ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಚಿಂತನ-ಮಂಥನ ಸಭೆ

2
122

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಆಮಂತ್ರಣ ಹೋಟೆಲನಲ್ಲಿ ಸೋಮವಾರ ದಿನಾಂಕ 09.05.2022 ರಂದು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಮುಖಂಡರ ರಚನಾತ್ಮಕ ಚಿಂತನ-ಮಂಥನ ಸಭೆ ಒಕ್ಕೂಟದ ಕಾರ್ಯಾಧ್ಯಕ್ಷ ಶ್ರೀ ವಿಠ್ಠಲ ಯಾದವ ಅವರ ಅದ್ಯಕ್ಷತೆಯಲ್ಲಿ ಜರುಗಿತು.

ಇದನ್ನೂ ಓದಿ: ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರವಲ್ಲಿ ಶ್ರಮಿಸಿದವರು ಜಗಜೀವನರಾಮ

Contact Your\'s Advertisement; 9902492681

ಪ್ರವರ್ಗ-1 ರಲ್ಲಿ ಸುಮಾರು 95 ಜಾತಿಗಳಿವೆ. ಇದರಲ್ಲಿ 46 ಜಾತಿಗಳು ಅಲೆಮಾರಿ ಸುಮುದಾಯಕ್ಕೆ ಸೇರಿರುತ್ತವೆ. ಪ್ರವರ್ಗ-1ರ ಜಾತಿಗಳ ಜನರಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಯಿತು. ಸ್ಥಳೀಯ ಮುಖಂಡರ, ಬಂಧುಗಳ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಪ್ರಾರಂಭಿಸುವ ಕುರಿತು ಹಾಗೂ ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಪ್ರವರ್ಗ-1ರ ಜಾತಿಗಳ ನ್ಯಾಯಬದ್ಧ ಬೇಡಿಕೆಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಇದನ್ನೂ ಓದಿ: ಆಜಾನ್‌ಗೆ ವಿರೋಧಿಸಿ ಶ್ರೀರಾಮ ಸೇನೆ ಅಭಿಯಾನ: ಮಸೀದಿ ಮುಂದೆ ಕಾವಲು ಕುಳಿತ ದಲಿತ ಸಂಘಟನೆ

ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ, ಒಕ್ಕೂಟದ ಪ್ರದಾನ ಕಾರ್ಯದರ್ಶಿ ಲೋಕೇಶಪ್ಪ, ಉಮಾಶಂಕರ ಯಾದವ, ನರಸಿಂಹ ಮೂರ್ತಿ, ಸೂರ್ಯಪ್ರಕಾಶ ಹಾಗೂ ಪ್ರವರ್ಗ-1ರಲ್ಲಿ ಬರುವಂತ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ: AIMIM ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ರಹೀಮ್ ಮಿರ್ಚಿ ಪುನಃ ನೇಮಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here