ಶಹಾಬಾದ: ನಗರದ ವಾರ್ಡ ನಂ. ೧೬ ರ ಅಶೋಕ ನಗರದಲ್ಲಿ ಬರುವ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಜಾಲಿ ಕಂಟಿ ಗಿಡಗಳು ಬೆಳೆದು ಶೌಚಾಲಯ ಕಾಣದಂತಾಗಿದೆ.ಇದರಿಂದ ಇಲ್ಲಿನ ಜನರ ಉಪಯೋಗಕ್ಕೆ ಬಾರದಂತಾಗಿ ಸ್ಥಳೀಯ ತೊಂದರೆಯಾಗುತ್ತಿದೆ.
ಇದನ್ನೂ ಓದಿ: ಒಟ್ಟಾಗಿ ಸೇರಿ ಪತ್ರಕರ್ತರ ಸಂಘವನ್ನು ಮುನ್ನಡೆಸಿಕೊಂಡು ಹೋಗಿ: ಯಡ್ರಾಮಿ
ನಗರಸಭೆಯ ಎಸ್‌ಎಫ್‌ಸಿ ಅನುದಾನ(ಮುಕ್ತನಿಧಿ) ೨೦೦೭-೦೮ ರಲ್ಲಿ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯದ ಸುತ್ತಲೂ ಕಟ್ಟಡದೆತ್ತರಕ್ಕೆ ಜಾಲಿಗಿಡಗಳು ಬೆಳೆದಿದೆ.ಇದರಿಂದ ಶೌಚಾಲಯದ ಒಳಗಡೆ ಹೋಗಲಾರದ ಪರಿಸ್ಥಿತಿ ಮೂಡಿದೆ. ಶೌಚಾಲಯದ ಗೋಡೆಗಳು ಬಿರುಕು ಬಿಟ್ಟಿವೆ.ಹಲವು ವರ್ಷಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬುವುದು ಸ್ಥಳೀಯ ಜನರ ಗೋಳಾಗಿದೆ.ಶೌಚಾಲಯ ಸಂಪೂರ್ಣ ಹಾಳಾಗಿ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.ಹಂದಿಗಳ ವಾಸಸ್ಥಾನವಾಗಿದೆ.
ಇದನ್ನೂ ಓದಿ: ಊಟ ಬೇಡಿದ ತಪ್ಪಿಗೆ ಮಗಳ ಬೆರಳಿಗೆ ಬರೆಯಿಟ್ಟಳು ಮಲತಾಯಿ!
ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಇಲ್ಲಿನ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಅಲ್ಲದೇ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನೀರಿನ ವ್ಯವಸ್ಥೆಯೂ ಮಾಡಿಲ್ಲ.ಕೂಡಲೇ ಅಧಿಕಾರಿಗಳು ಶೌಚಾಲಯವನ್ನು ಸ್ವಚ್ಛಗೊಳಿಸಬೇಕು.ನೀರಿನ ವ್ಯವಸ್ಥೆ ಮಾಡಬೇಕು.ಬಿರುಕು ಬಿಟ್ಟಿರುವ ಗೋಡೆಗಳನ್ನು ಸರಿಪಡಿಸಬೇಕು.ಅಲ್ಲದೇ ಸಂಪೂರ್ಣ ನವೀಕರಣಗೊಳಿಸಿ ಇಲ್ಲಿನ ಜನರಿಗೆ ಉಪಯೋಗವಾಗುವಂತೆ ಅನುಕೂಲಮಾಡಿಕೊಡಬೇಕೆಂದು ನಗರಸಭೆಯ ಸದಸ್ಯ ಅವಿನಾಶ ಕಂಬಾನೂರ ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…