ಹೇಮರೆಡ್ಡಿಯ ಬದ್ದತೆ ಮತ್ತು ಸರಳತೆ ಎಲ್ಲರಿಗೂ ಆದರ್ಶ: ಸಜ್ಜನಶೆಟ್ಟಿ

1
100
  • ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ೬೦೦ನೇ ಜಂಯತಿ

ಕಲಬುರಗಿ: ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ವಿಚಾರ ಧಾರೆಗಳು, ಬದುಕಿನ ಸರಳತೆ ಮತ್ತು ನಿಷ್ಠೆ ಇಂದಿನ ಜನಾಂಗಕ್ಕೆ ಆದರ್ಶವಾಗಿವೆ. ಅವುಗಳ ಪಾಲನೆಯಲ್ಲಿ ನಾವೆಲ್ಲರೂ ಬದ್ಧತೆಯನ್ನು ತೋರಿಸಬೇಕು. ಕೇವಲ ತೋರಿಕೆಗಾಗಿ ಜಯಂತಿ ಆಚರಿಸದೇ ಅವರ ಸರಳತೆಯನ್ನು ಜೀವನದಲ್ಲಿ ಅಳವಡಿಕೊಳ್ಳುವುದೇ ನಾವೆಲ್ಲರೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನಿಗೆ ತೋರುವ ನಿಜವಾದ ಗೌರವವಾಗಿರುತ್ತದೆ ಎಂದು ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ೬೦೦ನೇ ಜಯಂತಿಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಇದನ್ನೂ ಓದಿ: ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ

Contact Your\'s Advertisement; 9902492681

ಕಸಾಪ ತಾಲೂಕಾ ಮಹಿಳಾಪ್ರತಿನಿಧಿ ಕವಿತಾ ಕಾವಳೆ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಆದರ್ಶ ಸೊಸೆ ಮತ್ತು ಮಗಳಾಗಿದ್ದಾಳೆ,ಶಿವನನ್ನು ಒಲಿಸಿಕೊಂಡ ಮಹಾಸಾಧ್ವಿ ಧಾರ್ಮಿಕತೆಯ ಪ್ರತೀಕವಾಗಿದ್ದಾಳೆ, ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಸನೂರು ಗ್ರಾಮ ಪಂಚಾಯತ ಸದಸ್ಯರಾದ ಕುಪೇಂದ್ರ ಎಂ ಬರಗಾಲಿ ಹಾಗೂ ನಾಟಕ ಕಲಾವಿದರಾದ ಹರಿಕೃಷ್ಣ, ರೂಪಾ, ಪ್ರದೀಪ, ರಾಘವೇಂದ್ರ ಮತ್ತು ಉದಯಕುಮಾರ ವೇದಿಕೆಯ ಮೇಲಿದ್ದರು. ಇದೇ ಸಂದರ್ಭದಲ್ಲಿ ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಂಗಭೂಮಿ ಕಲಾವಿದರಿಗೆ ಕನ್ನಡ ಶಾಲು ಮತ್ತು ಕನ್ನಡದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ವಿಶ್ವನಾಥ ತೋಟ್ನಳ್ಳಿ ನಿರೂಪಿಸಿ ವಂದಿಸಿದರು.

ಇದನ್ನೂ ಓದಿ: ಬೈಕಗೆ ಹಿಟಾಚಿ ಡಿಕ್ಕಿ ಎಫ್.ಐ.ಆರ್ ದಾಖಲಿಸದಿರುವುದಕ್ಕೆ ಆಕ್ರೋಶ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here