ಹಳಕರ್ಟಿ ಶರೀಫ್ ದರ್ಗಾ ಉರುಸ್‌ಗೆ ಭಕ್ತಸಾಗರ

ವಾಡಿ: ಪಟ್ಟಣ ಸಮೀಪದ ಹಳಕರ್ಟಿ ಶರೀಫ್ ದರ್ಗ ಉರುಸ್‌ಗೆ ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದು ಬಂದಿದೆ. ಹಜರತ್ ಖ್ವಾಜಾ ಸೈಯ್ಯದ್ ಮೊಹ್ಮದ್ ಬಾದಶಹಾ ಖ್ವಾದ್ರೀ ದರ್ಗಾದ ೪೫ನೇ ಉರುಸ್ ಶುಭ ಶುಕ್ರವಾರ ಸಾಮೂಹಿಕ ನಮಾಜ್ ಮೂಲಕ ಆರಂಭಗೊಂಡಿತು. ಹೈದರಾಬಾದ್ ದಿಂದ ಎರಡು ಸಾವಿರ ಭಕ್ತರು ವಿಶೇಷ ರೈಲಿನಲ್ಲಿ ಸುಗಂಧ ದೃವ್ಯದ ಮೂಲಕ ಆಗಮಿಸಿ ಉರುಸ್ ಸಂಭ್ರಮ ಹೆಚ್ಚಿಸಿದರು.

ಪಟ್ಟಣದ ರೈಲು ನಿಲ್ದಾಣದಲ್ಲಿ ಸಂಧಲ್ ಆಮಿಸುತ್ತಿದ್ದ ವಿಶೇಷ ರೈಲನ್ನು ಸ್ವಾಗತಿಸಿದ ಹಳಕರ್ಟಿ ದರ್ಗಾದ ಹಜರತ್ ಖ್ವಾಜಾ ಸೈಯ್ಯದ್ ಅಬುತುರಾಬ ಶಹಾ ಖ್ವಾದ್ರಿ ಚಿಸ್ತಿ ಯಮನಿ ಬಂದಾನವಾಜ್ ತುರಾಬ ಖ್ವಾದೀರ್, ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ, ದಂದಗುಂಡದ ಶ್ರೀಸಂಗನಬಸವ ಸ್ವಾಮೀಜಿ ಹಾಗೂ ವಿವಿಧ ದರ್ಗಾಗಳ ಪೂಜ್ಯರು, ಸಂಧಲ್ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಕೋಮು ಸೌಹಾರ್ಧತೆ ಮೆರೆದರು.

ಇದಕ್ಕೂ ಮೊದಲು ಶುಕ್ರವಾರ ಹಳಕರ್ಟಿ ದರ್ಗಾ ಶರೀಫ್ ಸಮಾದಿಗೆ ಗುಲಾಬಿ ಹೂಗಳ ಅರ್ಪಣೆ, ಸುಗಂಧ ದೃವ್ಯ ಸಿಂಪರಣೆ, ಭಕ್ತಿಯ ಚಾದರ್ ಹೊದಿಕೆ ನೆರವೇರಿಸಿದ ಸಾವಿರಾರು ಜನ ಮುಸ್ಲಿಂ ಭಕ್ತರು, ವಿಶಾಲವಾದ ದರ್ಗ ಆವರಣದಲ್ಲಿ ಸಾಮೂಹಿಕವಾಗಿ ಉರುಸ್ ನಮಾಜ್ ಕೈಗೊಳ್ಳುವ ಮೂಲಕ ಸಂಪ್ರದಾಯ ಪೂರ್ಣಗೊಳಿಸಿದರು. ಮಹಾರಾಷ್ಟ್ರ, ಆಂದ್ರಾ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ದೇಶ ವಿದೇಶಗಳಲ್ಲಿ ವಾಸವಿದ್ದ ದರ್ಗಾ ಶರೀಫರ ಅನುಯಾಯಿಗಳು ಉರುಸ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಖವ್ವಾಲಿ ಗಾಯನ, ಕವಿತೆಗಳ ವಾಚನ, ಶೇರ್ ಶಾಯರಿ ಪಠಣ ಸೇರಿದಂತೆ ಪ್ರಾರ್ಥನೆ ಹಾಗೂ ಪ್ರವಚನಗಳು ನಡೆದವು. ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ನಿರಂತರವಾಗಿ ಭಕ್ತರ ಆಗಮನವಾಗಲಿದ್ದು, ಒಂದು ಲಕ್ಷ ಜನ ಅನುಯಾಯಿಗಳು ಶರೀಫರ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ. ಉರುಸ್‌ಗೆ ವಿಶೇಷವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮನರಂಜನಾ ತಾಣಗಳಲ್ಲಿ ಕಾವಲು ಕಾಯಲು ಖಾಸಗಿ ಸಿಬ್ಬಂದಿಗಳನ್ನು ಉರುಸ್ ಸಮಿತಿಯೇ ನೇಮಿಸಿದೆ. ಲಕ್ಷ ಜನರಿಗೆ ದಾಸೋಹ ಕಾರ್ಯ ನಡೆಯುತ್ತಿದೆ. ಹಿಂದೂ ಹಾಗೂ ಮುಸ್ಲಿಂ ಭಕ್ತರು ಬೇಧವಿಲ್ಲದೆ ಉರುಸ್‌ನಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

45 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

12 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

14 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

14 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420