ಬಿಸಿ ಬಿಸಿ ಸುದ್ದಿ

ಬದುಕಿನ ತಲ್ಲಣಗಳಿಗೆ ಕಾವ್ಯ ಮಿಡಿಯಬೇಕು : ರಾಮೇಶ್ವರ

ಕಲಬುರಗಿ : ಇಂದಿನ ಸಾಮಾಜಿಕ ಆಗು ಹೋಗುಗಳ ಮೇಲೆ ಹಾಗೂ ಬದುಕಿನ ತಲ್ಲಣಗಳಿಗೆ ಕಾವ್ಯ ಮಿಡಿಯಬೇಕು ಎಂದು ಮಕ್ಕಳ ಹಿರಿಯ ಸಾಹಿತಿ ಏ ಕೆ ರಾಮೇಶ್ವರ ಹೇಳಿದರು.

ನಗರದ ರಿಂಗ್ ರಸ್ತೆಯ ಮಂಥನ ಸಭಾ ಭವನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಲಿತಾ ಕಲಾ ಅಕಾಡೆಮಿಯ ಸದಸ್ಯ ಬಸವರಾಜ ಉಪ್ಪಿನ ಅವರ ೫೦ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: ಆಮೆ ಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ನಿಲ್ಲದ ವಾಹನ ಸವಾರರ ಪರದಾಟ

ಸಂಕಷ್ಟ ಜೀವನದಲ್ಲಿ ಎದುರಾಗುವ ಸಮಸ್ಯೆ ಮತ್ತು ಸವಾಲುಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಕಾವ್ಯದಲ್ಲಿರಬೇಕು. ನಮ್ಮ ಜೀವನ ಪ್ರೀತಿಯನ್ನು ಸವಿ ಜೇನಿನಂತೆ ಸವಿದು ಸಾರ್ಥಕ ಜೀವನ ನಡೆಸುವ ಉಪ್ಪಿನ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿ ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಅವರು, ರಾಷ್ಟ್ರದ ಹೆಸರಾಂತ ಕಲಾವಿದರಾದ ಬಸವರಾಜ ಉಪ್ಪಿನ ಅವರು ಅಪರೂಪದ ವ್ಯಕ್ತಿತ್ವ ಹೊಂದಿದವರು. ನಾಡು ಹೆಮ್ಮೆ ಪಡುವಂತ ಸಾಧಕರಾಗಿದ್ದಾರೆ. ಅವರ ಸಾಧನೆಯ ಮೇರು ವ್ಯಕಿತ್ವವನ್ನು ಕಾವ್ಯದ ಮುಂಚನದಲ್ಲಿ ಕವಿಗಳು ಕಟ್ಟಿ ಕೊಟ್ಟಿರುವುದು ಸ್ತುತ್ಯಾರ್ಹ ಎಂದರು.

ಇದನ್ನೂ ಓದಿ: ಗಾಯಾಳು ಯೋಧನ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸಿ: ವಡಗಾಂವ

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅವರು, ಕವಿ ಮನಸ್ಸುಗಳು ಜನ ಸಾಮಾನ್ಯರ ಬದುಕು ಭವಣೆಗಳ ಮೇಲೆ ಸಾಹಿತ್ಯ ಮೂಲಕ ಬೆಳಕು ಚೆಲ್ಲಬೇಕು ಮತ್ತು ವಾಸ್ತವತೆ ನೆಲೆಯಲ್ಲಿ ಕಟ್ಟಿಕೊಟ್ಟ ಕಾವ್ಯ ಬಹು ಕಾಲ ನಮ್ಮ ಮಧ್ಯೆ ಉಳಿಯಬಹುದಾಗಿದೆ ಎಂದು ಹೇಳಿದರು. ಖ್ಯಾತ ಕಲಾವಿದ ಜೆ ಎಸ್ ಖಂಡೇರಾವ ಮಾತನಾಡಿದರು.

ಬಂಡಾಯ ಸಾಹಿತಿ ಭೀಮಣ್ಣ ಬೋನಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುವರ್ಣ ವಾರ್ಷಿಕೋತ್ಸವ ಆಚರಿಸಿಕೊಂಡ ಬಸವರಾಜ ಉಪ್ಪಿನ ಹಾಗೂ ಧರ್ಮಪತ್ನಿ ಮಹಾದೇವಿ ಅವರಿಗೆ ಅಭಿಮಾನಿಗಳು ಸತ್ಕರಿಸಿದರು. ಉಪ್ಪಿನ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊಡುಗೆ ಅಪಾರ: ದೇಶಮುಖ

ಕವಿಗಳಾದ ಡಾ. ವಿಶಾಲಾಕ್ಷೀ ಕರಡ್ಡಿ, ನರಸಿಂಗರಾವ ಹೆಮನೂರ, ಸಿ ಎಸ್ ಮಾಲಿ ಪಾಟೀಲ, ಧರ್ಮಣ್ಣ ಎಚ್ ಧನ್ನಿ, ಡಾ. ರಾಜಶೇಖರ ಮಾಂಗ್, ರೇಣುಕಾ ಡಾಂಗೆ, ನಾರಯಣರಾವ ಕುಲಕರ್ಣಿ, ಡಾ. ಗಿರಿಮಲ್ಲ, ಫರ್ವಿನ ಸುಲ್ತಾನಾ, ಸಾವಿತ್ರಿ ಉಪ್ಪಿನ ಹಾಗೂ ಇತರ ಕವಿಗಳು ಭಾಗವಹಿಸಿದರು. ಶಿಕ್ಷಕಿ ಶಿವಲೀಲಾ ಹೊಟ್ಟೆ ಅವರು ನಿರೂಪಿಸಿ ವಂದಿಸಿದರು.

ಇದನ್ನೂ ಓದಿ: ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago