ಕಲಬುರಗಿ: ತೊಗರಿ ನಾಡು ಕಲಬುರ್ಗಿಯಲ್ಲಿ ರೈತರು ಬೆಳೆದ ತೊಗರಿ ಖರೀದಿಸಲು ಕೂಡಲೇ ತೊಗರಿ ಖರೀದಿ ಕೇಂದ್ರ ಆರಂಭ ಮಾಡಬೇಕು ಹಾಗೂ ಪ್ರತಿ ಕ್ವಿಂಟಾಲ್ ಗೆ 8 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಳೆದ ವರ್ಷ ನಾಮಕೆವಾಸ್ತೆ ಎಂಬಂತೆ ತೊಗರಿ ಕೇಂದ್ರ ಪ್ರಾರಂಭಿಸಲಾಗಿತ್ತು.ಆದರೆ ಅನೇಕ ರೈತರಿಂದ ತೊಗರಿ ಖರೀದಿ ಮಾಡಲಾಗಿಲ್ಲ. ಇದರಿಂದ ರೈತರಿಗೆ ತೊಂದರೆ ಉಂಟಾಯಿತು.ಭಾರಿ ಮಳೆಗೆ ತೊಗರಿ ಬೆಳೆ ಹಾಳಾಗಿದ್ದು, ಇಳುವರಿ ಕಡಿಮೆಯಾಗಿದೆ.ಎಕರೆಗೆ 4 ರಿಂದ 5 ಕ್ವಿಂಟಾಲ್ ಬರುತ್ತಿದ್ದ ಬೆಳೆ ಎಕರೆಗೆ ಕೇವಲ 1ರಿಂದ 2 ಕ್ವಿಂಟಾಲ್ ಇಳುವರಿ ಬರುತ್ತಿದೆ.ಇದರಿಂದ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಗ್ಯಾನ್ ವ್ಯಾಪಿ ಮಸೀದಿಯ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಪ್ರತಿಭಟನೆ
ಈ ಬಾರಿ ಕ್ವಿಂಟಾಲ್ ತೊಗರಿ ಬೆಲೆ 6 ಸಾವಿರ ರೂಪಾಯಿ ದಾಟಿಲ್ಲ.ಕಸ ಕಳೆ ಖರ್ಚು ಈ ಬಾರಿ ಅಧೀಕವಾಗಿದೆ ಇದರಿಂದ ರೈತರು ಆರ್ಥಿಕವಾಗಿ ಜರ್ಜೀತಗೊಂಡಿದ್ದಾರೆ.ಇದ್ದ ಬದ್ಧ ತೊಗರಿ ಬೆಳೆ ಮಾತ್ರ ರೈತರ ಜೀವನಕ್ಕೆ ಆಸರವಾಗಿದೆ.ಮೇಲಿಂದ ಪ್ರವಾಹ ಸೃಷ್ಟಿಯಾಗಿ ಜಮೀನುಗಳು ಹಾಳಾಗಿವೆ.ಸರಕಾರ ಪರಿಹಾರ ಹಣ ನೀಡಿಲ್ಲ.ಕೂಡಲೇ ಸರ್ಕಾರ ತೊಗರಿ ಖರೀದಿ ಕೇಂದ್ರ ಆರಂಭ ಮಾಡಬೇಕು.ಬೆಂಬಲ ಬೆಲೆ ನೀಡಿ ಕ್ವೀಂಟಾಲ್ ಗೆ 8 ಸಾವಿರ ನಿಗದಿ ಮಾಡಿ ಖರೀದಿಸಬೇಕು.
ರೈತರಿಗೆ ಮೋಸ ಮಾಡುತ್ತಿರುವ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು.ಇನ್ನು ಕಳೆದ ವರ್ಷ ಮಳೆ ಹಾವಳಿಗೆ ಹೆಸರು,ಉದ್ದು,ತೊಗರಿ ಬೆಳೆಗಳು ಹಾಳಾಗಿವೆ.ಇದರಿಂದ ರೈತರಿಗೆ ವ್ಯವಸಾಯದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಕೂಡಲೇ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಮಾಡಬೇಕು.
ಇದನ್ನೂ ಓದಿ: SSP ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ
ಪ್ರಸಕ್ತ ವರ್ಷ ಮುಂಗಾರು ಸಮೀಪಿಸುತ್ತಿರುವುದರಿಂದ ಬಿತ್ತನೆ ಕಾರ್ಯಗಳಿಗೆ ಉಚಿತ ಬೀಜ ಮತ್ತು ಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಬೇಕು.ಇದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.