ಒಟ್ಟಾಗಿ ಸೇರಿ ಪತ್ರಕರ್ತರ ಸಂಘವನ್ನು ಮುನ್ನಡೆಸಿಕೊಂಡು ಹೋಗಿ: ಯಡ್ರಾಮಿ

1
45

ಶಹಾಬಾದ: ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಒಟ್ಟಾಗಿ ಸೇರಿ ಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ತಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು.
ಅವರು ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಾ ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಘದ ನೂತನ ಅಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು.ಅಲ್ಲದೇ ಹಿರಿಯರ ಮಾರ್ಗದರ್ಶನ ಪಡೆದು ಸಂಘವನ್ನು ಮುನ್ನಡೆಸಬೇಕು.ಕೇವಲ ವರದಿ ಮಾಡುವುದೇ ನಮ್ಮ ಕೆಲಸವಾಗದೇ ಸಂಘದ ಮೂಲಕ ಹೊಸ ಹೊಸ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಗರಿಕರ ಸಮಸ್ಯೆ ಹಾಗೂ ಜಾಗೃತಿ ಮೂಡಿಸು ಕೆಲಸಕ್ಕೆ ಅಣಿಯಾಗಬೇಕೆಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಊಟ ಬೇಡಿದ ತಪ್ಪಿಗೆ ಮಗಳ ಬೆರಳಿಗೆ ಬರೆಯಿಟ್ಟಳು ಮಲತಾಯಿ!

ರಾಜ್ಯ ಕಾರ್ಯಕಾರಿಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ ಹಾಗೂ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಡಿಗೇರ್ ಮಾತನಾಡಿ,ಪತ್ರಕರ್ತರ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತ ಸದಸ್ಯರಿಗೆ ಹಲವಾರು ಸಮಸ್ಯೆಗಳಿವೆ. ಹಿರಿಯರ ಪತ್ರಕರ್ತರ ಮಾರ್ಗದರ್ಶನದಲ್ಲಿ ಹೆಲ್ತ್ ಕಾರ್ಡ್ ಜೀವವಿಮೆ ಬಸ್ ಪಾಸ್ ಕೊಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಕಾರ್ಯನಿರತ ಪತ್ರಕರ್ತರ ಸಂಘ ಎಲ್ಲ ಪತ್ರಕರ್ತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷರಾದ ದೇವಿಂದ್ರಪ್ಪ ಅವಂಟಿ ಜಿಲ್ಲಾ ಕಾರ್ಯದರ್ಶಿ ವೀರೇಂದ್ರ ಕೊಲ್ಲೂರ್,ಜಿಲ್ಲಾ ಕಾರ್ಯಕಾರಣಿ ಸದಸ್ಯ ವಾಸುದೇವ ಚವ್ಹಾಣ, ಪತ್ರಕರ್ತ ಸಂಘದ ಅಧ್ಯಕ್ಷ ರಘುವೀರಸಿಂಗ ಠಾಕೂರ , ರಮೇಶ ಭಟ್, ದಾಮೋದರ ಭಟ್, ಲೋಹಿತ್ ಕಟ್ಟಿ, ಶಿವಕುಮಾರ ಕುಸಾಳೆ, ಶ್ರೀಪಾದ ಭಟ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ಸರ್ಕಾರದ ವಜಾಕ್ಕೆ ಬಿಎಸ್‌ಪಿ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here