ಬಿಸಿ ಬಿಸಿ ಸುದ್ದಿ

ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

  • ಜೆಡಿಎಸ್ 32 2ನೇ ಪ್ರಾಶಸ್ತ್ಯ ಮತ ಕೊಡಲು ರೆಡಿ; ಕಾಂಗ್ರೆಸ್ 2ನೇ ಅಭ್ಯರ್ಥಿಯ 24 ಪ್ರಾಶಸ್ತ್ಯ ಮತ ನಮಗೆ ಕೊಡಲಿ
  • ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿ ಆತ್ಮಸಾಕ್ಷಿ ಮತ ಪಡೆಯಲಿಕ್ಕಾ ಎಂದು ಕುಟುಕಿದ ಮಾಜಿ ಸಿಎಂ

ಮೈಸೂರು: ಬಿಜೆಪಿಯನ್ನು ಸೋಲಿಸುವುದೇ ನನ್ನ ಮೊದಲ ಅಜೆಂಡಾ. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಜತೆ ಮಾತುಕತೆ ನಡೆಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲದ ಬಗ್ಗೆ ಸಿದ್ದರಾಮಯ್ಯ ಹೊರತುಪಡಿಸಿ ಎಲ್ಲಾ ನಾಯಕರು ಒಪ್ಪಿದ್ದಾರೆ. ನೀವು (ಕಾಂಗ್ರೆಸ್) ಬಿಜೆಪಿ ಅಭ್ಯರ್ಥಿ ಸೋಲಬೇಕು ಅಂದರೆ, ನಾವು 32 ಎರಡನೇ ಪ್ರಾಶಸ್ತ್ಯ ಮತ ಕೊಡುತ್ತೇವೆ. ನಿಮ್ಮ ಎರಡನೇ ಅಭ್ಯರ್ಥಿಯ 24 ಪ್ರಾಶಸ್ತ್ಯ ಮತ ನಮಗೆ ಕೊಡಿ ಎಂದು ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಅವರು ನೇರವಾಗಿಯೇ ಕೇಳಿದರು.

ಕಲಬುರಗಿ ಪೇಟೆ ಧಾರಣೆ

ಇವತ್ತು ಅಲ್ಪಸಂಖ್ಯಾತರ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಭಜನೆ ಮಾಡುತ್ತಿದ್ದಾರೆ. ಆದರೆ, 2016ರಲ್ಲಿ ಜೆಡಿಎಸ್ ಪಕ್ಷದ ಶಾಸಕರನ್ನು ಅಪಹರಣ ಮಾಡಿ ನಮ್ಮ ಪಕ್ಷದಿಂದ ರಾಜ್ಯಸಭೆ ಚುನಾವಣೆಗೆ ನಿಂತಿದ್ದ ಬಿ.ಎಂ.ಫಾರೂಕ್ ಅವರನ್ನು ಸೋಲಿಸಿದ್ದು ಯಾರು? ಇದೇ ಸಿದ್ದರಾಮಯ್ಯ. ಫಾರೂಕ್ ಅವರು ಅಲ್ಪಸಂಖ್ಯಾತರಲ್ಲವೆ? ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಅಧಿಕೃತ ಅಭ್ಯರ್ಥಿ ಆಗಿದ್ದ ಇಕ್ಬಾಲ್ ಅಹಮದ್ ಸರಡಗಿ ಅವರನ್ನು ಸೋಲಿಸಲಿಲ್ಲವೆ? ಸರಡಗಿ ಅವರು ಮುಸ್ಲಿಮರಲ್ಲವೇ? ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ತಮ್ಮ ಸ್ವಾರ್ಥಕ್ಕಾಗಿ ಏನನ್ನೂ ಮಾಡಲು ಹೇಸುವುದಿಲ್ಲ. ಈಗಾಗಲೇ ಅವರು ಅಲ್ಪಸಂಖ್ಯಾತರ ಜಪ ಮಾಡುತ್ತಾ ಅನೇಕ ಅಲ್ಪಸಂಖ್ಯಾತರನ್ನು ಮುಗಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು. ಇವತ್ತಿನ ಪಾಪದ ಸರ್ಕಾರದ ಜನಕ ಸಿದ್ದರಾಮಯ್ಯನವರೇ. ವಿಪಕ್ಷ ನಾಯಕರಾಗಿ, ಗೂಟದ ಕಾರಿನಲ್ಲಿ ಓಡಾಡಲು ಅವತ್ತಿನ ಮೈತ್ರಿ ಸರ್ಕಾರವನ್ನು ತೆಗೆದರು ಎಂದು ವಾಗ್ದಾಳಿ ನಡೆಸಿದ ಹೆಚ್ ಡಿಕೆ. ರೈತರ ಸಾಲ ಮನ್ನಾ ಮಾಡಿದ ಬಳಿಕ ನಾನು ಸಿಎಂ ಕುರ್ಚಿಯಿಂದ ಕೆಳಗಿಳಿದೆ. ಅದಕ್ಕಾಗಿಯೇ ಅಮೆರಿಕಗೆ ಹೋಗಿದ್ದೆ. ರೈತರ ಸಾಲ ಮನ್ನಾ ಮಾಡುವ ಗುರಿ ನನ್ನದಾಗಿತ್ತು. ರೈತರ 25 ಸಾವಿರ ಕೋಟಿ ರೂ. ಸಾಲ ಮಾಡಿದ ಬಳಿಕ ಕುರ್ಚಿಯಿಂದ ನೆಮ್ಮದಿಯಾಗಿ ಕೆಳಗಿಳಿದೆ ಎಂದು ಅವರು ಹೇಳಿದರು.

