ಮೈಸೂರು: ಡಿ. ದೇವರಾಜ ಅರಸರ 40 ನೆಯ ಪುಣ್ಯಸ್ಮರಣೆ ಅಂಗವಾಗಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯು ಅರಮನೆ ಉತ್ತರದ್ವಾರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜ ಅರಸರ ಭಾವಚಿತ್ತಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಕನ್ನಡ ನಾಡು ಕಂಡ ಧೀಮಂತ ನಾಯಕರು ದೇವರಾಜ ಅರಸರು. ಕೃಷಿಕ ಕಾರ್ಮಿಕ ಶೋಷಿತ ಹಿಂದುಳಿದ ಸಮುದಾಯಗಳ ಪರವಾದ ಸಾಮಾಜಿಕ -ರಾಜಕೀಯ ಒಲವು- ನಿಲುವುಗಳಿಂದ ಸಮ ಸಮಾಜದ ಆಶಯಗಳೊಂದಿಗೆ ಕರ್ನಾಟಕಕ್ಕೆ ಪ್ರಗತಿಪರ ರಾಜ್ಯ ಎಂಬ ಹೆಸರು ಬರಲಿಕ್ಕೆ ಕಾರಣರಾದವರು ಮಾಜಿ ಮುಖ್ಯ ಮಂತ್ರಿಗಳೂ ಆಗಿದ್ದ ದೇವರಾಜ ಅರಸರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ ವೈ ಡಿ ರಾಜಣ್ಣ ತಿಳಿಸಿದರು.
ಇದನ್ನೂ ಓದಿ: ಲೋಕೋಪಯೋಗಿ ಇಲಾಖೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಭೂಮಿ ಇಲ್ಲದವರಿಗೆ ಭೂಮಿಯನ್ನ ಹಂಚುವ ಭೂ ಸುಧಾರಣ ಕಾಯ್ದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ದಲಿತರಿಗೆ ಹಾಗೂ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಜಾರಿಗೆ ತಂದ ಹಾವನೂರು ವರದಿಯ ಕ್ರಾಂತಿಕಾರಕ ಮೀಸಲಾತಿ ಕಾನೂನು. ಹಿಂದುಳಿದ ವರ್ಗವೆಂಬ ಪರಿಕಲ್ಪನೆ ಸೃಷ್ಟಿ ಯಾಗಿ ಆ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದರು.
ಸ್ವತಃ ಕೃಷಿಕರಾಗಿ ರೈತರ ಕಷ್ಟ ನಷ್ಟಗಳ ಬವಣೆಗಳ ಅರಿವಿದ್ದ ಕಾರಣದಿಂದ ಮುಂದೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗು ಹೆಚ್ಚು ಆದ್ಯತೆ ಕೊಟ್ಟರು.ಸಣ್ಣ ಸಣ್ಣ ಸಮುದಾಯಗಳ ಸಾಮಾಜಿಕ ಆರ್ಥಿಕ ಬದಲಾವಣೆಗೆ ನಾಂದಿ ಹಾಡಿದರು.ಆ ಮೂಲಕ ಸಾಮಾಜಿಕ ನ್ಯಾಯ ಎಂಬ ಪದಕ್ಕೆ ಮೌಲ್ಯ ತಂದುಕೊಟ್ಟರು.
ಇದನ್ನೂ ಓದಿ: ಜನಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಹಿಂದುಳಿದ ವರ್ಗಗಳ ಧ್ವನಿಯಾಗಿ ಆ ಸಮುದಾಯಗಳ ಚಾಂಪಿಯನ್ ಆಗಿ ರೂಫುಗೊಂಡರು.ನಾಡಿನ ಕಲೆ ಸಾಹಿತ್ಯ ಸಂಸೃತಿಗೂ ಒತ್ತಾಸೆಯಾಗಿದ್ದ ಅರಸುರವರು ಸುಸಂಸ್ಕತ ಮನೋಭಾವ ಹೊಂದಿದ್ದರು ಎಂದು ಡಾ ವೈ ಡಿ ರಾಜಣ್ಣ ಸ್ಮರಿಸಿದರು. ಈ ಸಂದರ್ಭದಲ್ಲಿ. ಕ.ಸಾ.ಪ.ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ , ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ , ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್ , ಅರಸು ಮಂಡಳಿ ಅಧ್ಯಕ್ಷರಾದ ಹೆಚ್.ಎಂ.ಟಿ.ಲಿಂಗರಾಜೆ ಅರಸ್, ದಲಿತ ಸಂಘಟನೆಗಳ ಒಕ್ಕೂಟ ಸಂಚಾಲಕರಾದ ಪಿ.ರಾಜು , ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಕಮಲ ಅನಂತರಾಮು ಹಾಗೂ ಉಪಾಧ್ಯಕ್ಷ ವಿಜೇಂದ್ರರಾಜೆ ಅರಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಗಿಡಮರಗಳಿಲ್ಲದಿದ್ದರೆ ಆಮ್ಲಜನಕವಿಲ್ಲದೇ ಜೀವಿಗಳು ಬದುಕಿರಲಾರವು: ಮಲ್ಲೇಶಿ ಮೋಹಿತೆ