ರಂಗಾಯಣದಲ್ಲಿ ಭಕ್ತ ಸುಧನ್ವ ಯಕ್ಷಗಾನ ಮಠಮಾನ್ಯಗಳು ಕಲೆಗೆ ಪ್ರೋತ್ಸಾಹಿಸಬೇಕು: ಡಾ.ಸದಾನಂದ ಪೆರ್ಲ

1
18

ಕಲಬುರಗಿ : ದಕ್ಷಿಣ ಕರ್ನಾಟಕದಲ್ಲಿ ಯಕ್ಷಗಾನ ಬೆಳೆಸಿದಂತೆ ಉತ್ತರ ಕರ್ನಾಟಕದಲ್ಲಿ ಮಠಮಾನ್ಯಗಳು ಬಯಲಾಟದಂಥ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಮತ್ತು ದಕ್ಷಿಣಕನ್ನಡ ಸಂಘದ ಅಧ್ಯಕ್ಷ ಡಾ.ಸದಾನಂದ ಪೆರ್ಲ ಸಲಹೆ ನೀಡಿದರು.

ರಂಗಾಯಣದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳ ಬೇಸಿಗೆ ರಂಗತರಬೇತಿ ಶಿಬಿರದ ಅಂಗವಾಗಿ ಭಾನುವಾರ ತೀರ್ಥಹಳ್ಳಿಯ ಗಾಯತ್ರಿ ಮಹಿಳಾ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಭಕ್ತಸುಧನ್ವ ಯಕ್ಷಗಾನ ಪ್ರಸಂಗ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಿಂದಲೇ ಯಕ್ಷಗಾನ ನೋಡುವ ಮೂಲಕ ರಾಮಾಯಣ, ಮಹಾಭಾರತ, ಭಾಗವತ, ದೇವಿಪುರಾಣ ಮುಂತಾದ ಪೌರಾಣಿಕ ಕಥೆಗಳನ್ನು ತಿಳಿಯಲು ಸಾಧ್ಯವಾಯಿತು. ಕರಾವಳಿಯಲ್ಲಿ ಸ್ಥಳೀಯಭಾಷೆಗಳನ್ನಾಡುವ ಜನರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಕನ್ನಡ ಭಾಷೆ ಉಳಿದಿದ್ದು ಯಕ್ಷಗಾನದ ಮೂಲಕವೆಂಬುದು ಗಮನಿಸಬೇಕಾದ ಸಂಗತಿ ಎಂದರು.

Contact Your\'s Advertisement; 9902492681

ಇದನ್ನೂ ಓದಿ: ವಿಶ್ವಗುರು ಬಸವಣ್ಣನವರ ೮೮೯ನೇ ಜಯಂತೋತ್ಸವ

ಮುಖ್ಯ ಅತಿಥಿಯಾಗಿದ್ದ ಕಥೆಗಾರ ಚಿದಾನಂದ ಸಾಲಿ ಮಾತನಾಡಿ, ಎಲ್ಲ ಪ್ರಕಾರಗಳ ಕಲೆಗಳನ್ನು ನೋಡುವ ಮೂಲಕ ಸಾಂಸ್ಕೃತಿಕ ಪ್ರಜ್ಞೆ ಮಾಡಿಸಿಕೊಳ್ಳಲು ಸಾಧ್ಯ ಎಂದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿ, ಬೇಸಿಗೆ ತರಬೇತಿ ಶಿಬಿರದ ಭಾಗವಾಗಿ ವಿವಿಧ ಪ್ರದರ್ಶನಗಳನ್ನು ಮಕ್ಕಳಿಗಾಗಿ ಏರ್ಪಡಿಸಲಾಗುತ್ತಿದೆ ಎಂದರು. ಆಡಳಿತಾಧಿಕಾರಿ ಜಗದೀಶ್ವರಿ ನಾಸಿ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು. ಉಮೇಶ ಪಾಟೀಲ ಬೆಳಕಿನ ನಿರ್ವಹಣೆ ಮಾಡಿದರು. ಚಿಣ್ಣರ ಮೇಳದ ಮಕ್ಕಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ಗಮನಾರ್ಹವಾಗಿತ್ತು.

ಮಹಾಭಾರತದ ಸುಧನ್ವನ ಪಾತ್ರ ನಿರ್ವಹಿಸಿದ ಜ್ಯೋತಿ ಶಾಸ್ತ್ರಿ ನಿರ್ದೇಶಿಸಿದ್ದರು. ಅರ್ಜುನನಾಗಿ ಮಯೂರಿ ಉಪಾಧ್ಯಾಯ, ಕೃಷ್ಣನಾಗಿ ವರದಾ ಐತಾಳ ಅಚ್ಭುಕಟ್ಟಾಗಿ ಅಭಿನಯಿಸಿದರು. ಭಾಗವತರಾಗಿ ಭಾರ್ಗವ ಕೇಡಲಸರ ಅವರು, ಭಾಗವತರಾಗಿ ಕಾರ್ಯ ನಿರ್ವಹಿಸಲಿದರು. ಚಂಡೆಯನ್ನು ಅಮೃತದೇವ ಮತ್ತು ಮದ್ದಳೆಯನ್ನು ಆಗ್ನೇಯ ನಿರ್ವಹಿಸಲಿದರು. ನಿತ್ಯಾನಂದ ನಾಯಕ್ ಅವರು ವರ್ಣಾಲಂಕಾರ ಮಾಡಿದ್ದರು.

ಇದನ್ನೂ ಓದಿ: ಆಜಾನ್‌ಗೆ ವಿರೋಧಿಸಿ ಶ್ರೀರಾಮ ಸೇನೆ ಅಭಿಯಾನ: ಮಸೀದಿ ಮುಂದೆ ಕಾವಲು ಕುಳಿತ ದಲಿತ ಸಂಘಟನೆ

ಕಲಬುರಗಿ ವಿಮಾನನಿಲ್ದಾಣ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್, ಉದ್ಯಮಿ ಜತ್ತನ್, ವೆಂಕಟೇಶ ಮುದುಗಲ್, ಶಿವಯ್ಯಸ್ವಾಮಿ ಬಿಬ್ಬಳ್ಳಿ ,ಹಾಗೂ ಮಕ್ಕಳ ಪಾಲಕರು, ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here