ಬಿಸಿ ಬಿಸಿ ಸುದ್ದಿ

ನುಶಿಯ ಕಾಟದಿಂದ ಬೇಸತ್ತ ಹೀರಾಪೂರ ಜನರಿಂದ ಪ್ರತಿಭಟನೆ

ಕಲಬುರಗಿ: ನಗರದ ಹೀರಾಪೂರ ಕೇಂದ್ರ ಉಗ್ರಾಣದಿಂದ ಹೋರ ಬರುತ್ತಿರುವ ನುಶಿ(ಹುಳಗಳು) ಪೀಡಣೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೀರಾಪೂರ ಕೆ.ಎಸ್.ಆರ್.ಟಿ.ಸಿ ನಾಗರೀಕರಿಂದ ಪ್ರತಿಭಟಿಸಲಾಯಿತು.

ಪ್ರತಿಸಲ ಮಳೆಗಾಲ ಬಂತೆದಂರೆ ಉಗ್ರಾಣದಲ್ಲಿರುವ ಆಹಾರ ಧಾನ್ಯಗಳಿಂದ ನುಶಿಗಳು ಉತ್ಪತಿಯಾಗಿ ಸುತ್ತಮುತ್ತಲಿನ ಮನೆಗಳಲ್ಲಿ ಹಾರಿ ಬಂದು ಮನೆಯಲ್ಲಿರುವ ಆಹಾರ ಧಾನ್ಯಗಳಲ್ಲಿ, ಕುಡಿಯುವ ನೀರಿನಲ್ಲಿ, ಹಿಟ್ಟುಗಳಲ್ಲಿ, ಮಲಗುವ ಹಾಸಿಗೆ ಹಾಗೂ ಬಟ್ಟೆಗಳಲ್ಲಿ, ಊಟಮಾಡುವ-ಊಟದ ತಟ್ಟೆಯಲ್ಲಿ, ಏಲ್ಲೇದಂರಲ್ಲಿ ಹಾರಿ ಬಂದು ಕಾಟ ನೀಡುತ್ತಿವೆ. ರಾತ್ರಿ ಮಲುಗುವ ಸಮಯದಲ್ಲಿ ಹಾಸಿಗೆಯಲ್ಲಿ ಬಂದು ಶರೀರದ ಇತರೆ ಭಾಗದಲ್ಲಿ ಬಂದು ಓಡಾಡುತ್ತವೆ. ಮನೆಯಲ್ಲಿ ಅವುಗಳನ್ನು ಕಸ ಬಾರಿಗೆಯಿಂದ ಬಳಿದು ಹೊರಗೆ ಹಾಕುವುದಕ್ಕೆ ಹರ ಸಾಹಸವೇ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯನ ಕಣ್ಣಿನಲ್ಲಿ ಬಿತ್ತೆಂದರೆ ಖಾರದ ಪುಡಿ ಬಿದ್ದಹಾಗೆ ಆಗುತದೆ. ಮಕ್ಕಳ ಕಣ್ಣಿನಲ್ಲಿ ಬಿದ್ದು ಮಕ್ಕಳ ಕಣ್ಣುಗಳು ಉದ್ದಿಕೊಂಡಿರುವ ಪ್ರಸಂಗಳು ನಡೆದಿವೆಎಂದು ಪ್ರತಿಭಟನಕಾರರು ತಿಳಿಸಿದರು.