ಕರ್ನಾಟಕ ಪ್ರಗತಿಪರ ಆಗಲು ಅರಸರು ಕಾರಣ: ಡಾ. ವೈ ಡಿ ರಾಜಣ್ಣ

ಯಡಿಯೂರಪ್ಪ ಜತೆ ಭೇಟಿ; ಸಿದ್ದರಾಮಯ್ಯಗೆ ಪ್ರಶ್ನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಹೀಗೆ ಪ್ರತಿಕ್ರಿಯಿಸಿದರು ಕುಮಾರಸ್ವಾಮಿ ಅವರು. ಅವರಿಬ್ಬರು ಯಾವ ಉದ್ದೇಶಕ್ಕಾಗಿ ನಿನ್ನೆ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದರು. ಅದು ವಿಐಪಿ ರೂಮಿನಲ್ಲಿ. ಅಲ್ಲಿಗೆ ಯಾರೂ ಹೋಗುವುದಕ್ಕೆ ಸಾಧ್ಯವಿಲ್ಲ. ಹಾಗಿದ್ದರೂ ಈ ಭೇಟಿಯ ದೃಶ್ಯ, ಚಿತ್ರಗಳು ಹೊರಬಂದಿವೆ. ತಮ್ಮ ಹಿಂಬಾಲಕರ ಮೂಲಕವೇ ಪೋಟೋ, ವಿಡಿಯೋ ರಿಲೀಜ್ ಮಾಡಿಸಿದ್ದಾರೆ.ಇದು ಆತ್ಮಸಾಕ್ಷಿಯ ಮತ ಪಡೆಯುವ ಉದ್ದೇಶವೇ ? ಎಂದು ಸಿದ್ದರಾಮಯ್ಯಗೆ ಮಾಜಿ ಸಿಎಂ ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ರಾಜ್ಯಸಭೆ ಬಗ್ಗೆ ಜೆಡಿಎಸ್ ವಿಚಾರವಾಗಿ ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ವಾಪಸ್ ಸರಿಸಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡಿ ಅಂತಾ ಹೇಳಿದ್ದಾರೆ. ನಾವು ಗೆದ್ದಿರುವುದಕ್ಕಿಂತ ಸೋತಿದ್ದೇ ಹೆಚ್ಚು, ಎಲ್ಲಾ ಚುನಾವಣೆಗಳಲ್ಲಿ ಅವರೇ ಗೆದ್ದಿರೋದು ಪಾಪ. ಬಿಜೆಪಿ ಸೋಲಬೇಕು ಅನ್ನೋದು ಇದ್ದಿದ್ದರೆ ,ಚುನಾವಣಾ ಪೂರ್ವದಲ್ಲಿ ನಮ್ಮ ಜತೆ ಚರ್ಚೆ ಮಾಡಬೇಕಿತ್ತು. ನಮ್ಮ ಪಕ್ಷದಲ್ಲಿ ಹಲವರ ಜೊತೆ ಭಾಂದವ್ಯ ಹೊಂದಿರುವವರ ಜತೆಯಲ್ಲಿ ಮಾತನಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.

ಲೋಕೋಪಯೋಗಿ ಇಲಾಖೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮೊದಲನೆ ಅಭ್ಯರ್ಥಿಗೆ ಮತ ಕೊಟ್ಟ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ 22 ಮತ ಉಳಿಯುತ್ತವೆ. ನಾನು ಕಾಂಗ್ರೆಸ್ ನ ಯಾವ ನಾಯಕರ ಜತೆ ಈ ಬಗ್ಗೆ ಮಾತನಾಡಿಲ್ಲ. ಆದರೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸೋನಿಯಾ ಗಾಂಧಿ ಅವರ ಜತೆ ಮಾತನಾಡಿದರು. ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸದಿದ್ದರೆ ಬಿಜೆಪಿಯಿಂದ ಮೂರನೇ ಅಭ್ಯರ್ಥಿ ಹಾಕುತ್ತಿರಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು ಕುಮಾರಸ್ವಾಮಿ ಅವರು.

