ಆಮೆ ಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ನಿಲ್ಲದ ವಾಹನ ಸವಾರರ ಪರದಾಟ

1
44
  • ರಾಜು ವ್ಹಿ ಮುದ್ದಡಗಿ

ಜೇವರ್ಗಿ:- ಇಲ್ಲಿನ ಪಟ್ಟಣದ ಮಧ್ಯದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ರಸ್ತೆ ಅಗೆದು ನೂತನವಾಗಿ ಸಿ.ಸಿ ರಸ್ತೆ ಕಾಮಗಾರಿ ಆರಂಭವಾಗಿದೆ. ಆಮೆಗತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ .ಇದರಿಂದ ವಾಹನ ಸವಾರರಿಗೆ, ಪ್ರಯಾಣಿಕರಿಗೆ ,ಬೀದಿ ಬದಿ ವ್ಯಾಪಾರಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.

ಜೇವರ್ಗಿ ನಗರದಲ್ಲಿ ರೂ 17 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿ. ಸಿ ಕೆಲಸ ಪಡೆದ ಗುತ್ತಿಗೆದಾರರು ಕಾಮಗಾರಿ ಬೇಗನೆ ಮಾಡಿ ಮುಗಿಸದೆ ಉದಾಸೀನತೆ ತೋರುತ್ತಿದ್ದಾರೆ. ಇದರಿಂದಾಗಿ ಪಟ್ಟಣದಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಿರಿ-ಕಿರಿ ಉಂಟಾಗಿದೆ.

Contact Your\'s Advertisement; 9902492681

ಇದನ್ನೂ ಓದಿ: ಗಾಯಾಳು ಯೋಧನ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸಿ: ವಡಗಾಂವ

ಜೇವರ್ಗಿ ಶಾಸಕರು ಡಾ. ಅಜಯಸಿಂಗ್ ರವರು ವಿಶೇಷ ಕಾಳಜಿವಹಿಸಿ 2019-20 ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಅಡಿಯಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

ರದ್ದೇವಾಡಗಿ ಪೆಟ್ರೋಲ್ ಪಂಪ್ ದಿಂದ ಬಸವೇಶ್ವರ ವೃತ್ತದ ಅಗ್ನಿಶಾಮಕ ಠಾಣೆಯ ವರೆಗೂ ಸಿ.ಸಿ ರಸ್ತೆ, ಸಿ.ಸಿ ಚರಂಡಿ ,ಡಿವೈಡರ ,ಫುಟ್ಪಾತ್ ಬೀದಿಬದಿ ದೀಪದ ಕಂಬಗಳು, ಬಸವೇಶ್ವರ  ವೃತ್ತದಿಂದ ಅಗ್ನಿಶಾಮಕ ಕಛೇರಿವರೆಗೆ. ಹಾಗೂ ಬಸವೇಶ್ವರ ವೃತ್ತದ ಜೇವರ್ಗಿ (ಕೆ )ಹತ್ತಿರ ಬ್ರಿಡ್ಜ್ ವರೆಗೆ ಡಾಂಬರ್ ರಸ್ತೆ ಡಿವೈಡರ್, ಸಿ.ಸಿ ಚರಂಡಿ ,ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಶಾಸಕರು ಅಡಿಗಲ್ಲು ಹಾಕಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಸಂಪೂರ್ಣ ಬೇಸಿಗೆ ಕಳೆದಮೇಲೆ ಮಳೆಗಾಲದ ಆರಂಭಕ್ಕೆ ಕೆಲಸ ಪ್ರಾರಂಭ ಮಾಡಿದ್ದಾರೆ ಇದರಿಂದಾಗಿ  ಅತಿಯಾಗಿ ಮಳೆ ಸುರಿದು ನೀರಿನ ಹರಿವು ಬಂದರೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗುತ್ತದೆ. ನಿರ್ಮಾಣ ಕಾಮಗಾರಿ ಉದ್ದೇಶಿತ ರೀತಿಯಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗದೆ ಹಣ ವ್ಯಯವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮಳೆಗಾಲದಲ್ಲಿ ಕೆಲಸ ಚಾಲೂ ಮಾಡಿದರೆ ಕಾಮಗಾರಿ ಹಾಳಾಗಿ ಹಳ್ಳ ಹಿಡಿಯುತ್ತದೆ ಅದೇನು ಗಟ್ಟಿಯಾಗುತ್ತಾ ?  ತಾಳಿಕೆ ಮತ್ತು ಬಾಳಿಕೆ ಬರುತ್ತಾ ? ಎನ್ನುವುದು ಜನರ ಪ್ರಶ್ನೆ. ಇದಕ್ಕೆ ನಮ್ಮ ಶಾಸಕರು ಹಾಗೂ ಅಧಿಕಾರಿಗಳು ಏನನ್ನುತ್ತಾರೆ ಎನ್ನುವುದು ಕಾದುನೋಡಬೇಕಿದೆ.

ಇದನ್ನೂ ಓದಿ: ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ

ಟ್ರಾಫಿಕ್ ಜಾಮ್ ಕಿರಿಕಿರಿ 12 ವಾಹನಗಳ ಸಂಚಾರ ರಸ್ತೆ ಬದಿಯ ವ್ಯಾಪಾರಿಗಳ ಅಡಚಣೆಯಿಂದಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದೆ ಆದರೆ ಗುತ್ತಿಗೆದಾರರು ಕೆಲಸ ಬೇಗನೇ ಮಾಡಿ ಮುಗಿಸದೆ ಸುಮ್ಮನೆ ಕಾಲ ಹರಣ ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಶಾಸಕರಾದ ಡಾ. ಅಜಯಸಿಂಗರವರು ಕಾಮಗಾರಿ ಬೇಗನೆ ಮಾಡಿ ಮುಗಿಸುವಂತೆ ನಿರ್ದೇಶನ ಮಾಡಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಇದನ್ನೂ ಓದಿ: ಒಟ್ಟಾಗಿ ಸೇರಿ ಪತ್ರಕರ್ತರ ಸಂಘವನ್ನು ಮುನ್ನಡೆಸಿಕೊಂಡು ಹೋಗಿ: ಯಡ್ರಾಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here