ಮಕ್ಕಳ ಕಿವಿಯಲ್ಲಿ ಹೋದರುಕೂಡ ಗೊತ್ತಾಗದೆ ಮಕ್ಕಳು ವೀಪರಿತವಾಗಿ ಅಳುವುದಕ್ಕೆ ಪ್ರಾರಂಭಿಸುತ್ತವೆ ಇದರಿಂದ ಎಲ್ಲಾ ವಯೋಮಾನದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ, ಮನೆಯಲ್ಲಿ ಅಡುಗೆ ಮಾಡುವ ಸಮಯದಲ್ಲಿಯು ಕೂಡ ಆಹಾರ ಪದಾರ್ಥಗಳಿಂದ ನುಶಿಗಳನ್ನು ಬೇರ್ಪಡಿಸಲು ತೊಂದರೆಯಾಗುತ್ತಿದೆ. ಪ್ರತಿ ಮಳೆಗಾಲದ ಸಮಯದಲ್ಲಿ ಕೇಂದ್ರ ಉಗ್ರಾಣದ ಅಧಿಕಾರಿಗಳಿಗೆ ನುಶಿಗಳು, ಉಗ್ರಾಣದಿಂದ ಹೋರಬರದ ಹಾಗೆ ಮುಂಜಾಗೃತ ಕ್ರಮ ಕೈಗೋಳ್ಳುವಂತೆ ತಿಳಿಸಿದರು ಕೂಡ ಕ್ರಮಕೈಗೊಳ್ಳದ ಅಧಿಕಾರಿಗಳಿಂದ ನುಶಿಗಳು ಉಗ್ರಾಣದಿಂದ ಹೋರಬಂದು ಸುತ್ತಮುತ್ತಲಿನಲ್ಲಿ ವಾಸಿಸುತ್ತಿರುವ ಜನರಿಗೆ ಕಾಟನೀಡುತಿವೆ. ಇದರಿಂದ ಎಷ್ಟೇ ಜನರು ಮನೆ ಮಾರಿಕೊಂಡು ಬೇರೆಕಡೆ ಹೋಗಿರುವಂತ ಹಾಗೂ ಮಳೆಗಾಲದ ಸಂಧರ್ಭದಲ್ಲಿ ಬೇರೆ ಬಡಾವಣೆಯಲ್ಲಿ ಬಾಡಿಗೆ ಹೂಡಕಿಕೊಂಡು ಹೋಗುವಂತ ವಾತವರಣ ನಿರ್ಮಾಣವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಕೇಂದ್ರ ಉಗ್ರಾಣದಲ್ಲಿರುವ ಆಹಾರ ಧಾನ್ಯಗಳಿಂದ ನುಶಿಗಳು ಉತ್ಪತಿಯಾಗದ ಹಾಗೂ ಉತ್ಪತಿಯಾದರು ಕೂಡ ಅವುಗಳ ಹಾರಿ ಹೋರಗೆ ಹೋಗದ ಹಾಗೆ ಆಹಾರ ಧಾನ್ಯ ಸುತ್ತಮುತ್ತ ಕ್ಯಾಮಿಕಲ್ ಸಿಂಪಡಿಸಬೇಕು ಚೀಲಗಳ ಮೇಲೆ ಹೋಂದಿಕೆ ಮಾಡಬೇಕು, ಸಂಜೆಯಾದರೆ ಮರಕ್ಯೂರಿ ಲೈಟ್‌ಗಳನ್ನು ಹಾಕಿ ಅವುಗಳು ಹಾರಿಹೋಗದ ಹಾಗೆ ಬೆಳಕಿನ ವ್ಯವಸ್ಥೆ ಮಾಡಬೇಕು ಆದರೆ ಉಗ್ರಾಣದಲ್ಲಿರುವ ಅಧಿಕಾರಿಗಳು ಈ ರೀತಿ ಮುಜಾಗೃತ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ನುಶಿಗಳು ಉತ್ಪತ್ತಿಯಾಗಿ ಹಾರಿ ಬಂದು ಸುತ್ತಮುತ್ತಿಲ್ಲಿನಲ್ಲಿ ವಾಸಿಸುವ ಜನರಲ್ಲಿ ತೊಂದರೆಯಾಗುತ್ತಿದೆ. ಆದರಿಂದ ಕೂಡಲೇ ನುಶಿಗಳು ಉಗ್ರಾಣದಿಂದ ಹೋರಬರದಹಾಗೆ ಕ್ರಮ ಕೈಗೋಳ್ಳಬೇಕೆಂದು ಹೀರಾಪೂರ ಕೆ.ಎಸ್.ಆರ್.ಟಿ.ಸಿ ಬಡಾವಣೆಯ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಅಲ್ಲಿನ ನಾಗರಿಕರು ಹೀರಾಪೂರ ಕೇಂದ್ರ ಉಗ್ರಾಣದ ಕಛೇರಿ ಎದುರುಗಡೆ ಪ್ರತಿಭಟಿಸಲಾಯಿತು.

ಈ ಸಂಧರ್ಭದಲ್ಲಿ ಯುವ ಮುಖಂಡ ಸಂತೋಷ ಮೇಲ್ಮನಿ, ಸಂಘದ ಪ್ರ.ಕಾರ್ಯದರ್ಶಿ ಅಂಬಾದಾಸ ಗಾಜರೆ, ಮಹಿಳಾ ಅಧ್ಯಕ್ಷರಾದ ರೇಣುಕಾ ಸುಗಂದಿ, ಶ್ರೀಮತಿ ಜೈಲಕ್ಷ್ಮೀ, ಸುಭದ್ರಮ್ಮ ಸಜ್ಜನ, ಲಲಿತಾಬಾಯಿ ಕಾಂಬಳೆ, ಮಲ್ಲಮ್ಮ ಫರತಾಬಾದ, ಸಾಬಮ್ಮ ಕಾಂಬಳೆ, ಲಕ್ಷ್ಮೀಬಾಯಿ ತ್ರಿಮೂರ್ತಿ, ನಾರಾಯಣ ರಡ್ಡಿ, ಚಾಂದಪಾಶ, ನಾಗೇಶ ಚೂರಿ, ಭರತ ಸಾರಂಗ, ಸುರೇಶ ಪಾಟೀಲ, ಶ್ರೀಮಂತ ಹರಸೂರ, ಮಾಣಿಕಪ್ಪ ಮಹಾಗಾಂವ, ಮಹಾದೇವ ಪಾಟೀಲ ಸೇರಿದಂತೆ ಮುಂತಾದವರಿ ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

1 hour ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

1 hour ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

1 hour ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

1 hour ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

2 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420