ಕಲಬುರಗಿ: ರೈತಪರ ಹೋರಾಟಗಾರರು ಮತ್ತು ಜನಪರ ಕೆಲಸಗಳಲ್ಲಿ ಮೇಲುಗೈ ಸಾಧಿಸಿದ್ದ ದಿ ಸಿದ್ದಣ್ಣ ರಾಜವಾಳ ಅವರು ಒಬ್ಬ ಆದರ್ಶ ವ್ಯಕ್ತಿಯಾಗಿ ದ್ದರು ಎಂದು ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ ಅಜಯ್ ಸಿಂಗ್ ರವರು ಹೇಳಿದ್ದಾರೆ.
ಕಳೆದ ವರ್ಷ ಕೋವಿಡ್ ಮಾಹಮಾರಿಗೆ ತುತ್ತಾಗಿ ಸಾವನ್ನಪ್ಪಿದ ದಿ ಸಿದ್ದಣ್ಣ ರಾಜವಾಳ ಅವರಿಗೆ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ ಅಜಯ್ ಸಿಂಗ್ ಮಾತನಾಡಿದರು.
ಸಿದ್ದಣ್ಣ ರಾಜವಾಳ ಅವರು ಗ್ರಾಮ ಪಂಚಾಯತ ಸದಸ್ಯರಾಗಿ ಮತ್ತು ಮಿಕ್ ಸಿಮೆಂಟ್ ಕಾರ್ಮಿಕರಾಗಿ ಮಾಡಿರುವ ಹಲವಾರು ಜನಪರ ಕೆಲಸಗಳನ್ನು ಅವರು ಸ್ಮರಿಸಿದರು.
ರಾಜವಾಳ ಅವರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಆರ್ಥಿಕ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಂಪೂರ್ಣವಾಗಿ ಸಾಹಯ ಮಾಡುವುದಾಗಿ ಅವರು ಹೇಳಿದರು.
ಇದನ್ನೂ ಓದಿ: ತೊಗರಿಗೆ ಬೆಂಬಲ ನೀಡುವಂತೆ ಕನ್ನಡ ಭೂಮಿ ಆಗ್ರಹ
ಇದಕ್ಕೂ ಮೊದಲು ಪ್ರಸ್ತಾವಿಕವಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಜ್ಯ ಸಂಚಾಲಕರಾದ ಶೌಕತ್ ಅಲಿ ಆಲೂರು ಮಾತನಾಡಿ ಸಿದ್ದಣ್ಣ ರಾಜವಾಳ ನಮ್ಮ ಒಡನಾಡಿಯಾಗಿದ್ದರು ರೈತರ ಪರವಾಗಿ ತೊಗರಿ ಮಂಡಳಿಯ ರಚನೆ. ಮಲ್ಲಬಾದ್ ಎತ ನೀರಾವರಿ ಜಾರಿಗಾಗಿ ಹಾಗೂ ರೈತರ ಪರವಾದ ಯೋಜನೆಗಳು ಜಾರಿಮಾಡಲು ನಡೆದ ಹೋರಾಟದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಹೋರಾಟ ಅವಿಸ್ಮರಣೀಯವಾಗಿದೆ ಎಂದರು.
ಬಿಜೆಪಿ ಮುಖಂಡರಾದ ಬಸವರಾಜ ಪಾಟೀಲ ನರಿಬೋಳ ಮಾತನಾಡಿ ಸಿದ್ದಣ್ಣ ರಾಜವಾಳ ಒಬ್ಬ ಸೈದ್ದಾಂತಿಕ ವ್ಯಕ್ತಿಯಾಗಿದ್ದರು ಯಾವುದೇ ಪಕ್ಷದಲ್ಲಿ ಇದ್ದರೂ ಬದ್ದತೆಯ ಜೊತೆ ರಾಜಿ ಮಾಡಿಕೊಂಡಿರಲಿಲ್ಲ ಎಂದರು.
ಇದನ್ನೂ ಓದಿ: ಗ್ಯಾನ್ ವ್ಯಾಪಿ ಮಸೀದಿಯ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಪ್ರತಿಭಟನೆ
ಮಾಜಿ ಜಿ ಪಂ ಸದಸ್ಯರಾದ ಶೋಭಾ ಬಾಣಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಹೋರಾಟಗಾರರಾದ ದಿ ಸಿದ್ದಣ್ಣ ರಾಜವಾಳ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಅವರ ಪುತ್ರ ರಾಜೇಂದ್ರ ರಾಜವಾಳ ಅವರು ಅವರ ಗೆಳೆಯರನ್ನು ಕರೆದು ಹಾಗೂ ಇಡೀ ಜೇವರ್ಗಿ ತಾಲ್ಲೂಕಿಗೆ ಮಾದರಿಯಾಗುವ ಮತ್ತು ಸಂಪ್ರದಾಯವಿಲ್ಲದ ಅವರ ನೆನಪುಗಳನ್ನು ಹಂಚಿಕೊಳ್ಳುವಅಪರೂಪದ ಕಾರ್ಯಕ್ರಮ ರೂಪಿಸಿದ್ದು ಅತ್ಯಂತ ಶ್ಲಾಘನೀಯ ಹೋರಾಟ ಮತ್ತು ಸಿದ್ದಾಂತಕ್ಕೆ ಬದ್ದರಾಗಿ ದುಡಿದ ಕುಟುಂಬಕ್ಕೆ ಶಾಸಕರು ಆರ್ಥಿಕ ಸಾಹಯ ಸಹಕಾರ ನೀಡುವಂತೆ ಹೇಳಿದರು.
ಜೆಡಿಎಸ್ ಮುಖಂಡ ಶಂಕರ ಕಟ್ಟಿಸಂಗಾವಿ. ಮಲ್ಲಿಕಾರ್ಜುನ ದಿನ್ನಿ ಮಾತನಾಡಿದರು. ಯುವ ಹೋರಾಟಗಾರರಾದ ರಾಜು ಮುದ್ದಡಿಗಿ ,ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ ಸಿರಿ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರುಕುಮ್ ಪಟೇಲ್ ಇಜೇರಿ. ಮಾಜಿ ಜಿ ಪಂ ಸದಸ್ಯರಾದ ಶಾಂತಪ್ಪ ಕೂಡಲಗಿ. ಚಂದ್ರಶೇಖರ ಹರನಾಳ. ಬಾಬು ಬಿ ಪಾಟೀಲ. ಶೈಲ್ ಸಜ್ಜನ್, ತಿಪ್ಪಣ್ಣ ನಾಟಿಕರ್, ಬೀರಪ್ಪ ಪೂಜಾರಿ, ಬಸವರಾಜ ಪೂಜಾರಿ, ಬಾಬು ಕಟ್ಟಿಸಂಗವಿ, ನಿಂಗಣ್ಣ ಪೂಜಾರಿ, ಮುಂತಾದವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: SSP ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…