ಕಲಬುರಗಿ: ಕಾಯಕದೊಂದಿಗೆ ನಿಸ್ವಾರ್ಥ ಸೇವೆ ಮಾಡುವವರು ನಮ್ಮ ಸಮಾಜದ ದೊಡ್ಡ ಆಸ್ತಿ ಅಂಥವರನ್ನು ಸಮಾಜಕ್ಕೆ ಪರಿಚಯಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹರಸೂರ ಗ್ರಾಮದ ಕಲ್ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಕರಬಸವೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಹರಸೂರ ಗ್ರಾಮದಲ್ಲಿ ಕರಿಬಸವೇಶ್ವರ ಕಲ್ಮಠದ ಪೀಠಾಧಿಪತಿಗಳಾದ ಕರಸಿದ್ದೇಶ್ವರ ಪೂಜ್ಯರ ಪಟ್ಟಾಧಿಕಾರದ 15 ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸೇವೆ ಗೈಯುತ್ತಿರುವವರನ್ನು ಗೌರವಿಸಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚನ ನೀಡುತ್ತಾ ಬಂಧನಗಳೆ ಇಲ್ಲದ ಜಾಗದಲ್ಲಿ, ಭಾವನೆಗಳ ಸಂತೆ ನಡೆಸಿದರೆ ಬಂಡೆಗಳ ಮೇಲೆ ನೀರು ಸುರಿದಂತೆ ಆಗುತ್ತದೆ.ಅದರಂತೆ ನಾವು ಬದುಕಿನ ಹೆಜ್ಜೆ ಗುರುತನ್ನು ಉಳಿಸಿ ಹೋಗುವುದು ನಡಿಗೆಯಿಂದಲ್ಲಾ, ಉತ್ತಮ ನಡತೆಯಿಂದ ಸಾಧ್ಯವೆಂದರು. ಆಧ್ಯಾತ್ಮಿಕ ಚಿಂತನೆಯೊಂದಿಗೆ ನಾವೆಲ್ಲರೂ ಉತ್ತಮ ಸಮಾಜ ಕಟ್ಟುವ ಕಾರ್ಯ ಮಾಡೋಣ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ: ಹೇಮರೆಡ್ಡಿಯ ಬದ್ದತೆ ಮತ್ತು ಸರಳತೆ ಎಲ್ಲರಿಗೂ ಆದರ್ಶ: ಸಜ್ಜನಶೆಟ್ಟಿ
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡುತ್ತ ಜೀವನ ಎಂಬ ತರಗತಿಯಲ್ಲಿ ಗಂಟೆಗೊಂದು ಪಾಠ, ನಿಮಿಷಕ್ಕೊಂದು ಅನುಭವ ಆಗುತ್ತದೆ. ಜೀವನ ಚಿಕ್ಕದಾಗಿದೆ ನಿಮ್ಮನ್ನು ನಗಿಸುವ ಮತ್ತು ಪ್ರೀತಿಸುವ ಜನರೊಂದಿಗೆ ಹೆಚ್ಚಿಗೆ ಸಮಯ ಕಳೆಯುವುದರೊಂದಿಗೆ ಸುಂದರವಾದ ಜೀವನ ರೂಪಿಸಿಕೊಳ್ಳೊಣ.” ಹೂವಿನ ಮೇಲೆ ನಾವು ಮಲಗಿದರೆ ಅದು ಮೊದಲ ರಾತ್ರಿ,ಹೂವು ನಮ್ಮ ಮೇಲಿದ್ದರೆ ಅದು ಕೊನೆಯ ರಾತ್ರಿ” ಜೀವಂತವಿದ್ದಾಗ ಉಸಿರಿರುತ್ತದೆ, ಮರಣ ಹೊಂದಿದಾಗ ಹೆಸರು ಉಳಿಯುವ ಉತ್ತಮ ಕಾರ್ಯ ಮಾಡಬೇಕು ಎಂಬ ಹಲವಾರು ಹಾಸ್ಯ ಚಟಾಕಿಗಳೊಂದಿಗೆ ಸಮಾಜಕ್ಕೆ ಸಂದೇಶ ನೀಡುವುದರೊಂದಿಗೆ ನೆರೆದವರನ್ನು ಮನರಂಜಿಸಿದರು.
ಕಡಗಂಚಿ ಪೂಜ್ಯರಾದ ವೀರಭದ್ರ ಶಿವಾಚಾರ್ಯರು, ಜನವಾಡದ ಮಹಾದೇವ ಸ್ವಾಮಿಗಳು ಆಶೀರ್ವಚನ ನೀಡಿದರು .ವೇದಿಕೆ ಮೇಲೆ ಕರಸಿದ್ದಪ್ಪ ಪಾಟೀಲ, ಬಸವರಾಜ ಕಾಂತಾ, ಹಿರಿಯ ಸಾಹಿತಿಗಳಾದ ಶಿವಶಂಕರ ಕಾಂತಾ ಹರಸೂರ ಇದ್ದರು. ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಶಿವಶಂಕರ ಕಾಂತಾ ಹರಸೂರ ಅವರು ರಚಿಸಿದ ಓ ಕನ್ನಡ ಹಾಗೂ ಹರಸೂರ ಅಣವೀರಪ್ಪನ ಸ್ವರ ವಚನಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಪೋಲಿಸ್ ಸಾಹಿತಿ ರಜನೀಕಾಂತ ಬರುಡೆ, ಸಮಾಜ ಸೇವಕರಾದ ಕೇದರನಾ ಥ ಕುಲಕರ್ಣಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಇದನ್ನೂ ಓದಿ: ಮರತೂರ : ಪಲ್ಲಕ್ಕಿ ಉತ್ಸವ, ಪುರಾಣ
ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಮಹಾಪುರಾಣವನ್ನು ವೇದಮೂರ್ತಿ ಶಂಭುಲಿಂಗ ಶಾಸ್ತ್ರಿಗಳು ಸುಸ್ಖಲಿತವಾಣಿಯಿಂದ ಹೇಳಿದರು.ಸಂಗೀತ ಕಲಾವಿದರಾದ ರವಿ ಆಳಂದ ಹಾಗೂ ಸಂಗಮೇಶ ಹೇರೂರ ಸಂಗೀತ ಸೇವೆ ಸಲ್ಲಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…