ದೇವೇಗೌಡರು ಹಿರಿಯರು, ನಿಮ್ಮಂತವರು ರಾಜ್ಯಸಭೆಗೆ ಬೇಕು ಎಂದು ಬಿಜೆಪಿ ಅವರೆ ಒತ್ತಾಯ ಮಾಡಿದರು. ಬಿಜೆಪಿ ಅವರು ಅಭ್ಯರ್ಥಿ ಹಾಕಿಲ್ಲ ಅಂತ ಕಾಂಗ್ರೆಸ್ ಅವರು ಅಭ್ಯರ್ಥಿ ಹಾಕಿಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಅವರು ಎರಡನೇ ಪ್ರಾಶಸ್ತ್ಯ ಮತ ಕೊಡಿ ಅಂತಾ ಪೊನ್ ಕರೆ ಮಾಡಿ ಕೇಳಿದರು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿವೃತ್ತಿ ಘೋಷಿಸಲಿ ಎಂಬ ಸಿದ್ದರಾಮಯ್ಯ ಸಲಹೆ ವಿಚಾರಕ್ಕೆ ತಿರುಗೇಟು ನೀಡಿದರು ಕುಮಾರಸ್ವಾಮಿ ಅವರು. ಬಿಜೆಪಿ ಸೋಲಬೇಕು ಎನ್ನುವ ಉದ್ದೇಶ ಇದ್ದಿದ್ದರೆ ಮೊದಲೇ ಜೆಡಿಎಸ್ ಜತೆ ಚರ್ಚೆ ಮಾಡುತ್ತಿದ್ದರು. ನನ್ನ ಜತೆಗೆ ಅಲ್ಲದಿದ್ದರೂ ಅವರೊಂದಿಗೆ ಚೆನ್ನಾಗಿರುವವರೊಂದಿಗೆ ಚರ್ಚೆ ಮಾಡಬಹುದಿತ್ತು. ಬಿಜೆಪಿ ಅಭ್ಯರ್ಥಿ ಸೋಲಿಸಲು ಜೆಡಿಎಸ್ ಅಭ್ಯರ್ಥಿ ಹಾಕಬೇಡಿ ಅಂತ ಯಾರೂ ಕೇಳಲಿಲ್ಲ. ಕಾಂಗ್ರೆಸ್ ಪಕ್ಷದ 23 ಮತ ಉಳಿಯುತ್ತವೆ. ಆದ್ದರಿಂದ ದೇವೇಗೌಡರು ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್ ಜತೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ 8-10 ಮತ ಒಡೆಯುತ್ತೇವೆ ಎಂದು ವರಿಷ್ಠರಿಗೆ ಹೇಳಿ ರಾಜ್ಯ ಕಾಂಗ್ರೆಸ್ ನಾಯಕರು ಎರಡನೇ ಅಭ್ಯರ್ಥಿ ಹಾಕಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕದೆ ಇದ್ದರೆ ಬಿಜೆಪಿ ಮೂರನೇ ಅಭ್ಯರ್ಥಿ ಹಾಕುತ್ತಿರಲಿಲ್ಲ. ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಹೊರಟವರು? ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದರು.

ಜನಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

ಚಡ್ಡಿ ಜಗಳದಲ್ಲಿ ಚಡ್ಡಿ ವ್ಯಾಪಾರ ಜೋರು: ಆರ್ ಎಸ್ ಎಸ್, ಕಾಂಗ್ರೆಸ್ ನಡುವೆ ಚಡ್ಡಿ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಇವರ ಜಗಳದಿಂದ ಚಡ್ಡಿಗೆ ಭಾರೀ ಬೇಡಿಕೆ ಬಂದಿದೆ. ಚಡ್ಡಿ ಒಲಿಯುವ ಟೈಲರ್ ಗೆ ಬೇಡಿಕೆ ಶುರು ಆಗಿದೆ ಎಂದು ಟಾಂಗ್ ಕೊಟ್ಟರು.

ಚಡ್ಡಿ ರೈತರ ಸಂಕೇತ. ರೈತರು ಹೊಲದಲ್ಲಿ ಚಡ್ಡಿ (ನಿಕ್ಕರ್) ಹಾಕೊಂಡು ಕೆಲಸ ಮಾಡುತ್ತಾರೆ. ಈಗ ಚಡ್ಡಿ ಚಡ್ಡಿ ಎಂದು ಯಾಕೆ ರೈತರಿಗೆ ಅಪಮಾನ ಮಾಡುತ್ತೀರಿ. ಈ ಚಡ್ಡಿ ಬಗ್ಗೆ ನನ್ಯಾಕೆ ಮಾತನಾಡಲಿ. ಚಡ್ಡಿಯೊಳಗೆ ಏನು ಇಲ್ಲ ಎಂದು ಅವರು ವ್ಯಂಗ್ಯವಾಡಿದರು. ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ಸಾ.ರಾ.ಮಹೇಶ್, ಶಾಸಕರಾದ ಮಂಜುನಾಥ್, ಅಶ್ವಿನ್ ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಗಿಡಮರಗಳಿಲ್ಲದಿದ್ದರೆ ಆಮ್ಲಜನಕವಿಲ್ಲದೇ ಜೀವಿಗಳು ಬದುಕಿರಲಾರವು: ಮಲ್ಲೇಶಿ ಮೋಹಿತೆ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

20 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago