದ್ ನಾಂಪಲ್ಲಿಯ ಎಕ್ಸಿಬಿಷನ್ ಗ್ರೌಂಡ್‌ನ ಗಾಂಧಿ ಶತಮಾನೋತ್ಸವ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಚಿಂತನ-ಮಂಥನ ಸಭೆ
ಈ ಸಂದರ್ಭದಲ್ಲಿ ಸೂಸೈಟಿಯ ಅಧ್ಯಕ್ಷರಾದ ಎಮ್.ವಿ.ರಮಣರೆಡ್ಡಿ ಮತ್ತು ಕಾರ್ಯದರ್ಶಿ ಜೆ.ವೆಂಕಟೇಶ್ವರಲು , ಮಾಜಿ ಪ್ರಧಾನಿ ದಿ.ಪಿ.ವಿ. ನರಸಿಂಹರಾವ್ ಪುತ್ರಿ ವಿಧಾನ ಪರಿಷತ್ತ ಸದಸ್ಯರಾದ ಎಸ್.ವಾಣಿದೇವಿ , ಭಾಷೆ ಮತ್ತು ಸಂಸ್ಕೃತಿಯ ಇಲಾಖೆ ನಿರ್ದೇಶಕ ಮಾಮಿಡಿ ಹರಿಕೃಷ್ಣ , ಸಾಲಾರ್ ಜಂಗ್ ಮ್ಯೂಸಿಯಂ ನಿರ್ದೇಶಕರಾದ ಡಾ.ಎ.ನಾಗೇಂದ್ರ ರೆಡ್ಡಿ ಅವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಶಸ್ತಿ ಪಡೆದ ಕಲಾಕೃತಿ: ’ಇಂಡಿಯಾ ಅಂಡರ್ ಒನ್ ಅಂಬ್ರೇಲಾ’ ಎಂಬ ಶೀರ್ಷಿಕೆಯ ಚಿತ್ರಕಲಾಕೃತಿಯು ಅಕ್ರೀಲಿಕ್ ಬಣ್ದದೊಂದಿಗೆ ಹಿನ್ನಲೆಯಲ್ಲಿ ರಾಷ್ಟ್ರೀಯ ಏಕೀಕರಣ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ನೀಡುವ ಒಂದೇ ಎಳೆಯಲ್ಲಿ ಹುದುಗಿರುವ ವಿವಿಧ ನಂಬಿಕೆಗಳ ಜನರ ನಡುವೆ ಬಲವಾದ ಸಾಂಸೃತಿಕ ಟ್ಯಾಗ್ ಅನ್ನು ಚಿತ್ರಿಸುತ್ತದೆ. ದೇಶ ಸೂಕ್ಷ್ಮ ಪರಿಸ್ಥಿತಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಛತ್ರಅಡಿಯಲ್ಲಿ ವಿವಿಧ ಚಿಹ್ನೆಗಳಿರುವ ಕಲಾಕೃತಿ ಮೆಚ್ಚುಗೆಯ ಪಾತ್ರವಾಗಿದೆ. ಇಂತಹ ಕಲಾಕೃತಿಗಳು ಜನರನ್ನು ಒಗ್ಗೂಡಿಸಿ ಭಾರತವನ್ನು ಬಲಿಷ್ಠಗೊಳಿಸಬಲ್ಲವು. ಪ್ರತಿಷ್ಠಿತ ಹೈದ್ರಾಬಾದ್ ಆರ್ಟ್ ಸೂಸೈಟಿಯಲ್ಲಿ ಈಗ ಈ ಕಲಾಕೃತಿಗೆ ಶಾಶ್ವತ ಸ್ಥಾನ ಗ್ಯಾಲರಿಯಲ್ಲಿ ಸಿಕ್ಕಿರುವುದು ಹೆಮ್ಮೆಯ ಸಂಗತಿ.
ಇದನ್ನೂ ಓದಿ: ರಂಗಾಯಣದಲ್ಲಿ ಭಕ್ತ ಸುಧನ್ವ ಯಕ್ಷಗಾನ ಮಠಮಾನ್ಯಗಳು ಕಲೆಗೆ ಪ್ರೋತ್ಸಾಹಿಸಬೇಕು: ಡಾ.ಸದಾನಂದ ಪೆರ್ಲ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…