ಬಿಸಿ ಬಿಸಿ ಸುದ್ದಿ

ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಿಸಲು ಜೆಡಿಎಸ್ ಒತ್ತಾಯ

ಶಹಾಬಾದ:ನಗರಸಭೆಯಲ್ಲಿ ಪ್ರಭಾರ ಪೌರಾಯುಕ್ತರ ಬದಲಿಗೆ ಖಾಯಂ ಪೌರಾಯುಕ್ತರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಮಂಗಳವಾರ ಜೆಡಿಎಸ್ ವತಿಯಿಂದ ನಗರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್ ಮಾತನಾಡಿ, ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸದ ಕಾರಣ ಪ್ರಭಾರ ಪೌರಾಯುಕ್ತರಾಗಿ ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಹೆಬ್ಬಾಳ ಅವರನ್ನು ನಿಯೋಜಿಸಲಾಗಿದೆ.

ಕಳೆದ ಎರಡು ತಿಂಗಳಿನಿಂದ ಅವರು ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರತಿದಿನ ನಗರಸಭೆಗೆ ಬರುತ್ತಿಲ್ಲ.ಇದರಿಂದಾಗಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸಾರ್ವಜನಿಕರ ಕೆಲಸ ಗಳು ಸಮಯಕ್ಕೆ ಸರಿಯಾಗಿ ಆಗದ ಕಾರಣ ಸಾರ್ವಜನಿಕರು ಪ್ರತಿದಿನ ಪರದಾಡುತ್ತಿದ್ದಾರೆ.ಆದ್ದರಿಂದ ಕೂಡಲೇ ಪ್ರಭಾರ ಪೌರಾಯುಕ್ತರನ್ನು ಬದಲಾಯಿಸಿ ಖಾಯಂ ಆಗಿ ನಿಯೋಜಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಯುವ ಘಟಕ ಅಧ್ಯಕ್ಷ ಮಹ್ಮದ್ ಅಲಿಂ ಇನಾಮದಾರ್ ಮಾತನಾಡಿ, ನಗರಸಭೆಯಲ್ಲಿ ಖಾಯಂ ಪೌರಾಯುಕ್ತರಿಗೆ ನೇಮಕ ಮಾಡಿದರೇ ಸಾರ್ವಜನಿಕರ ಕೆಲಸಗಳು ಸರಳವಾಗಿ ಆಗುತ್ತವೆ.ಆದರೆ ಇಲ್ಲಿನ ಸ್ಥಳೀಯ ಶಾಸಕರು ಖಾಯಂ ಪೌರಾಯುಕ್ತರನ್ನು ನೇಮಿಸದೇ ತಮ್ಮ ಸಂಬಂಧಿಕ ಬಸವರಾಜ ಹೆಬ್ಬಾಳ ಅವರನ್ನು ಪ್ರಭಾರಿ ಪೌರಾಯುಕ್ತರನ್ನಾಗಿ ಮಾಡಿದ್ದಾರೆ. ಪ್ರಭಾರಿ ಪೌರಾಯುಕ್ತ ಕಳೆದ ಎರಡು ತಿಂಗಳಿನಿಂದ ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಎಂಬುದು ನಗರಸಭೆಯ ಅಧ್ಯಕ್ಷರಿಗೂ ಗೊತ್ತಾಗುತ್ತಿಲ್ಲ.ಇನ್ನೂ ಜನಸಾಮನ್ಯರ ಗತಿ ಹೇಗಾಗಿರಬಹುದು ಎಂದು ಊಹಿಸಿಕೊಳ್ಳಬಹುದು.

ಅಲ್ಲದೇ ವಾರ್ಡ ನಂ.೨೩ ರಲ್ಲಿ ಕಳಪೆ ಕಾಮಗಾರಿಗಳಾಗಿವೆ.ಹಣವಿಲ್ಲದೇ ಖಾತಾ ಹಾಗೂ ಮುಟೇಷನ್ ತೆಗೆದುಕೊಳ್ಳುವಂತಿಲ್ಲ. ನಗರಸಭೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.ಆಡಳಿತ ಸಂಪರ್ಣ ಕುಸಿದು ಹೋಗಿದೆ.ಆದ್ದರಿಂದ ಕೂಡಲೇ ಶಾಸಕರು ಸಂಬಂಧಿಕರನ್ನು ತೆಗೆದು ಖಾಯಂ ಪೌರಾಯುಕ್ತರನ್ನು ನೇಮಿಸಬೇಕು. ಒಂದು ವೇಳೆ ಸ್ಪಂದಿಸದಿದ್ದರೆ ಶಾಸಕರ ಮನೆ ಮುಂದೆ ಮತ್ತು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು ಎಂದರು.

ನಂತರ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜೆಡಿಎಸ್ ಅಧ್ಯಕ್ಷ ರಾಜಮಹ್ಮದ ರಾಜಾ, ಮಹಾ ಪ್ರಧಾನಕಾರ್ಯದರ್ಶಿ ಬಸವರಾಜ ಮಯೂರ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನ ಸಂಗಾಣಿ,ಮಲ್ಲಿಕಾರ್ಜುನ ಹಳ್ಳಿ, ನಗರ ಸಭೆ ಸದಸ್ಯ ಅಮ್ಜದ್ ಹುಸೇನ್, ಶ್ರೀನಿವಾಸ ಜಮಾದಾರ, ಸುಭಾಷ ಸಾಕರೆ, ಸುನೀಲ ಚವ್ಹಾಣ, ವಿಜಯಲಕ್ಷ್ಮಿ ಬಂಗರಗಿ, ರಿಯಾಜ್ ಜಮಾದಾರ, ವೆಂಕಟೇಶ ದಂಡಗುಲಕರ, ಮೈಲಾರಿ ದಿವಾಕರ, ಯೂಸುಫ್ ಸಾಹೇಬ್, ಬಸವರಾಜ ದಂಡಗುಳಕರ, ಅ.ಜಬ್ಬಾರ, ಶ್ರೀಧರ ಕೊಲ್ಲೂರ, ಮಹ್ಮದ್ ಚಾಂದ ವಾಹೀದಿ,ಉಬೆದುಲ್ಲಾ, ಅಬ್ದುಲ ರಶೀದ್, ಹೀರಾ ಪವಾರ್, ಹನುಮಾನ ಕಾಂಬಳೆ, ಮಹೇಬೂಬ ಗೋಗಿ, ಸುನೀಲ ಸುರ್ಯವಂಶಿ,ಮಹ್ಮದ್ ಅಜರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

emedialine

Recent Posts

ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ…

4 mins ago

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…

7 mins ago

ನಿಧನ ವಾರ್ತೆ: ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್

ಚಿಂಚೋಳಿ: ತಾಲೂಕಿನ‌ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…

11 mins ago

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

5 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

16 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago