ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಪತಂಜಲಿ ಯೋಗ ಪೀಠ ವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ರಾವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗ್ರಾಮದಲ್ಲಿ ಹಮ್ಮಿಕೊಂಡ ನಮ್ಮ ನಡಿಗೆ ಯೋಗದ ಕಡೆಗೆ ಎಂಬ ವಿನೂತನ ಜಾಗೃತಿ ಜಾಥಾಕ್ಕೆ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಡ್ರಮ್ ಬಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಲಿಂಗ ದೇವರು ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ ಹಾಗೆ ಆತಂರಿಕ ಸೌಂದರ್ಯ ಕೂಡ ಅಷ್ಟೇ ಮುಖ್ಯ ಪ್ರತಿದಿನವೂ ಮನುಷ್ಯನ ಜೀವನದಲ್ಲಿ ಯೋಗ ವ್ಯಾಯಾಮ ಪ್ರಾಣಾಯಾಮಗಳು ಅವಶ್ಯಕ ಇವು ನಮ್ಮ ದೇಹ ಮತ್ತು ಮನಸ್ಸನ್ನು ಸದೃಢ ಮಾಡುತ್ತವೆ. ಈಗಿನ ಒಂದು ಆಧುನಿಕ ಜೀವನಶೈಲಿಯ ಒತ್ತಡದ ಬದುಕಿಗೆ ಯೋಗ ತುಂಬಾ ಅನಿವಾರ್ಯವಾಗಿರುವುರಿಂದ ನಾವು ದಿನಾಲು ಯೋಗಕ್ಕೆ ಮೂರೆಹೋಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಚಾಲನೆ
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ ಇಂದಿನ ಬಹುತೇಕ ಯುವ ಜನಾಂಗ ಔಷಧಿಗಳನ್ನು ಆಶ್ರಯಿಸಿದ್ದಾರೆ, ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಒತ್ತಡ ಹಾಗೂ ಬಹು ಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು ಹಾಗೆ ಇಂದಿನ ವಿದ್ಯಾರ್ಥಿಗಳು ಸಹ ವಿದ್ಯಾಭ್ಯಾಸದ ಭಯದಿಂದ ಅನೇಕ ದೈಹಿಕ-ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದು ಇದರ ಪರಿಹಾರಕ್ಕೆ ಯೋಗ ಪರಿಣಾಮಕಾರಿಯಾಗಿದೆ.
ಯೋಗ ಬಲ್ಲವನಿಗೆ ರೋಗ ಇಲ್ಲ ಅದಕ್ಕಾಗಿ ಎಲ್ಲಾ ವಯಸ್ಸಿನವರು ಯೋಗ ವನ್ನು ತಮ್ಮ ಜೀವನದ ಭಾಗವನ್ನಾಗಿ ಸಬೇಕು. ಪುರಾತನ ಇತಿಹಾಸವಿರುವ ನಮ್ಮ ಯೋಗ ಇಡೀ ವಿಶ್ವದಲ್ಲೇ ಮಾನ್ಯತೆ ಪಡೆದು ಜೂನ್ 21ರಂದು ಸುಮಾರು ಎರಡು ನೂರು ದೇಶಗಳಿಗಿಂತ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಇದು ನಮ್ಮ ದೇಶದ ಹೆಗ್ಗಳಿಕೆ ಯನ್ನು ಇನ್ನೂ ಹೆಚ್ಚಿಸಿದಂತಾಗಿದೆ ಎಂದರು.
ಇದನ್ನೂ ಓದಿ: ಔಷಧ ವ್ಯಾಪಾರಿಗಳ ನೌಕರರ ಸಂಘದ ಕಚೇರಿ ಉದ್ಘಾಟನೆ
ಯೋಗ ಸಂಯೋಜಕ ಸಿದ್ದಲಿಂಗ ಬಾಳಿ,ಯೋಗಾಸಕ್ತರಾದ ವೀರುಪಾಕ್ಷಯ್ಯ ಮಠಪತಿ, ಶಿವಕುಮಾರ ಸರಡಗಿ,ಈಶ್ವರ ಗೌಡ ಪಾಟೀಲ್, ಸೋಮಶೇಖರ ಬಾಳಿ,ಮಹೇಶ ಬಾಳಿ, ಅಶೋಕ ವಗ್ಗರ,ಈರಣ್ಣ ಕಲ್ಯಾಣಿ, ಶಾಂತು ಬಾಳಿ,ಸಂಗಮೇಶ ಪೂಜಾರಿ, ಅವಿನಾಶ ಅರಳ್ಳಿ ಸೇರಿದಂತೆ ಸಂಸ್ಥೆಯ ಮಕ್ಕಳು ಹಾಗೂ ಗ್ರಾಮಸ್ಥರು,ಗ್ರಾಮದ ಮುಖ್ಯ ರಸ್ತೆಗಳಲ್ಲಿ ಯೋಗ ದ ಜಯ ಘೋಷದ ಜಾಥದಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…